Video: ಗೆಲುವಿನ ಸಂಭ್ರಮದಲ್ಲಿದ್ದ RCB ಆಟಗಾರಿಗೆ ಶೇಕ್ ಹ್ಯಾಂಡ್ ಮಾಡದೆ ಹೊರಟ ಧೋನಿ! ಇದು ಸೋಲಿನ ಬೇಸರವೇ..? ಅಸೂಯೆಯೇ..?

ms dhoni hand shake Video: ಟೀಂ ಇಂಡಿಯಾ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಆಗಿರಲಿ, ನಾಯಕತ್ವ ವಹಿಸಿಕೊಂಡಿದ್ದಾಗ ಧೋನಿ ಅನೇಕ ಬಾರಿ ಸಾವಧಾನದಿಂದ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಧೋನಿಯ ‘ಕ್ಯಾಪ್ಟನ್ ಕೂಲ್’ ಪಟ್ಟಕ್ಕೆ ಧಕ್ಕೆ ತರುವಂತಿರೋದು ಸುಳ್ಳಲ್ಲ.

Written by - Bhavishya Shetty | Last Updated : May 20, 2024, 06:04 PM IST
    • ಧೋನಿ ‘ಕೂಲ್’ ಆಗಿ ವರ್ತಿಸುವ ರೀತಿಗೆ ಅನೇಕರು ಅವರನ್ನು ಪ್ರೀತಿಸುತ್ತಾರೆ
    • ಶಾಂತ ಸ್ವಭಾವದಿಂದಲೇ ಕ್ಯಾಪ್ಟನ್ ಕೂಲ್ ಪಟ್ಟ ಪಡೆದಿರುವ ಮಹಿ
    • ಅನೇಕ ಬಾರಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿರುವುದೂ ಇದೆ.
Video: ಗೆಲುವಿನ ಸಂಭ್ರಮದಲ್ಲಿದ್ದ RCB ಆಟಗಾರಿಗೆ ಶೇಕ್ ಹ್ಯಾಂಡ್ ಮಾಡದೆ ಹೊರಟ ಧೋನಿ! ಇದು ಸೋಲಿನ ಬೇಸರವೇ..? ಅಸೂಯೆಯೇ..? title=
ms dhoni hand shake video

MS Dhoni and IPL Controversies: ಮಹೇಂದ್ರ ಸಿಂಗ್ ಧೋನಿ… ಈ ಹೆಸರು ಕೇಳಿದಾಗ ಕ್ರಿಕೆಟ್ ಅಭಿಮಾನಿಗಳ ಮನಸ್ಸಲ್ಲಿ ಮೊದಲಿಗೆ ಬರುವ ಚಿತ್ರಣ ಯಶಸ್ವಿ ನಾಯಕ ಮತ್ತು ಶಾಂತ ಸ್ವಭಾವದ ಆಟಗಾರ. ಮೈದಾನದ ಒಳಗಿರಲಿ ಅಥವಾ ಹೊರಗಿರಲಿ, ಧೋನಿ ‘ಕೂಲ್’ ಆಗಿ ವರ್ತಿಸುವ ರೀತಿಗೆ ಅನೇಕರು ಅವರನ್ನು ಪ್ರೀತಿಸುತ್ತಾರೆ… ಆರಾಧಿಸಿತ್ತಾರೆ…

ಟೀಂ ಇಂಡಿಯಾ ಅಥವಾ ಚೆನ್ನೈ ಸೂಪರ್ ಕಿಂಗ್ಸ್ ಆಗಿರಲಿ, ನಾಯಕತ್ವ ವಹಿಸಿಕೊಂಡಿದ್ದಾಗ ಧೋನಿ ಅನೇಕ ಬಾರಿ ಸಾವಧಾನದಿಂದ ನಿರ್ಧಾರಗಳನ್ನು ತೆಗೆದುಕೊಂಡಿರುವುದನ್ನು ನೋಡಿದ್ದೇವೆ. ಆದರೆ ಇತ್ತೀಚೆಗೆ ವೈರಲ್ ಆಗುತ್ತಿರುವ ವಿಡಿಯೋವೊಂದು ಧೋನಿಯ ‘ಕ್ಯಾಪ್ಟನ್ ಕೂಲ್’ ಪಟ್ಟಕ್ಕೆ ಧಕ್ಕೆ ತರುವಂತಿರೋದು ಸುಳ್ಳಲ್ಲ.

ಇದನ್ನೂ ಓದಿ: ಮುಂದಿನ ಏಳು ದಿನಗಳ ಕಾಲ ರಾಜ್ಯದೆಲ್ಲೆಡೆ ಭಾರಿ ಮಳೆ- ಹವಾಮಾನ ಇಲಾಖೆ ಮೂನ್ಸೂಚನೆ

ಅಂದಹಾಗೆ ಐಪಿಎಲ್ 17ನೇ ಸೀಸನ್‌ ಆರಂಭದಲ್ಲೇ ಧೋನಿ ಇದ್ದಕ್ಕಿದ್ದಂತೆ ನಾಯಕತ್ವವನ್ನು ತೊರೆದು, ರುತುರಾಜ್ ಗಾಯಕ್ವಾಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೂತನ ನಾಯಕನನ್ನಾಗಿ ನೇಮಿಸಲಾಯಿತು.

ತಮ್ಮ ಶಾಂತ ಸ್ವಭಾವದಿಂದಲೇ ಕ್ಯಾಪ್ಟನ್ ಕೂಲ್ ಪಟ್ಟ ಪಡೆದಿರುವ ಮಹಿ, ಅನೇಕ ಬಾರಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡಿರುವುದೂ ಇದೆ.

ಇದಕ್ಕೆ ಇತ್ತೀಚಿನ ನಿದರ್ಶನವೆಂದರೆ ಪ್ಲೇಆಪ್ ಅರ್ಹತೆ ಪಡೆಯಲು ಆರ್ ಸಿ ಬಿ ವಿರುದ್ಧ ನಡೆದ ಪಂದ್ಯದಲ್ಲಿ ಕಂಡುಬಂದ ದೃಶ್ಯ. ಈ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಚೆನ್ನೈ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರೆ, ಬೆಂಗಳೂರು ಪ್ಲೇಆಫ್’ಗೆ ಭರ್ಜರಿ ಎಂಟ್ರಿ ಪಡೆದಿತ್ತು. ಈ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಆರ್’ಸಿಬಿ ಆಟಗಾರರು ಪಂದ್ಯದ ಕೊನೆಯಲ್ಲಿ ಶೇಕ್ ಹ್ಯಾಂಡ್ ಕೊಡಲು ಕೊಂಚ ತಡಮಾಡಿದರು. ಆದರೆ ಈ ಸಂದರ್ಭದಲ್ಲಿ ಮೈದಾನದಲ್ಲಿ ಕಾಯುತ್ತಿದ್ದ ಧೋನಿ ಅಲ್ಲಿಂದ ತೆರಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪರ-ವಿರೋಧಗಳ ಚರ್ಚೆ ನಡೆಯುತ್ತಿದೆ.

ಆದರೆ ಹಿಂತಿರುಗುವಾಗ ಅಲ್ಲಿಯೇ ಇದ್ದ ಕೆಲವು RCB ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಹಸ್ತಲಾಘವ ಮಾಡಿದ್ದಾರೆ. ಇನ್ನು ಇಷ್ಟೆಲ್ಲಾ ನಡೆದ ಮೇಲೆ ವಿರಾಟ್ ಕೊಹ್ಲಿ ಮತ್ತೆ ಸಿಎಸ್’ಕೆ ಡ್ರೆಸ್ಸಿಂಗ್ ರೂಂಗೆ ತೆರಳಿ ಮಹಿಯನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಈ ಘಟನೆ ನಡೆದ ಬಳಿಕ ಕ್ರಿಕೆಟ್ ಪ್ರಿಯರು ಭಾರೀ ಚರ್ಚೆ ನಡೆಸುತ್ತಿದ್ದಾರೆ. ಒಂದೆಡೆ ಧೋನಿ ಅಭಿಮಾನಿಗಳು, “ಮಹಿ ಕೆಲಕಾಲ ಮೈದಾನದಲ್ಲಿ ಕಾದಿದ್ದರು, ಆದರೂ ಆರ್ ಸಿ ಬಿ ಆಟಗಾರರು ತಮ್ಮ ಸಂಭ್ರಮಾಚರಣೆಯಲ್ಲಿ ತೊಡಗಿ ಮೈಮರೆತಿದ್ದರು” ಎಂದು ಹೇಳಿದರೆ, ಮತ್ತೊಂದೆಡೆ ಆರ್ ಸಿ ಬಿ ಮತ್ತು ಕೊಹ್ಲಿ ಫ್ಯಾನ್ಸ್, “ಇದು ಓರ್ವ ಕ್ರೀಡಾಳುವಿಗೆ ಇರಬೇಕಾದ ಮನೋಭಾವವಲ್ಲ. ಈ ವರ್ತನೆಯನ್ನು ಮಹಿಯಿಂದ ಊಹಿಸಿಯೂ ಇರಲಿಲ್ಲ, ಇದು ಬೇಸರವಲ್ಲ, ಅಸೂಯೆಯಂತೆ ತೋರುತ್ತಿದೆ” ಎಂದು ವಾದಿಸುತ್ತಿದ್ದಾರೆ.

ಇದಷ್ಟೇ ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ಕ್ಯಾಪ್ಟನ್ ಕೂಲ್ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡು ವಿವಾದದ ಸುಳಿಗೆ ಸಿಲುಕಿದ ಅನೇಕ ಸಂದರ್ಭಗಳಿವೆ. ಅದರಲ್ಲಿ ಕೆಲವೊಂದು ವಿವಾದಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ಮ್ಯಾಚ್ ಫಿಕ್ಸಿಂಗ್ ಆರೋಪ- 2013

2013ರಲ್ಲಿ ಎಂಎಸ್ ಧೋನಿ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿದ್ದರು. ಆ ಸಮಯದಲ್ಲಿ ಇದು ಭಾರತದ ಅತಿದೊಡ್ಡ ಹಗರಣವಾಗಿದ್ದಲ್ಲದೆ, ಧೋನಿ ಟೀಂ ಇಂಡಿಯಾದ ನಾಯಕ ಕೂಡ ಆಗಿದ್ದರು. ತಿರುಚಿರಾಪಳ್ಳಿ ಎಸ್ಪಿ ಜಿ ಸಂಪತ್ ಕುಮಾರ್ ಅವರ ವರದಿ ಪ್ರಕಾರ, ಈ ಹಗರಣದಲ್ಲಿ ಸಿಎಸ್‌’ಕೆ ಅಧಿಕಾರಿ ಗುರುನಾಥ್ ಮೇಯಪ್ಪನ್ ಜೊತೆ ತಂಡದ ಕೆಲವು ಹಿರಿಯ ಆಟಗಾರರೂ ಭಾಗಿಯಾಗಿದ್ದರು. ಇನ್ನು ಫಿಕ್ಸರ್‌’ಗಳ ಯೋಜನೆಯಂತೆ ಧೋನಿ ಪಂದ್ಯದಲ್ಲಿ 140 ರನ್ ಗಳಿಸಲು ಒಪ್ಪಿಕೊಂಡಿದ್ದರು ಎಂದು ಹೇಳಲಾಗಿತ್ತು. ಹೀಗಾಗಿ ಗುರುನಾಥ್ ಜೊತೆ ಧೋನಿಯನ್ನೂ ಈ ವಿಷಯದ ಬಗ್ಗೆ ವಿಚಾರಣೆ ನಡೆಸಲಾಗಿತ್ತು.

ನೋ ಬಾಲ್ ವಿವಾದ- 2019

2019 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಧಾರದಿಂದ ಎಂಎಸ್ ಧೋನಿ ಕೋಪಗೊಂಡಿದ್ದರು. ಈ ಪಂದ್ಯ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ, CSKಗೆ 3 ಎಸೆತಗಳಲ್ಲಿ 8 ರನ್ ಅಗತ್ಯವಿತ್ತು. ಆ ಸಮಯದಲ್ಲಿ ಅಂಪೈರ್ ಉಲ್ಲಾಸ್ ಗಂಧೆ ನೋ ಬಾಲ್ ಎಂದು ಘೋಷಿಸಿದ್ದರು, ಆದರೆ ಆನ್ ಫೀಲ್ಡ್ ಅಂಪೈರ್ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಇದರಿಂದ ಸಿಟ್ಟಿಗೆದ್ದ ಧೋನಿ ಅಂಪೈರ್ ಜೊತೆ ಸಿಟ್ಟಿನಿಂದ ವಾಗ್ವಾದಕ್ಕಿಳಿದಿದ್ದನ್ನು ಕಂಡು ಆಶ್ಚರ್ಯಚಕಿತರಾದರು.

ಧೋನಿ-ಜಡೇಜಾ ಫೈಟ್

ರವೀಂದ್ರ ಜಡೇಜಾ ಅವರನ್ನು 2022 ರಲ್ಲಿ ಸಿಎಸ್‌’ಕೆ ನಾಯಕರನ್ನಾಗಿ ಮಾಡಲಾಯಿತು, ಆದರೆ ತಂಡದ ನಿರಂತರ ಕಳಪೆ ಪ್ರದರ್ಶನದಿಂದಾಗಿ, ಋತುವಿನ ಮಧ್ಯದಲ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಿ ಮತ್ತೆ ಎಂಎಸ್ ಧೋನಿಯನ್ನು ನಾಯಕರನ್ನಾಗಿ ಮಾಡಲಾಯಿತು. ಇದಾದ ನಂತರ ರವೀಂದ್ರ ಜಡೇಜಾ ಕೋಪಗೊಂಡು, “ಕರ್ಮ ಮರಳಿ ಬರುತ್ತದೆ” ಎಂದು ಜಡೇಜಾ ಟ್ವೀಟ್ ಮಾಡಿದ್ದರು. ಜಡೇಜಾ ಅವರ ಈ ಟ್ವೀಟ್ ಕಂಡು, ಧೋನಿ ಮತ್ತು ಜಡೇಜಾ ನಡುವೆ ಏನೋ ಸರಿಯಿಲ್ಲ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಅವರಿಬ್ಬರು ಅನ್ಯೋನ್ಯವಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ: ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News