Sonakshi Sinha Dance: ಬಾಲಿವುಡ್ ಸ್ಟಾರ್ ನಟಿ ನೋನಾಕ್ಷಿ ಸಿನ್ಹ ತಮ್ಮ ಬಹು ಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮ, ವಯಸ್ಸು ಎಂಬ ಹಲವಾರು ವಿರೋಧಗಳ ನಡುವೆಯೂ ಸೋನಾಕ್ಷಿ ಪ್ರೀತಿಸಿದವರೊಂದಿಗೆ ಮದುವೆಯಾಗಿದ್ದಾರೆ. ಮದುವೆಯಾಗಿ ಇನ್ನೂ ಎರಡು ದಿನ ಕೂಡ ಕಳೆದಿಲ್ಲ ಅಷ್ಟರಲ್ಲೆ ಒಂದು ವಿಡಿಯೋ ಮೂಲಕ ಜೋಡಿ ಸುದ್ದಿಯಾಗಿದ್ದಾರೆ.
ಹೌದು, ಭಾನುವಾರ ಜೂನ್, 23ರ ಬೆಳಗ್ಗೆ ಸೋನಾಕ್ಷಿ ಸಿನ್ಹ ಹಾಗೂ ಗೆಳೆಯ ಜಹೀರ್ ಇಕ್ಬಲ್ ಕುಟುಂಬಸ್ಥರ ಸಮ್ಮುಕದಲ್ಲಿ ಸಿಂಪಲ್ ಆಗಿ ನಿಕ್ಕಾ ಮಾಡಿಕೊಂಡರು. ಈ ಸಮಾರಂಭಕ್ಕೆ ಸೋನಾಕ್ಷಿ ಸಿಂಪಲ್ ಆದ ಚಿಕಂಕಾರಿ ಸೀರೆಯನ್ನುಟ್ಟು ಮಿಂಚಿದರು. ಇನ್ನೂ ಆರತಾಕ್ಷೆತೆಗೆ ಸೋನಾಕ್ಷಿ ತಮ್ಮ ತಾಯಿಯ ಮದುವೆಯ ಕೆಂಪು ಬನಾರಸಿ ಸೀರೆಯನ್ನುಟ್ಟು ಹಣೆಗೆ ಸಿಂಧೂರವನ್ನಿಟ್ಟು ದೇವತೆಯಂತೆ ಕಂಡಿದ್ದರು.
ಇದನ್ನೂ ಓದಿ: ಸ್ಟಾರ್ ನಟಿಯೊಂದಿಗೆ ದಳಪತಿ ವಿಜಯ್ ಅಫೇರ್? ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಯ್ತು ದೊಡ್ಡ ಚರ್ಚೆ
ಸೋನಾಕ್ಷಿ ಹಾಗೂ ಜಹೀರ್ ಇಕ್ಬಲ್ ಅವರ ಆರತಾಕ್ಷತೆ ಕಾರ್ಯಕ್ರಮ ಜೂನ್ 23ರ ಸಂಜೆ ನೆರವೇರಿತು. ಈ ನವ ಜೋಡಿಯ ಆರತಾಕ್ಷತೆ ಸಮಾರಂಭಕ್ಕೆ ಬಹು ದೊಡ್ಡ ತಾರಾ ಗಣವೇ ಸಾಕ್ಷಿಯಾಗಿತ್ತು. ಇದೇ ಕುಷಿಯಲ್ಲಿ ಜೋಡಿ ಶಾರುಖ್ ಖಾನ್ರ ಚಯ್ಯಾ ಚಯ್ಯಾ ಸಾಂಗ್ಗೆ ಸ್ನೇಹಿತರೊಂದಿಗೆ ಸ್ಟೆಪ್ಸ್ ಹಾಕಿದ್ದರು. ಇದೀಗ ಇವರ ಡ್ಯಾನ್ಸ್ ವಿಡಿಯೋ ವೈರಲ್ ಆಗ್ತಾ ಇದ್ದು. ಜೋಡಿ ಮದುವೆಯ ದಿನವೇ ಕುಡಿದಿದ್ದಾರೆ ಎನ್ನುವ ಅನುಮಾನ ನೆಟ್ಟಿಗರಲ್ಲಿ ಶುರುವಾಗಿದೆ.
ಚಯ್ಯಾ ಚಯ್ಯಾ ಹಾಡಿಗೆ ಡ್ಯಾನ್ಸ್ ಮಾಡಿರುವ ಜೋಡಿಯ ನಡುವಳಿಕೆ ಆಕ್ಷನ್ ನೋಡಿ, ಈ ಜೋಡಿ ಅಮಲಿನಲ್ಲಿದ್ದಾರೆ ಎಂದು ಹಲವರು ಅನುಮಾನ ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮದುವೆಯ ದಿನವೇ ಹೀಗೆ ಅದ್ರೆ ಇನ್ನೂ ಮುಂದಿನ ಕಥೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಗ್ಲೇ ಹೀಗೆ ಆದ್ರೆ ಮುಂದೆ ನಿಮ್ಮ ಕಥೆ ಅಷ್ಟೆ ಯೊಚ್ನೆ ಮಾಡಿ ಇನ್ನೂ ಕಾಲ ಮಿಂಚಿಲ್ಲ ಎಂದು ನೆಟ್ಟಿಗರು ಸೋನಾಕ್ಷಿಗೆ ಸಜೆಷನ್ಸ್ ಕೊಡುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.