Indian Celebrity Couples: 2024 ರಲ್ಲಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ತಾರಾ ಜೋಡಿಗಳು ಯಾರೆಲ್ಲಾ ಅಂತ ಗೊತ್ತೇ??

Indian Celebrity Couples Expecting Baby: ಭಾರತ ಸಿನಿಮಾರಂಗದ ಹಲವಾರು ತಾರಾ ಜೋಡಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಜೋಡಿಗಳು ಸೋಶಿಯಲ್‌ ಮಿಡಿಯಾದಲ್ಲಿ ಫೋಟೋಶೂಟ್‌ ಮಾಡಿಸಿಕೊಳ್ಳುವ ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ರೇ ಯಾವೆಲ್ಲಾ ಸೆಲೆಬ್ರೇಟಿ ಕಪಲ್‌ ಮೊದಲ ಮಗುವನ್ನು ಬರಮಾಡಿಕೊಡಲು ಸಜ್ಜಾಗಿದ್ದಾರೆ ಇಲ್ಲಿದೆ ಸಂಪೂರ್ಣ ಮಾಹಿತಿ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ದೀಪಿಕಾ ಪಡುಕೋಣೆ - ರಣವೀರ್ ಸಿಂಗ್ : ಬಾಲಿವುಡ್‌ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ನವೆಂಬರ್‌ 14 2018 ರಲ್ಲಿ ಪ್ರೀತಿಸಿ ದಾಂಪತ್ಯಕ್ಕೆ ಹೆಜ್ಜೆಹಾಕಿದ್ರು. ಇದೀಗ ಈ ಜೋಡಿ ವಿವಾಹವಾದ ಐದು ವರ್ಷಗಳ ಬಳಿಕ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

2 /6

ಅದಿತಿ ಪ್ರಭುದೇವ - ಯಶಸ್‌ ಪಾಟ್ಲಾ: ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ ಪ್ರೇಕ್ಷಕರ ಮನಗೆದ್ದ ನಟಿ ಅದಿತಿ ಪ್ರಭುದೇವ 2022ರ ನವೆಂಬರ್‌ 28ರಂದು ಉದ್ಯಮಿ ಯಶಸ್‌ ಪಾಟ್ಲಾ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಇದೀಗ ಈ ದಂಪತಿಗಳು ತಮ್ಮ ಮೊದಲ ಮಗು ಬರುವಿಕೆಗಾಗಿ ಎದುರು ನೋಡುತ್ತಾಯಿದ್ದಾರೆ.

3 /6

ಮಿಲನಾ ನಾಗರಾಜ್‌ - ಡಾರ್ಲಿಂಗ್‌ ಕೃಷ್ಣ: ಲವ್‌ ಮಾಕ್‌ಟೇಲ್‌ ಸಿನಿಮಾದ ಮೂಲಕ ಖ್ಯಾತಿ ಪಡೆದ ಜೋಡಿ ನಟಿ ಮಿಲನಾ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ 2021ರ ಫೆಬ್ರವರಿ 14 ರಂದು ವಿವಾಹವಾದವರು. ಸದ್ಯ ಈ ಕಪಲ್‌ ಇದೇ ವರ್ಷ ಮೊದಲ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.  

4 /6

ಅಮಲಾ ಪಾಲ್- ಜಗತ್ ದೇಸಾಯಿ: ಚಂದನವನದಲ್ಲಿ ಹೆಬ್ಬುಲಿ ಬೆಡಗಿ ಎಂದೆ ಖ್ಯಾತಿ ಪಡೆದ ಬಹುಭಾಷಾ ನಟಿ ಅಮಲಾ ಪೌಲ್ ಕಳೆದ ವರ್ಷ ಜಗತ್ ದೇಸಾಯಿ ಜೊತೆಗೆ ಮದುವೆಯಾಗಿದ್ದಾರೆ. ಈ ಜೋಡಿ ಈ ವರ್ಷ ತಮ್ಮ ಮೊದಲ ಮಗುವಿನ ಆಗಮನವಾಗುತ್ತಿರುವುದರಿಂದ ಖುಷಿಯಾಗಿ ಕಾಯುತ್ತಿದ್ದಾರೆ.

5 /6

ಯಾಮಿ ಗೌತಮ್ - ಆದಿತ್ಯ ಧರ್: ಕನ್ನಡದ ಉಲ್ಲಾಸ ಉತ್ಸಾಹ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಫಣೆ ಮಾಡಿದ ಬಾಲಿವುಡ್ ನಟಿ ಯಾಮಿ ಗೌತಮ್ 2021 ರಲ್ಲಿ ಸಿನಿಮಾ ನಿರ್ಮಾಪಕ ಪತಿ ಆದಿತ್ಯ ಧರ್ ಜೊತೆಗೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ಸದ್ಯ ಈ ಜೋಡಿ ತಮ್ಮ ಮೊದಲ ಮಗು ಬರುವಿಕೆಗಾಗಿ ಕುತೂಹಲದಿಂದ ಎದುರು ನೋಡುತ್ತಾ ಇದ್ದಾರೆ.

6 /6

ವರುಣ್ ಧವನ್ - ನತಾಶಾ ದಲಾಲ್: ಬಾಲಿವುಡ್‌ ಖ್ಯಾತ ನಟ ವರುಣ್ ಧವನ್ ಮತ್ತು ಫ್ಯಾಷನ್‌ ಡಿಸೈನರ್‌ ನತಾಶಾ ದಲಾಲ್ 2021 ರಲ್ಲಿ ಸರಳವಾಗಿ ಕುಟುಂಬಸ್ತರ ಸಾಕ್ಷಿಯಾಗಿ ವಿವಾಹವಾದರು. ಈ ಜೋಡಿ ಇದೀಗ ತಮ್ಮ ಮೊದಲ ಮಗುವನ್ನು ಬರಮಾಡಿ ಕೊಡಲು ಸಜ್ಜಾಗುತ್ತಿದ್ದಾರೆ.