ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್.!

Bengaluru rave party updates: ಬೆಂಗಳೂರು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್ ನೀಡಿದೆ.   

Written by - Chetana Devarmani | Last Updated : May 28, 2024, 01:45 PM IST
  • ಬೆಂಗಳೂರು ರೇವ್ ಪಾರ್ಟಿ ಪ್ರಕರಣ
  • ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್
  • ತೆಲುಗು ಖ್ಯಾತ ನಟಿ ಹೇಮಾ
ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್.! title=

Bengaluru rave party case : ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರು ಪೊಲೀಸರು ತೆಲುಗು ನಟಿ ಹೇಮಾಗೆ ನೋಟಿಸ್ ಜಾರಿ ಮಾಡಿದ್ದರು. ಮತ್ತೊಂದೆಡೆ ನಟಿ ಹೇಮಾ ಬೆಂಗಳೂರಿಗೆ ಹೋಗಿ ಪೊಲೀಸರ ಮುಂದೆ ಹಾಜರಾಗುತ್ತಾಳೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು. ಆದರೆ ನಟಿ ಹೇಮಾ ಪೊಲೀಸರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಸರಿಯಿಲ್ಲ, ಹಾಸಿಗೆಯಿಂದ ಏಳಲು ಸಾಧ್ಯವಾಗುತ್ತಿಲ್ಲ ಎಂದು ಬಪತ್ರ ಬರೆದಿರುವಂತಿದೆ ಎನ್ನಲಾಗಿದೆ.  

ಪ್ರಕರಣದ ತನಿಖೆಯಲ್ಲಿ ವಿಳಂಬ, ರಾಜಕೀಯ ಒತ್ತಡ ಅಥವಾ ಇನ್ನಾವುದೇ ಸಮಸ್ಯೆಯಾಗದಂತೆ ಪೊಲೀಸರು ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿರುವಂತಿದೆ. ಮತ್ತೊಂದೆಡೆ ನಟಿ ಹೇಮಾ ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. 

ಇದನ್ನೂ ಓದಿ:  ಸಲ್ಮಾನ್ ಖಾನ್ 'ಸಿಕಂದರ್' ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !

ಈ ಘಟನೆಯಲ್ಲಿ ಸಂಪೂರ್ಣ ಕಾನೂನು ಹೋರಾಟಕ್ಕೆ ಸಿದ್ಧ ಎಂದು ನಟಿ ಹೇಮಾ ಹೇಳಿದ್ದಾರೆ. ಇಂಡಸ್ಟ್ರಿಯಲ್ಲಿ ಹಲವರ ಪರ ಹೋರಾಟ ಮಾಡಿದ್ದು, ತಮ್ಮ ವಿರುದ್ಧ ಆರೋಪ ಬಂದರೆ ಸುಮ್ಮನಿರಲು ಸಾಧ್ಯವೇ ಎಂದಿದ್ದಾರೆ. ಇದೇ ವೇಳೆ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ​​ಅಧ್ಯಕ್ಷ ಮಂಚು ವಿಷ್ಣು ಪ್ರತಿಕ್ರಿಯಿಸಿದ್ದಾರೆ. ಅಪರಾಧ ಸಾಬೀತಾಗುವವರೆಗೂ ಯಾರೊಬ್ಬರ ಮೇಲೆಯೂ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.  ನಟಿ ಹೇಮಾ ಅವರು ಬೆಂಗಳೂರು ಪಾರ್ಟಿಯಲ್ಲಿರಲಿಲ್ಲ, ತಮ್ಮ ಫಾರ್ಮ್ ಹೌಸ್ ನಲ್ಲಿ ಕುಳ್ಳಿತು ವಿಡಿಯೋ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. 

ಬೆಂಗಳೂರು ರೇವ್ ಪಾರ್ಟಿಯಲ್ಲಿ ಪೊಲೀಸರು 103 ಮಂದಿಗೆ ಡ್ರಗ್ ಪರೀಕ್ಷೆ ನಡೆಸಿದ್ದು, 86 ಮಂದಿ ಡ್ರಗ್ಸ್ ಸೇವಿಸಿರುವ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದು, ಬೇರೆ ಬೇರೆ ದಿನಾಂಕಗಳನ್ನು ನೀಡಿ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.   ಈ ನಡುವೆ ನಟಿ ಹೇಮಾ ಅವರು ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಇದನ್ನು ವಿರೋಧಿಸಿ ಬೆಂಗಳೂರು ಸಿಸಿಬಿ ಪೊಲೀಸರು ಮತ್ತೊಂದು ನೋಟಿಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ:  ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News