ಗೋರಖ್ ಪುರ: ಉತ್ತರ ಪ್ರದೇಶದ ಒಂದು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರತವಾಗಿರುವ 4th ಕ್ಲಾಸ್ ಕೆಲಸಗಾರನಿಂದ ಗರ್ಭಿಣಿ ಸ್ತ್ರೀಯ ಆಪರೇಶನ್ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಡಿಲೆವರಿ ನಡೆಸಿದ ಕೆಲವೇ ಸಮಯದ ಬಳಿಕ ನವಜಾತ ಶಿಶು ಮೃತಪಟ್ಟಿದೆ ಎನ್ನಲಾಗಿದೆ. ಅತ್ತ ಇನ್ನೊಂದೆಡೆ ಗರ್ಭಿಣಿ ಸ್ತ್ರೀಯ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಗರ್ಭಿಣಿಯ ಕುಟುಂಬ ಸದಸ್ಯರು ಆಕೆಯನ್ನು ಮೆಡಿಕಲ್ ಕಾಲೇಜಿಗೆ ಭರ್ತಿ ಮಾಡಿದ್ದು, ಅಲ್ಲಿ ಆಕೆಯ ಮೇಲೆ ಚಿಕಿತ್ಸೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಬಲ್ಲ ಮೂಲಗಳಿಂದ ಸಿಕ್ಕ ಮಾಹಿತಿ ಪ್ರಕಾರ, ಗುಲರಿಯಾ ಠಾಣಾ ವ್ಯಾಪ್ತಿಗೆ ಬರುವ ಭಟಹಟ ಪೇಟೆಯ ಹತ್ತಿರವಿರುವ ಈ ಪ್ರಿಯಾಂಶು ಆಸ್ಪತ್ರೆಗೆ ಅಡಿಷನಲ್ CMO ಡಾ. ನೀರಜ್ ಕುಮಾರ್ ಪಾಂಡೆ ಅವರು ಸೀಲ್ ಮಾಡಿದ್ದರು ಎನ್ನಲಾಗಿದೆ. ಆದರೆ, ಅದರ ನಂತರವೂ ಕೂಡ ಅಲ್ಲಿ ಆಸ್ಪತ್ರೆ ನಡೆಸಲಾಗುತ್ತಿದ್ದು, ಅಲ್ಲಿನ ಆಸ್ಪತ್ರೆಯ ಆಡಳಿತದ ಮೇಲೆ ಪ್ರಶ್ನೆ ಏಳಲಾರಂಭಿಸಿವೆ.
ವಿಷಯ ತಿಳಿದ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಆಸ್ಪತ್ರೆಯ ಮುಖ್ಯದ್ವಾರದ ಸೀಲ್ ಮುರಿಯಲಾಗಿರುವುದು ಗಮನಕ್ಕೆ ಬಂದಿದೆ. ಹಾಗೂ ಒಳಗಡೆ ರೋಗಿಗಳ ಬೆಡ್ ಗಳೂ ಕೂಡ ಇರುವುದಾಗಿ ಗಮನಕ್ಕೆ ಬಂದಿದೆ. ಇದರಿಂದ ಅಲ್ಲಿ ಆಸ್ಪತ್ರೆ ನಡೆಯುತ್ತಿರುವುದು ಸಾಬೀತಾಗುತ್ತದೆ.
ಸದ್ಯ ಸಂತ್ರಸ್ತೆಯ ಕುಟುಂಬ ಸದಸ್ಯರು ಘಟನೆಯ ಕುರಿತು ಗುಲರಿಯಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಇನ್ನೊಂದೆಡೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಆಸ್ಪತ್ರೆಯ ನಿರ್ವಾಹಕರು ಆಸ್ಪತ್ರೆ ಬಿಟ್ಟು ಪರಾರಿಯಾಗಿದ್ದಾರೆ.