D Gang: ದರ್ಶನ್ ಅಂಡ್ ಗ್ಯಾಂಗ್ ಕೊಲೆ ಬಳಿಕ ಯಾವುದೇ ಕ್ಲ್ಯೂ ಸಿಗದಂತೆ ತಂತ್ರ ಹೆಣೆದಿದ್ದರು. ಅದರಂತೆ ಮೂರು ಜನ ಕೃತ್ಯ ನಡೆದಿರುವ ಯಾವುದೇ ಕುರುಹು ಸಿಗದಂತೆ ಕೆಲಸ ಮಾಡಲು ಹೋಗಿ ಈಗ ಅವರೇ ಈ ಕೃತ್ಯದ ಸಾಕ್ಷಿಗಳಾಗಿದ್ದಾರೆ.. ಅಷ್ಟೇ ಅಲ್ಲ, ಆ ಬಳಿಕ ನಡೆದ ಪ್ರತಿಯೊಂದು ಘಟನೆಯಲ್ಲಿ ಆರೋಪಿತರ ಹೆಜ್ಜೆ ಗುರುತನ್ನು ಪೊಲೀಸರು ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಲ್ಲಿ (Renukaswamy Murder) ಪ್ರತಿಯೊಬ್ಬರ ಪಾತ್ರವನ್ನು ಫಿಂಗರ್ ಪ್ರಿಂಟ್ ನ ಸಾಕ್ಷಿ ಸಮೇತ ಕಟ್ಟಿಹಾಕಿದ್ದಾರೆ. ಇನ್ನು ಇದೆಲ್ಲದರ ನಡುವೆ ಜೈಲಿನಲ್ಲಿ ಕುಳಿತ ದರ್ಶನ್ ತೂಕದಲ್ಲಿ ಬಾರಿ ಇಳಿಕೆಯಾಗಿದ್ದು, ಜೈಲು ಅಧಿಕಾರಿಗಳಿಗೆ ತಲೆ ಬಿಸಿ ತಂದಿದೆ.
ಹೌದು, ರೇಣುಕಾ ಸ್ವಾಮಿ ಕೊಲೆ (Renukaswamy Murder) ಬಳಿಕ ಮೃತ ದೇಹ ಸಾಗಿಸಲು ತಂತ್ರ ಎಣಿದ ಡಿ ಗ್ಯಾಂಗ್ ಯಾವುದೇ ಕ್ಲ್ಯೂ ಸಿಗದಂತೆ ಮಾಡುವ ಯತ್ನ ಮಾಡಿದ್ದರು. ಅದರಂತೆ ರವಿ, ಕಾರ್ತಿಕ್ ಹಾಗೂ ನಿಖಿಲ್ ಶವ ಸಾಗಿಸುವ ಕೆಲಸ ಮಾಡಿ ಸಾಕ್ಷಿ ನಾಶ ಮಾಡುವ ಕೆಲಸಕ್ಕೆ ಮುಂದಾಗಿದ್ದರು. ಈ ಬಗ್ಗೆ ಪೊಲೀಸ್ ತನಿಖೆಯಲ್ಲಿ ಮಾಹಿತಿಗಳು ಹೊರಬಂದಿದ್ದವು. ಮಾತ್ರವಲ್ಲ, ಆ ಮೂವರಿಂದಲೇ ಈ ಕೃತ್ಯದ ಬಗ್ಗೆ ಹೇಳಿಕೆ ಪಡೆಯುವುದಲ್ಲಿ ಖಾಕಿ ಸಫಲವಾಗಿತ್ತು. ಅಷ್ಟೇ ಅಲ್ಲದೇ, ನ್ಯಾಯಾಧೀಶರ ಮುಂದೆ 164 ಸ್ಟೇಟ್ಮೆಂಟ್ ಸಹ ಮಾಡಿಸಿ ಕೃತ್ಯದ ಪ್ರಮುಖ ಸಾಕ್ಷಿಗಳನ್ನಾಗಿ ಕಲೆ ಹಾಕಿದ್ದಾರೆ. ಜೊತೆಗೆ ಇದೇ ದಾರಿಯಲ್ಲಿ ನಡೆದಿದ್ದ ಕಾರ್ತಿಕ್ ಹಾಗೂ ನಿಖಿಲ್ ಆಟೋ ಏರಿ ನಾಯಂಡಹಳ್ಳಿಗೆ ತಲುಪಿದ್ದು, ಇದರ ಜಾಡು ಹಿಡಿದ ಖಾಕಿ ಆಟೊ ಚಾಲಕನ ಪತ್ತೆ ಮಾಡುವುದರ ಜೊತೆ ಆತನಿಂದ ಹೇಳಿಕೆ ಪಡೆದು ಆರೋಪಿತರ ಗುರುತು ಪತ್ತೆ ಮಾಡಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ- ʻಕರಾವಳಿʼಯಿಂದ ದರ್ಶನ್ ಕೈ ಬಿಟ್ಟ ವಿಚಾರಕ್ಕೆ ಸ್ಪಷ್ಟನೆ ಕೊಟ್ಟ ಚಿತ್ರತಂಡ!
ಕ್ರೈಂ ಸೀನ್ ಫಿಂಗರ್ ಪ್ರಿಂಟ್ (Fringer Print) ಜೊತೆ ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚ್..! ದರ್ಶನ್, ಪವಿತ್ರಗೌಡ ಸೇರಿದಂತೆ ಹತ್ತು ಜನರಿಗೆ ಮತ್ತಷ್ಟು ಸಂಕಷ್ಟ..!
ಮತ್ತೊಂದೆಡೆ ತನಿಖೆ ವೇಳೆ ಕೃತ್ಯ ನಡೆದ ಸ್ಥಳ, ಮೃತದೇಹ ಇಟ್ಟಿದ್ದ ಸೆಕ್ಯೂರಿಟಿ ಕೊಠಡಿ ಹಾಗೂ ಮೃತದೇಹ ಎಸೆದ ಸ್ಥಳ ಹೀಗೆ ಹಲವು ಕಡೆ ಎಫ್ ಎಸ್ ಎಲ್ ತಂಡಗಳಿಂದ ಕೆಲ ಮಹತ್ವದ ಸಾಕ್ಷಿಗಳ ಹುಡುಕಾಟ ನಡೆಸಿದ್ದು, ಈ ವೇಳೆ ಮಹತ್ವದ ಫಿಂಗರ್ ಪ್ರಿಂಟ್ ನ ಸಾಕ್ಷಿಗಳು ಲಭ್ಯವಾಗಿತ್ತು. ಅವೆಲ್ಲವನ್ನೂ ಸಂಗ್ರಹಿಸಿದ್ದ ಎಫ್ ಎಸ್ ಎಲ್ ಆರೋಪಿತರ ಫಿಂಗರ್ ಪ್ರಿಂಟ್ ಗೆ ಮ್ಯಾಚ್ ಮಾಡಿದ್ದು, ಈ ವೇಳೆ ಹತ್ತು ಮಂದಿಯ ಫಿಂಗರ್ ಪ್ರಿಂಟ್ ಮ್ಯಾಚ್ ಆಗಿದೆ.. ಈ ಮೂಲಕ ದರ್ಶನ್ ಅಂಡ್ ಗ್ಯಾಂಗ್ (Darshan And Gang) ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಇದಷ್ಟೇ ಅಲ್ಲ, ಕೊಲೆ ಸಂಬಂಧ ಭೌತಿಕ ಹಾಗೂ ಜೈವಿಕ ವಸ್ತುಗಳ ಮಹತ್ವದ ಸಾಕ್ಷಿ ಸಂಗ್ರಹಿಸಲು ಮುಂದಾದ ಪೊಲೀಸರು ಬೆಂಗಳೂರು ಹಾಗೂ ಹೈದ್ರಾಬಾದ್ ನ ಎಫ್‌ಎಸ್‌ಎಲ್ ಗಳಿಗೆ ಕೆಲ ಮಹತ್ವದ ವಸ್ತುಗಳ ಪರಿಕ್ಷೆಗೆ ಕಳುಹಿಸಿದೆ. ಅದರಂತೆ ಬೆಂಗಳೂರಿನ ಎಫ್‌ಎಸ್‌ಎಲ್ ಗೆ ರಕ್ತದ ಕಲೆ, ಹೇರ್, ಡಿಎನ್‌ಎ ಸ್ಯಾಂಪಲ್ ಕಳುಹಿಸಿದ್ದಾರೆ. ಮೊಬೈಲ್ ನ ಡಿಲೀಟ್ ಆದ ಮಾಹಿತಿಗಳ ರಿಟ್ರೀವ್, ಸಿಸಿಟಿವಿ ಸೇರಿದಂತೆ ತಾಂತ್ರಿಕ ಸಾಕ್ಷ್ಯಗಳನ್ನು ಹೈದ್ರಾಬಾದ್ ಗೆ ಕಳುಹಿಸಿದೆ.. ಜೊತೆಗೆ ಶೀಘ್ರವಾಗಿ ಇದರ ವರದಿ ನೀಡುವಂತೆ ಮನವಿ ಸಹ ಮಾಡಲಾಗಿದೆ..
ಇದನ್ನೂ ಓದಿ- ದಾಸನಿಗಾಗಿ ಶಕ್ತಿ ದೇವತೆಯ ಮೊರೆ ಹೋದ ವಿಜಯಲಕ್ಷ್ಮಿ..!
ಇನ್ನು ಇದಷ್ಟೇ ಅಲ್ಲದೇ, ಮೃತ ರೇಣುಕಾಸ್ವಾಮಿ ಸಂಬಂಧ ಆತನ ಕೆಲಸದ ಮಾಹಿತಿ ಹಾಗೂ ಆತನ ವೈಯಕ್ತಿಕ ಮಾಹಿತಿಗಳನ್ನು ದಾಖಲೆ ಸಮೇತ ಸಂಗ್ರಿಸುತ್ತಿರುವ ಪೊಲೀಸರು ಆತ ಕೆಲಸ ಮಾಡುತಿದ್ದ ಕಂಪನಿಯಿಂದ ಕೆಲ ಮಹತ್ವದ ದಾಖಲೆ ಪಡೆದುಕೊಂಡಿದ್ದಾರೆ.. ಒಟ್ಟಾರೆ ಪ್ರತಿ ಹಂತದಲ್ಲೂ ಯಾವುದೇ ಲೋಪ ಆಗದ ರೀತಿ ಹಾಗೂ ಡಿ ಗ್ಯಾಂಗ್ ಅಸಲಿ ಮುಖ ಕಳಚುವ ನಿಟ್ಟಿನಲ್ಲಿ ಇಂಚಿಂಚು ಸಾಕ್ಷಿಗಳ ಕಲೆಹಾಕುತ್ತಿರುವ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.