Electric Scooter On Huge Discount: ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯತ್ತ ಜನರ ಆಕರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಈ ಹಿನ್ನೆಲೆ ಸ್ಟಾರ್ಟ್ಅಪ್ ಕಂಪನಿಯೊಂದು ಭರ್ಜರಿ ಕೊಡುಗೆಯೊಂದನ್ನು ಜಾರಿಗೊಳಿಸಿದೆ. ನೀವು ಸಹ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಯೋಜನೆ ರೂಪಿಸುತ್ತಿದ್ದು, 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಸ್ಕೂಟರ್ ಆಯ್ಕೆಗಾಗಿ ಹುಡುಕಾಟ ನಡೆಸುತ್ತಿದ್ದರೆ, ಈ ಸುದ್ದಿ ಕೇವಲ ನಿಮಗಾಗಿ (Quantum Energy Discount On Electric Scooters). ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸುವ ದೇಶದ ಪ್ರಮುಖ ಸ್ಟಾರ್ಟಪ್ ಕಂಪನಿಯಾದ ಕ್ವಾಂಟಮ್ ಎನರ್ಜಿ ತನ್ನ ಆಯ್ದ ಕೆಲ ಎಲೆಕ್ಟ್ರಿಕ್ ಸ್ಕೂಟರ್ಗಳ ಬೆಲೆಯನ್ನು ತಗ್ಗಿಸಿದೆ. ಕಂಪನಿಯು ತನ್ನ ಪ್ಲಾಸ್ಮಾ ಎಕ್ಸ್ ಮತ್ತು ಪ್ಲಾಸ್ಮಾ ಎಕ್ಸ್ಆರ್ ಮಾದರಿಗಳನ್ನು ಸಹ ಈ ಪಟ್ಟಿಯಲ್ಲಿ ಸೇರಿಸಿದೆ. ಕಂಪನಿಯು ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್ಗಳ ಮೇಲೆ 10700 ರೂಪಾಯಿಗಳ ವಿಶೇಷ ರಿಯಾಯಿತಿಯನ್ನು ನೀಡುತ್ತಿದೆ. ಆದರೆ ಈ ರಿಯಾಯಿತಿ ಮಾರ್ಚ್ 31 ರವರೆಗೆ ಮಾತ್ರ ಸೀಮಿತವಾಗಿದೆ. (Business News In Kannada).
ಸ್ಕೂಟರ್ ಬೆಲೆಯಲ್ಲಿ ಶೇ.10 ರಷ್ಟು ಕಡಿತ
ಪರಿಸರ ಸ್ನೇಹಿ ಸಾರಿಗೆಯ ಪರಿಹಾರವಾಗಿ ಹೊರ ಹೊಮ್ಮುತ್ತಿರುವ ಇಲೆಕ್ಟ್ರಿಕ್ ವಾಹನಗಳ ಹೆಚ್ಚುತ್ತಿರುವ ಬೇಡಿಕೆಗೆ ಪ್ರತಿಕ್ರಿಯೆಯಾಗಿ, ಕ್ವಾಂಟಮ್ ಎನರ್ಜಿ ತನ್ನ ಪ್ಲಾಸ್ಮಾ X ಮತ್ತು XR ಮಾದರಿಗಳ ಬೆಲೆಯನ್ನು ಶೇ. ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಪ್ಲಾಸ್ಮಾ X ಮತ್ತು XR ನ ಎಕ್ಸ್ ಶೋ ರೂಂ ಬೆಲೆ (Quantum Energy Scooter Price) ಕ್ರಮವಾಗಿ 1,19,525 ಮತ್ತು 99,757 ರೂ. ಆದರೆ ಈ ರಿಯಾಯಿತಿಯ ನಂತರ, ಈ ಎರಡು ಸ್ಕೂಟರ್ಗಳ ಬೆಲೆ ಕ್ರಮವಾಗಿ 109,000 ಮತ್ತು 89,000 ರೂ ಆಗಲಿದೆ.
ಇದನ್ನೂ ಓದಿ -Karnataka Govt DA Hike: ರಾಜ್ಯ ಸರ್ಕಾರಿ ನೌಕರರಿಗೂ ಸಿಕ್ತು ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ
ಪ್ಲಾಸ್ಮಾ ಶಕ್ತಿಯತ ಮೋಟಾರ್ ಮತ್ತು ಬ್ಯಾಟರಿ ಹೊಂದಿದೆ
ಈ ಸ್ಕೂಟರ್ ಕೇವಲ 7.5 ಸೆಕೆಂಡುಗಳಲ್ಲಿ 0 ರಿಂದ 40 km/hr ವೇಗವನ್ನು ಪಡೆದುಕೊಳ್ಳುತ್ತದೆ. ಕೀಲೆಸ್ ಸ್ಟಾರ್ಟ್ ಮತ್ತು ರಿವರ್ಸ್ ಗೇರ್ ವೈಶಿಷ್ಟ್ಯಗಳ ಹೆಚ್ಚಿನ ಅನುಕೂಲತೆಯೊಂದಿಗೆ ರೈಡರ್ ಎಕೋ ಮತ್ತು ಸ್ಪೋರ್ಟ್ಸ್ ಎಂಬ ಎರಡು ಡ್ರೈವ್ ಮೋಡ್ಗಳ ನಡುವೆ ಆಯ್ಕೆ ಮಾಡಬಹುದು. ಅದೇ ರೀತಿ, 1500W ಮೋಟಾರ್ನಿಂದ ಚಾಲಿತವಾಗಿರುವ ಪ್ಲಾಸ್ಮಾ XR ಒಂದು ಚಾರ್ಜ್ನಲ್ಲಿ 60 km/h ಗರಿಷ್ಠ ವೇಗ ಮತ್ತು 100 km ವ್ಯಾಪ್ತಿಯನ್ನು ನೀಡುತ್ತದೆ.
ಇದನ್ನೂ ಓದಿ-PM Surya Ghar Scheme: 300 ಯೂನಿಟ್ ಉಚಿತ ವಿದ್ಯುತ್ ಬಳಿಕ, ಮೋದಿ ಸರ್ಕಾರದ ಮುಂದಿನ ಮಹತ್ವದ ಪ್ಲಾನ್ ಏನು ಗೊತ್ತಾ?
ನೀವು ವೆಬ್ಸೈಟ್ನಿಂದ ಸ್ಕೂಟರ್ ಖರೀದಿಸಬಹುದು
ಒಂದು ವೇಳೆ ನೀವೂ ಕೂಡ ಈ ಸ್ಕೂಟರ್ ಅನ್ನು ಖರೀದಿಸಲು ಬಯಸುತ್ತಿದ್ದರೆ, ಕ್ವಾಂಟಮ್ ಎನರ್ಜಿ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಟೆಸ್ಟ್ ರೈಡ್ ಅನ್ನು ನಿಗದಿಪಡಿಸಬಹುದು ಅಥವಾ ಭಾರತದಾದ್ಯಂತ ಇರುವ ಯಾವುದೇ ಶೋರೂಮ್ಗಳಿಗೆ ಭೇಟಿ ನೀಡಬಹುದು. ಪ್ರತಿಯೊಂದು ಕ್ವಾಂಟಮ್ ಎನರ್ಜಿ ಶೋರೂಮ್ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಬೆಂಬಲವನ್ನು ಒದಗಿಸುವ ಸಮಗ್ರ 3S ಸೌಲಭ್ಯದಲ್ಲಿ ಕಾರ್ಯನಿರ್ವಹಿಸುತ್ತವೇ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ