MC Baba: ಮನುಷ್ಯನಿಗೆ ಕಲೆ ಎಂಬುದು ಇದ್ದರೆ ಯಾವ ತೊಂದರೆಯೂ ಅವರನ್ನು ಕಟ್ಟಿ ಹಾಕಲು ಸಾಧ್ಯವಾಗುವುದಿಲ್ಲ. ತನಗೆ ಕೊರತೆಯಿದೆ ಎಂದು ಕೈ ಕಟ್ಟಿ ಕೂರದೆ ಈತ ಆ ಕೊರತೆಯನ್ನೇ ಕಲೆ ಆಗಿಸಿಕೊಂಡಿದ್ದಾನೆ. ಅಷ್ಟಕ್ಕೂ ಆ ವ್ಯಕ್ತಿ ಯಾರು? ಆತ ಮಾಡಿದ ಸಾಧನೆಯಾದ್ರೂ ಏನು? ತಿಳಿಯಲು ಮುಂದೆ ಓದಿ...
ನಾವು ಹೇಳೋಕೆ ಹೊರಟಿರುವವರ ಹೆಸರು ಎಂಸಿ ಬಾಬಾ, ಸಾಂಪ್ರದಾಯಿಕ ಯಾರ್ಪರ್ಗಳಂತೆ ಅಲ್ಲದೆ ಇವರ ವಿಡಿಯೋಗಳು ಕೊಂಚ ಹೆಚ್ಚು ವಿಭಿನ್ನ ಎನಿಸುತ್ತದೆ.
ಎಂಸಿ ಬಾಬಾ ಅಷ್ಟಕ್ಕೂ ಆಫ್ರಿಕಾದ ರಿಪಬ್ಲಿಕ್ ಕಾಂಗೋದ ವ್ಯಕ್ತಿ, ಈತ ಹುಟ್ಟು ಕಿವುಡ.
ಈತನ ಕಥೆ ನಿಮಗೆ ರೋಚಕ ಅನಿಸಿದರೂ ಕೂಡ ಅದುವೇ ಸತ್ಯ. ಈ ವ್ಯಕ್ತಿ ಹುಟ್ಟಿದಾಗಿನಿಂದಲೂ ಕಿವುಡ ಹಾಗೂ ಮೂಕ. ಈತನಿಗೆ ಮಾತು ಬರಲ್ಲ, ಕಿವಿಯೂ ಕೇಳಲ್ಲ ಅದರೂ ರ್ಯಾಪರ್ ಆಗಿ ವಿಶ್ವದಾದ್ಯಂತ ತನ್ನ ಹಾಡುಗಳ ಮೂಲಕ ಸೌಂಡ್ ಮಾಡುತ್ತಿದ್ದಾನೆ.
ಎಂಸಿ ಬಾಬಾರ ಹಾಡುಗಳಲ್ಲಿ ಸಾಂಪ್ರದಾಯಿಕ ಪದ ಬಳಕೆ ಇರದೇ ಇದ್ದರೂ, ಲಯಬದ್ಧ ಶಬ್ದಗಳನ್ನು ಬಳಸಿ ರ್ಯಾಪ್ ಸಾಂಗ್ಸ್ ಮಾಡುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಫುಲ್ ಟ್ರೆಂಡಿಂಗ್ನಲ್ಲಿದ್ದಾರೆ.
ಇದನ್ನೂ ಓದಿ:
ಅರ್ರೇ, ಇದು ಹೇಗೆ ಸಾಧ್ಯಾ? ಮಾತು ಬರದ, ಕಿವಿಯೂ ಕೇಳದ ವ್ಯಕ್ತಿ ಹಾಡು ಮಾಡಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ನಿಮ್ಮನ್ನೂ ಕೂಡ ಕಾಡುತ್ತಿರಬಹುದು. ಇದಕ್ಕೆ ಉತ್ತ ಇದೆ.
ಎಂಸಿ ಬಾಬಾ ಅವರ ಸಂಗೀತ ಪಯಣ ಶುರುವಾಗಿ ಹೆಚ್ಚು ದಿನಗಳೇನು ಕಳೆದಿಲ್ಲ, ಭಾರಿ ಕಡಿಮೆ ಟೈಮ್ನಲ್ಲಿ ಫೇಮಸ್ ಆದ ಯಾರ್ಪರ್ ಈತ. ಲಾ ಬೇಸೆರಾನ್ ಎನ್ನುವ ಯಾರ್ಪರ್ ಜೊತೆ 2021ರಲ್ಲಿ ಬಾಬಾ ಮೊದಲ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ನಂತರ 2023 ರಲ್ಲಿ ಬಾಬಾ ಸ್ವತಂತ್ರವಾಗಿ ಯಾರ್ಪಿಂಗ್ ಪಾಯಣವನ್ನು ಆರಂಭಿಸಲು ನಿರ್ಧರಿಸುತ್ತಾರೆ. ಮುಂದೆ ನಡೆದದ್ದೆಲ್ಲಾ ವಿದಿಯಾಟ..! ಇದುವೇ ಬಾಬಾ ಅವರ ಜೀವನದ ಲಕ್ ಅನ್ನೇ ಬದಲಾಯಿಸಿ ಬಿಟ್ಟಿದೆ.
“ಒಕೊ ಲೇಲಾ ಎಪಾ ಯಾ ನಾನಿ” ಎಂಬ ಹಾಡಿನ ವಿಡಿಯೋವನ್ನು ಬಾಬಾ ಕಳೆದ ತಿಂಗಳಷ್ಟೇ ಹೊರಬಿಟ್ಟಿದ್ದರು. ಈ ಹಾಡು ರಿಲೀಸ್ ಆದ ಕೆಲವೇ ದಿನದಲ್ಲಿ ಸಕತ್ ಹಿಟ್ ಆಗಿರುವುದಷ್ಟೇ ಅಲ್ಲದೆ ಈ ವಿಡಿಯೋಗೆ ವೀವ್ಸ್ ಪ್ರವಾಹವೇ ಹರಿದುಬರುತ್ತಿದೆ.
ತನಗೆ ಕೊರತೆಯಿದ್ದರೂ ಕೈ ಕಟ್ಟಿ ಕೂರದೆ ಸಾಧಿಸಿ ಬೇಕೆಂಬ ಚಲದಿಂದ ಸಾಧನೆಯ ಮಾರ್ಗ ತುಳಿದಿರುವ ಬಾಬಾ ಅವರ ಕೆಲಸಕ್ಕೆ ಪರ ವಿರೋದಗಳು ಕೇಳಿ ಬರುತ್ತಿವೆ. ಕೆಲವರು ಎಂಸಿ ಬಾಬಾ ಅವರನ್ನು ಹೊಗಳಿ ಕೊಂಡಾಡಿದರೆ. ಇನ್ನೂ ಕೆಲವು ಟ್ರೋಲ್ ಪೇಜ್ಗಳು ಬಾಬಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಮೊದಲಿಗೆ ಟ್ರೋಲ್ ಮಾಡಿದವರಿಗೆ ಈತ ಕಿವುಡ, ಮೂಕ ಎಂದು ತಿಳಿಯದೇ ಇದ್ದರೂ, ಗೊತ್ತಾದ ನಂತರ ಟ್ರೋಲ್ ಮಾಡುವುದನ್ನು ಕಡಿಮೆ ಮಾಡಿದ್ದಾರೆ.
Meet Africa's first Mute Rapper, MC Baba, a deaf and mute rapper from the Democratic Republic of Congo who has a unique approach to Rap music. pic.twitter.com/cYUH0b0wSD
— EDHUB🌍ℹ (@eddie_wrt) June 25, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.