RCB-CSK playoffs Scenario: IPL 2024 ಮುಕ್ತಾಯದ ಹಂತಕ್ಕೆ ಬಂದು ತಲುಪುತ್ತಿದೆ. ಈ ಸಂದರ್ಭದಲ್ಲಿ ತಂಡಗಳು ಪ್ಲೇಆಫ್ ಪ್ರವೇಶಕ್ಕೆ ಕಾದಾಡುತ್ತಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಆದರೆ ಉಳಿದ ಮೂರು ತಂಡಗಳು ಯಾವುವು ಎಂಬುದೇ ಈಗಿನ ಪ್ರಶ್ನೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಸದ್ಯ ಪ್ಲೇಆಫ್ ಪ್ರವೇಶಿಸಲು ಕಾತುರದಿಂದ ಕಾಯುತ್ತಿವೆ. ಮೇ 18ರಂದು ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಡಲಿದ್ದು, ಗೆದ್ದವರು ಪ್ಲೇಆಫ್ ಪ್ರವೇಶಿಸುವುದು ಬಹುತೇಕ ಖಚಿತವಾಗುತ್ತದೆ.
ಇದನ್ನೂ ಓದಿ:ಹೊಸ CAA ಕಾಯ್ದೆ ಅಡಿ ಇದೇ ಮೊದಲ ಬಾರಿಗೆ 14 ಮಂದಿಗೆ ಸಿಕ್ಕಿತು ಭಾರತದ ಪೌರತ್ವ ಪ್ರಮಾಣಪತ್ರ
ಆದರೆ ಈ ಪಂದ್ಯವನ್ನು ಹೊರತುಪಡಿಸಿ, ಈ ಎರಡೂ ತಂಡಗಳು ಪ್ಲೇಆಫ್ ಪ್ರವೇಶಿಸುವ ಎಲ್ಲಾ ಅವಕಾಶಗಳು ಇವೆ. ಆದರೆ ಈ ಲೆಕ್ಕಾಚಾರದ ಪ್ರಕಾರ ನಡೆಯಬೇಕು ಅಷ್ಟೇ.
CSK ಮತ್ತು RCB ಎರಡೂ ತಂಡಗಳು ಅರ್ಹತೆ ಪಡೆಯಬೇಕೆಂದರೆ, ಸನ್‌ರೈಸರ್ಸ್ ಹೈದರಾಬಾದ್ ತನ್ನ ಉಳಿದ ಪಂದ್ಯಗಳಲ್ಲಿ ಸೋಲಬೇಕು. ಹೀಗಾದರೆ ಅವರುಇ 14 ಪಾಯಿಂಟ್’ಗಳನ್ನಷ್ಟೇ ಪಡೆದಿರುತ್ತಾರೆ.
RCB ವಿರುದ್ಧ ಸೋತರೂ CSKಯ ನೆಟ್ ರನ್ ರೇಟ್ RCB ಗಿಂತ ಹೆಚ್ಚಾಗಿರಬೇಕು.
RCB ತನ್ನ ಮುಂಬರುವ ಪಂದ್ಯದಲ್ಲಿ CSK ವಿರುದ್ಧ ಜಯ ಸಾಧಿಸಬೇಕು. ಈ ಒಂದು ಗೆಲುವು ಬೆಂಗಳೂರು ತಂಡಕ್ಕೆ 14 ಅಂಕಗಳನ್ನು ಪಡೆಯುವಂತೆ ಮಾಡಿ, ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸುತ್ತದೆ.
SRH ತನ್ನ ಕೊನೆಯ ಎರಡು ಪಂದ್ಯಗಳನ್ನು ಗಮನಾರ್ಹ ಅಂತರದಿಂದ ಸೋಲಬೇಕು. ಹೀಗಾದಲ್ಲಿ SRH ನ ನೆಟ್ ರನ್ ರೇಟ್ ಕಡಿಮೆಯಾಗುತ್ತದೆ. ಆಗ CSK ಮತ್ತು RCB ಎರಡಕ್ಕೂ ಅನುಕೂಲಕರವಾಗಿದೆ.
ಇದನ್ನೂ ಓದಿ: ಅಂದು ವಿಶ್ವಕಪ್ ಹೀರೋ… ಇಂದು ಖ್ಯಾತ ಪೊಲೀಸ್ ಅಧಿಕಾರಿ! 2007ರಲ್ಲಿ ಟೀಂ ಇಂಡಿಯಾ T20 ವಿಶ್ವಕಪ್ ಗೆದ್ದಿದ್ದು ಈತನಿಂದಲೇ
ಇನ್ನೊಂದು ಲೆಕ್ಕಾಚಾರದ ಪ್ರಕಾರ ಲಕ್ನೋ ಸೂಪರ್ ಜೈಂಟ್ಸ್ ತನ್ನ ಅಂತಿಮ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲಬೇಕು. ಇದು LSG ಅಂಕಪಟ್ಟಿಯಲ್ಲಿ CSK ಮತ್ತು RCB ಯನ್ನು ಮೀರಿಸದಂತೆ ನೋಡಿಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews