'ನನಗೆ ನಿಮ್ಮ ಪತಿಯನ್ನು ಕೊಡ್ತೀರಾ..? ಗಂಡನನ್ನೇ ಕೇಳಿದ ಆಕೆಗೆ ನಟಿ ಜ್ಯೋತಿಕಾ ಏನಂದ್ರು ಗೊತ್ತೆ..!

Jyotika answer to fan : ನಟಿ ಜ್ಯೋತಿಕಾ ಮತ್ತು ಸೂರ್ಯ ಸೌತ್‌ ಸಿನಿ ರಂಗದ ಕ್ಯೂಟ್‌ ಜೋಡಿಗಳಲ್ಲಿ ಒಂದು. ಆಗಾಗ ಈ ಜೊಡಿ ಒಟ್ಟಿಗೆ ಕಾಣಿಸಿಕೊಂಡು ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ. ಇದೀಗ ತಮ್ಮ ಪತಿಯನ್ನು ಸಾಲ ಕೇಳಿದ ಅಭಿಮಾನಿಯೊಬ್ಬರಿಗೆ ಜ್ಯೋತಿಕಾ ನೀಡಿದ ಉತ್ತರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ..

Written by - Krishna N K | Last Updated : Mar 22, 2024, 05:50 PM IST
    • ಬಹುಭಾಷಾ ನಟಿ ಜ್ಯೋತಿಕಾ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುತ್ತಾರೆ.
    • ಆಗಾಗ ನಟಿ ತಮ್ಮ ಅಭಿಮಾನಿಗಳ ಕಾಮೆಂಟ್‌ ಉತ್ತರ ನೀಡುತ್ತಿರುತ್ತಾರೆ.
    • ನೆಟಿಜನ್ ಒಬ್ಬರು ಕೇಳಿದ ಸೆನ್ಸೇಷನಲ್ ಪ್ರಶ್ನೆಯೊಂದಕ್ಕೆ ಮರು ಉತ್ತರ ನೀಡಿದ್ದಾರೆ.
'ನನಗೆ ನಿಮ್ಮ ಪತಿಯನ್ನು ಕೊಡ್ತೀರಾ..? ಗಂಡನನ್ನೇ ಕೇಳಿದ ಆಕೆಗೆ ನಟಿ ಜ್ಯೋತಿಕಾ ಏನಂದ್ರು ಗೊತ್ತೆ..! title=
Jyothika suriya

Jyotika Suriya : ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಜ್ಯೋತಿಕಾ ಆಗಾಗ ತಮ್ಮ ಅಭಿಮಾನಿಗಳ ಕಾಮೆಂಟ್‌ ಉತ್ತರ ನೀಡುತ್ತಿರುತ್ತಾರೆ. ಇದೀಗ ಅಂತಹುದೇ ಒಂದು ಪ್ರಶ್ನೆಗೆ ನಟಿ ನೀಡಿದ ಉತ್ತರ ಅವರ ಅಭಿಮಾನಿಗಳ ಮನ ಗೆದ್ದಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..

ಹೌದು.. ಜ್ಯೋತಿಕಾ ಸಾಮಾಜಿಕ ಜಾಲತಾಣಗಳ ಮೂಲಕ ಆಗಾಗ ತಮ್ಮ ಫ್ಯಾನ್ಸ್‌ ಜೊತೆ ಮಾತನಾಡುತ್ತಿರುತ್ತಾರೆ. ಅವರ ಕೇಳು ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ. ಸದಾ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ನೆಟಿಜನ್ ಒಬ್ಬರು ಕೇಳಿದ ಸೆನ್ಸೇಷನಲ್ ಪ್ರಶ್ನೆಯೊಂದಕ್ಕೆ ಮರು ಉತ್ತರ ನೀಡಿ ನಟಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಸೋನು ಗೌಡ ದತ್ತು ಪಡೆದಿದ್ದಾಗಿ ಹೇಳಿಕೊಂಡಿದ್ದ ಮಗುವಿನ ಹಿನ್ನೆಲೆ ಏನು ಗೊತ್ತಾ? ವಿಚಾರಣೆ ವೇಳೆ ಬಯಲಾಯ್ತು ಸತ್ಯ!!

ಜ್ಯೋತಿಕಾ ಕನ್ನಡ, ತೆಲುಗು ಮತ್ತು ತಮಿಳು ಸಿನಿ ಪ್ರೇಕ್ಷಕರಿಗೆ ಚಿರಪರಿಚಿತ. ಇವರ ನಟ ಸೂರ್ಯ ಅವರ ಪತ್ನಿ. ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಜ್ಯೋತಿಕಾಗೆ ವಿಚಿತ್ರ ಪ್ರಶ್ನೆಯೊಂದನ್ನು ಕೇಳಿದ್ದರು. 'ಜ್ಯೋತಿಕಾ ಮೇಡಂ. ಸಿಲ್ಲುನು ಒರು ಕಡಲ್ ಸಿನಿಮಾದಂತೆ ಮುಂದೊಂದು ದಿನ ನಿಮ್ಮ ಗಂಡನನ್ನು ಸಾಲವಾಗಿ ಕೊಡ್ತೀಯಾ? ಅಂತ ತಾರ್ಸೇನಿ ಸೂರ್ಯ ಎಂಬ ನೆಟಿಜನ್ ಪ್ರಶ್ನೆ ಕೇಳಿದ್ದರು.

ಅದಕ್ಕೆ ಜ್ಯೋತಿಕಾ, 'ಹೂಂ.. ಇದು ಸಾಧ್ಯವೇ ಇಲ್ಲ' ಅಂತ ಕಾಮೆಂಟ್‌ ಮಾಡಿದ್ದಾರೆ. ಈ ಕಾಮೆಂಟ್ ನೋಡಿ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಅಲ್ಲದೆ, ನೆಚ್ಚಿನ ನಟಿಯ ಪ್ರತ್ಯುತ್ತರ ನೋಡಿ ಕಾಮೆಂಟ್‌ ಮಾಡಿದ್ದ ಯುವತಿಯೂ ಸಹ ಅಚ್ಚರಿಗೊಂಡು ತಾವು ನಟ ಸೂರ್ಯ ಅವರ ಬಿಗ್‌ ಫ್ಯಾನ್‌ ಅಂತ ಹೇಳಿಕೊಂಡಿದ್ದಾರೆ.. 

ಇದನ್ನೂ ಓದಿ:ಲೋಕಸಭೆ ಚುನಾವಣೆಗೆ ಟಿಕೆಟ್ ಸಿಕ್ಕಿದೆ ಎಂದ ನಟಿ ಊರ್ವಶಿ! ಈ ಬಾರಿ ಸ್ಪರ್ಧಿಸ್ತಾರಾ?

ಸದ್ಯ ಜ್ಯೋತಿಕಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಅಜಯ್ ದೇವಗನ್ ಜೊತೆ ‘ಸೈತಾನ್’  ಎಂಬ ಸಿನಿಮಾದಲ್ಲಿ ನಟಿಸಿದ್ದರು. ಪತಿ ಸೂರ್ಯ ‘ಕಂಗುವ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಈ ಚಿತ್ರದ ಟೀಸರ್ ಕ್ಯೂರಿಯಾಸಿಟಿ ಹುಟ್ಟಿಸಿದೆ. ಈ ಚಿತ್ರವು ಪ್ಯಾನ್-ವರ್ಲ್ಡ್ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News