ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಾಳಿಗೆ ಮುಳ್ಳಾದ ʼಮುದ್ದೆʼ?!

Niveditha gowda and Chandan shetty divorce: ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್‌ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು. ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಕೂಡ ಇದ್ದಾರೆ.

Written by - Puttaraj K Alur | Last Updated : Jun 9, 2024, 07:24 PM IST
  • ಸಖತ್‌ ಸೌಂಡ್‌ ಮಾಡುತ್ತಿದೆ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ
  • ನಗುನಗುತ್ತಾ ಇದ್ದ ಈ ಸುಂದರ ಜೋಡಿಯ ಜೀವನದಲ್ಲಿ ಏನಾಯ್ತು..?
  • ಚಂದನ್‌ ಮತ್ತು ನಿವೇದಿತಾ ಡಿವೋರ್ಸ್‌ಗೆ ಕಾರಣವಾಯ್ತಾ ʼಮುದ್ದೆʼ..?
ಚಂದನ್ ಶೆಟ್ಟಿ & ನಿವೇದಿತಾ ಗೌಡ ಬಾಳಿಗೆ ಮುಳ್ಳಾದ ʼಮುದ್ದೆʼ?! title=
ಡಿವೋರ್ಸ್‌ಗೆ ಕಾರಣವಾಯ್ತಾ ʼಮುದ್ದೆʼ..?

Niveditha gowda and Chandan shetty divorce: ʼಬಿಗ್‌ಬಾಸ್ʼ ಕನ್ನಡ ಸೀಸನ್ 5ರಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಡಿವೋರ್ಸ್ ಸುದ್ದಿ ಇದೀಗ ಸಖತ್‌ ಸೌಂಡ್‌ ಮಾಡುತ್ತಿದೆ. ಬಿಗ್‌ಬಾಸ್ ರಿಯಾಲಿಟಿ ಶೋನಿಂದಲೇ ಈ ಜೋಡಿ ಪ್ರೀತಿ ಶುರು ಮಾಡಿಕೊಂಡಿತ್ತು. 2019ರ ಮೈಸೂರು ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಇದಕ್ಕೆ ನಿವೇದಿತಾ ಯಸ್‌ ಅಂತಾ ಹೇಳಿದ್ದರು. ಇದು ದೊಡ್ಡ ವಿವಾದಕ್ಕೂ ಕಾರಣವಾಗಿತ್ತು. ಆಗ ಸರ್ಕಾರಿ ಕಾರ್ಯಕ್ರಮದ ವೇದಿಕೆಯನ್ನು ಲವ್‌ ಪ್ರಪೋಸ್‌ಗೆ ಬಳಸಿಕೊಂಡಿದ್ದಕ್ಕೆ ರಾಜ್ಯ ಸರ್ಕಾರವು ಈ ಜೋಡಿಯ ಮೇಲೆ ನಿಷೇಧ ಹೇರಿತ್ತು. 

ಚಂದನ್‌ ಶೆಟ್ಟಿ ತಮ್ಮ ವಿಭಿನ್ನ ಹಾಡುಗಳ ಮೂಲಕವೇ ಕನ್ನಡಿಗರ ಮನಸ್ಸು ಗೆದ್ದಿದ್ದರು. ಪರಸ್ಪರ ಪ್ರೀತಿಸಿ 2020ರಲ್ಲಿ ಮದುವೆಯಾಗಿದ್ದ ನಿವೇದಿತಾ ಮತ್ತು ಚಂದನ್‌ ನೂರಾರು ಕಾಲ ಸುಖವಾಗಿ ಬಾಳುತ್ತೇವೆ ಅಂತಾ ಹೇಳಿಕೊಂಡಿದ್ದರು. ಅದರಂತೆ ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್‌ ಕೂಡ ಇದ್ದಾರೆ. ತುಂಬಾ ಇಷ್ಟಪಟ್ಟು ಮದುವೆಯಾಗಿದ್ದ ಈ ಜೋಡಿಯ ಜೀವನ ಇದೀಗ ಉಲ್ಟಾ ಆಗಿದೆ. 

ಇದನ್ನೂ ಓದಿ: ರಿಯಲ್‌ ಲೈಫ್‌ನಲ್ಲಿ ಜೋಡಿಯಾಗ್ತಾರಾ ರೀಲ್‌ ಜೋಡಿ..? ರಕ್ಸ್‌-ರುಕ್ಸ್‌ ಮದುವೆಯಾಗಿ ಎಂದ ಫ್ಯಾನ್ಸ್‌.

ಚಂದನ್ ಶೆಟ್ಟಿ & ನಿವೇದಿತಾ ಗೌಡ ಇಬ್ಬರೂ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಪಡೆದುಕೊಂಡಿದ್ದಾರೆ. ಹಿಂದೂ ವಿವಾಹ ಕಾಯ್ದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಡಿವೋರ್ಸ್‌ ಪಡೆಯಲು ಯಾವುದೇ ರೀತಿಯ ತಕರಾರು ಇಲ್ಲವೆಂದು ತಿಳಿಸಿದ ಬಳಿಕ ಕೋರ್ಟ್‌ ಕೂಡ ಒಪ್ಪಿಗೆ ನೀಡಿದೆ. ಆದರೆ ನಗುನಗುತ್ತಾ ಚೆನ್ನಾಗಿಯೇ ಇದ್ದ ಈ ಜೋಡಿಯ ಈ ದಿಢೀರ್‌ ನಿರ್ಧಾರದಿಂದ ಕರುನಾಡಿನ ಪ್ರತಿಯೊಬ್ಬರಿಗೂ ಶಾಕ್‌ ಆಗಿದೆ. 

ಎಲ್ಲವೂ ಚೆನ್ನಾಗಿದ್ದ ಈ ಜೋಡಿಯ ಜೀವನದಲ್ಲಿ ಇದ್ದಕ್ಕಿದ್ದಂತೆಯೇ ಏನಾಯ್ತು..? ಯಾಕೆ ಈ ಜೋಡಿ ಡಿವೋರ್ಸ್‌ ಪಡೆದುಕೊಂಡಿತು ಅಂತಾ ಅನೇಕರು ಕಾರಣಗಳನ್ನು ಹುಡುಕುತ್ತಿದ್ದಾರೆ. ಈ ಜೋಡಿಯ ವಿಚ್ಛೇದನಕ್ಕೆ ಅನೇಕರು ಹಲವಾರು ಕಾರಣಗಳನ್ನು ನೀಡಿದ್ದಾರೆ. ವಯಸ್ಸಿನ ಅಂತರ ಕಾರಣ ಅಂತಾ ಕೆಲವರು ಹೇಳಿದ್ರೆ, ಮಗು ಮಾಡಿಕೊಳ್ಳುವ ವಿಚಾರಕ್ಕೆ ಅಂತಾ ಕೆಲವರು ಹೇಳಿದ್ದಾರೆ. ತಮ್ಮ ತಮ್ಮ ವೈಯಕ್ತಿಕ ಜೀವನದ ಉದ್ದೇಶದಿಂದ ಈ ಜೋಡಿ ಬೇರೆಯಾಗಲು ನಿರ್ಧರಿಸಿದೆ ಅಂತಾ ಕೆಲವರು ಹೇಳಿದ್ದಾರೆ. ಆದರೆ ಈ ಜೋಡಿಯ ಡಿವೋರ್ಸ್‌ಗೆ ʼಮುದ್ದೆʼ ಕಾರಣ ಅಂತಾ ಸೋಷಿಯಲ್‌ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ.  

ಇದನ್ನೂ ಓದಿ: ಇವರು ಹೀರೋಯಿನ್‌ ಅಲ್ಲ, IPS ಅಧಿಕಾರಿ ಅಂದ್ರೆ ನೀವು ನಂಬ್ತೀರಾ..! ಇವರ ಬಗ್ಗೆ ತಿಳಿದುಕೊಳ್ಳಲೇಬೇಕು ನೀವು..

ಹೌದು, ಕೆಲ ತಿಂಗಳ ಹಿಂದಷ್ಟೇ ನಿವೇದಿತಾ ಗೌಡ ಅವರು 'ರಾಗಿ ಮುದ್ದೆ' ಮಾಡುವ ವಿಡಿಯೋವೊಂದನ್ನು ಹಾಕಿದ್ದರು. ಅದೇ ವಿಡಿಯೋ ಇದೀಗ ಚಂದನ್ ಶೆಟ್ಟಿ & ನಿವೇದಿತಾ ಗೌಡರ ಬಾಳಿನಲ್ಲಿ ಬಿರುಗಾಳಿ ಎಬ್ಬಿಸಿದೆಯಂತೆ. ಈ 'ರಾಗಿ ಮುದ್ದೆ' ಮಾಡುವ ವಿಡಿಯೋ ಕಾರಣಕ್ಕಾಗಿಯೇ ಇಬ್ಬರು ಡಿವೋರ್ಸ್ ಪಡೆದಿದ್ದಾರೆ ಅಂತಾ ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಚರ್ಚೆಯಾಗುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News