Post Office Saving Schemes: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100, 500ರೂ. ನಿಂದ ಹೂಡಿಕೆ ಆರಂಭಿಸಿ, ಲಕ್ಷಾಧಿಪತಿಯಾಗ

Post Office Saving Schemes: ಅಂಚೆಕಚೇರಿಯಲ್ಲಿ ಹಲವು ಸಣ್ಣ ಉಳಿತಾಯ ಯೋಜನೆಗಳು ಲಭ್ಯವಿದ್ದು ಇದರಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಬಹುದು. 

Written by - Yashaswini V | Last Updated : Mar 20, 2024, 02:43 PM IST
  • ಭವಿಷ್ಯವನ್ನು ಭದ್ರಪಡಿಸಲು ಉಳಿತಾಯ ಯೋಜನೆಗಳು ತುಂಬಾ ಪ್ರಯೋಜನಕಾರಿ ಆಗಿವೆ.
  • ಇದಕ್ಕಾಗಿ ಅಂಚೆ ಕಚೇರಿಯ ಕೆಲವು ಯೋಜನೆಗಳು ತುಂಬಾ ಪ್ರಯೋಜನಕಾರಿ ಆಗಿವೆ.
  • ಪೋಸ್ಟ್ ಆಫೀಸ್‌ನಲ್ಲಿ ಇಂತಹ ಹಲವು ಯೋಜನೆಗಳಿದ್ದು ಇವುಗಳಲ್ಲಿ ಕೇವಲ 100, 500 ಮತ್ತು 1000 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು.
Post Office Saving Schemes: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100, 500ರೂ. ನಿಂದ ಹೂಡಿಕೆ ಆರಂಭಿಸಿ, ಲಕ್ಷಾಧಿಪತಿಯಾಗ title=

Post Office Small Saving Schemes: ನಮ್ಮ ಭವಿಷ್ಯವನ್ನು ಭದ್ರಪಡಿಸಲು ಉಳಿತಾಯ ಯೋಜನೆಗಳು ತುಂಬಾ ಪ್ರಯೋಜನಕಾರಿ ಆಗಿವೆ. ಇದಕ್ಕಾಗಿ ಅಂಚೆ ಕಚೇರಿಯ ಕೆಲವು ಯೋಜನೆಗಳು ತುಂಬಾ ಪ್ರಯೋಜನಕಾರಿ ಆಗಿವೆ. ಪೋಸ್ಟ್ ಆಫೀಸ್‌ನಲ್ಲಿ ಇಂತಹ ಹಲವು ಯೋಜನೆಗಳಿದ್ದು ಇವುಗಳಲ್ಲಿ ಕೇವಲ 100, 500 ಮತ್ತು 1000 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು. ಅಂತಹ ಅದ್ಭುತವಾದ ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ತಿಳಿಯೋಣ... 

* ಪೋಸ್ಟ್ ಆಫೀಸ್ ಆರ್‌ಡಿ: 
ಪೋಸ್ಟ್ ಆಫೀಸ್ ಆರ್‌ಡಿ ಕೂಡ ಒಂದು ಪಿಗ್ ಬ್ಯಾಂಕ್ ಇದ್ದಂತೆ. ಆದರೆ, ಇದರಲ್ಲಿನ ಒಂದು ವ್ಯತ್ಯಾಸವೆಂದರೆ ಆರ್‌ಡಿಯಲ್ಲಿ ನಿಮ್ಮ ಹೂಡಿಕೆಗೆ ನೀವು ಒಂದಿಷ್ಟು ಬಡ್ಡಿಯನ್ನು ಸಹ ಪಡೆಯಬಹುದು. ಇದಕ್ಕಾಗಿ, ಸತತ ಐದು ವರ್ಷಗಳ ಕಾಲ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ. ಇದರಲ್ಲಿ ಕನಿಷ್ಠ 100 ರೂ.ಗಳಿಂದ ಹೂಡಿಕೆ ಪ್ರಾರಂಭಿಸಬಹುದು. 

* ಪೋಸ್ಟ್ ಆಫೀಸ್ ಸಮಯ ಠೇವಣಿ: 
ಪೋಸ್ಟ್ ಆಫೀಸ್‌ನಲ್ಲಿ ಸ್ಥಿರ ಠೇವಣಿಯನ್ನು ಟೈಮ್ ಡೆಪಾಸಿಟ್ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ 1, 2, 3 ಮತ್ತು 5 ವರ್ಷಗಳವರೆಗೆ ಹಣವನ್ನು ಠೇವಣಿ ಇಡಬಹುದು. ಆದರೆ, ಅವಧಿಗೆ ಅನುಗುಣವಾಗಿ ಬಡ್ಡಿ ದರ ಬದಲಾಗುತ್ತದೆ.  ಪೋಸ್ಟ್ ಆಫೀಸ್ ಸಮಯ ಠೇವಣಿಯಲ್ಲಿ ಒಂದು ವರ್ಷದ ಹೂಡಿಕೆ ಮೇಲೆ 6.9%, 2 ವರ್ಷಕ್ಕೆ 7%, 3 ವರ್ಷಕ್ಕೆ 7.1% ಮತ್ತು 5 ವರ್ಷಕ್ಕೆ 7.5% ಬಡ್ಡಿ ಸೌಲಭ್ಯ ಲಭ್ಯವಿದೆ. 

ಇದನ್ನೂ ಓದಿ- Personal Loan-Credit Card ನಡುವಿನ ವ್ಯತ್ಯಾಸವೇನು? ಯಾವ ಸಮಯದಲ್ಲಿ ಯಾವ ಸಾಲ ಸೌಲಭ್ಯ ಹೆಚ್ಚು ಸೂಕ್ತ!

* ಪೋಸ್ಟ್ ಆಫೀಸ್ ಎಮ್‌ಐ‌ಎಸ್: 
ಪೋಸ್ಟ್ ಆಫೀಸ್ ಎಮ್‌ಐ‌ಎಸ್‌ನಲ್ಲಿ ಕನಿಷ್ಠ 1000 ರೂ.ಗಳಿಂದ ಹೂಡಿಕೆ ಪ್ರಾರಂಭಿಸಬಹುದು. ಇದರಲ್ಲಿ ಏಕ ಖಾತೆಯಲ್ಲಿ 9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ 15 ಲಕ್ಷ ರೂ. ಗರಿಷ್ಠ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ  5 ವರ್ಷಗಳವರೆಗೆ ಠೇವಣಿ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಸದ್ಯ 7.4% ಬಡ್ಡಿ ಲಭ್ಯವಿದೆ. 

* ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿ‌ಪಿ‌ಎಫ್): 
ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಎಂದರೆ ಸಾರ್ವಜನಿಕ ಭವಿಷ್ಯ ನಿಧಿ (ಪಿ‌ಪಿ‌ಎಫ್) 5 ವರ್ಷಗಳ ಕಾಲ ಚಾಲ್ತಿಯಲ್ಲಿರುವ ಯೋಜನೆಯಾಗಿದೆ. ಈ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5ಲಕ್ಷದವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಪ್ರಸ್ತುತ ಈ ಯೋಜನೆಯಲ್ಲಿ 7.1% ಬಡ್ಡಿ ನೀಡಲಾಗುತ್ತಿದೆ. 

ಇದನ್ನೂ ಓದಿ- EPFO UAN ಪ್ರೊಫೈಲ್ ಅಪ್ಡೇಟ್ ಮಾಡಲು ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ

* ಹಿರಿಯ ನಾಗರಿಕರ ಉಳಿತಾಯ ಯೋಜನೆ: 
ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಒಂದು ಬಾರಿ ಠೇವಣಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕನಿಷ್ಠ 1000 ರೂ.ಗಳಿಂದ ಗರಿಷ್ಠ 30 ಲಕ್ಷದವರೆಗೆ ಹೂಡಿಕೆ ಮಾಡಬಹುದು. ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ನಡೆಸುತ್ತಿರುವ ಈ ಯೋಜನೆಯಲ್ಲಿ 5 ವರ್ಷಗಳವರೆಗಿನ ಠೇವಣಿ ಮೇಲೆ ಸರ್ಕಾರವು 8.2% ಬಡ್ಡಿಯನ್ನು ನೀಡಲಾಗುತ್ತಿದೆ. 

* ಎನ್‌ಎಸ್‌ಸಿ: 
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಯಲ್ಲಿ ಯಾವುದೇ ಭಾರತೀಯ ಪ್ರಜೆಯು ಕೇವಲ 1000 ರೂಪಾಯಿಗಳೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು.  ಇದರಲ್ಲಿ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಪ್ರಸ್ತುತ ಈ ಯೋಜನೆಯಲ್ಲಿ 7.7% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News