Somavara Dina Bhavishya In Kannada: ಶ್ರೀ ಶಾಲಿವಾಣ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ನವಮಿ ತಿಥಿಯ ಈ ದಿನ ಸೋಮವಾರ ಸ್ವಾತಿ ನಕ್ಷತ್ರ, ಸಿದ್ಧ ಯೋಗ ಇರಲಿದೆ. ಇಂದು ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಜೀವನದ ದಿಕ್ಕೇ ಬದಲಾಗಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಸ್ವೀಕರಿಸುವಿರಿ. ಭವಿಷ್ಯದ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವಿರಿ. ಸಂದರ್ಶನ ನೀಡಲು ತೆರಳುವವರಿಗೆ ಇಂದು ಯಶಸ್ಸಿನ ಸಾಧ್ಯತೆಗಳಿವೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಅನುಕೂಲಕರವಾದ ದಿನ. ಬಿಸಿನೆಸ್ ಸಂಬಂಧಿತ ಪ್ರವಾಸಗಳು ಫಲಪ್ರದವಾಗಿರುತ್ತದೆ. ನಿಮ್ಮ ಸಂಗಾತಿಯು ವೃತ್ತಿ ಬದುಕಿನಲ್ಲಿ ಪ್ರಗತಿಯನ್ನು ಕಾಣುತ್ತಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ತಕ್ಕ ಪ್ರತಿಫಲ ದೊರೆಯುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ದಿನದ ಆರಂಭವು ಉತ್ಸಾಹದಿಂದ ಕೂಡಿರಲಿದೆ. ಜೀವನದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ಕೆಲವು ಗುಪ್ತ ವಿರೋಧಿಗಳು ನಿಮ್ಮ ಕೆಲಸದಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಾರೆ. ಆದಾಗ್ಯೂ, ಅವರು ಜಯ ಸಾಧಿಸಲು ಸಾಧ್ಯವಾಗುವುದಿಲ್ಲ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಸಂತೋಷದಿಂದ ಕೂಡಿದ ದಿನ. ವ್ಯಾಪಾರದಲ್ಲಿ ಲಾಭವನ್ನು ಕಾಣಬಹುದು. ಹೊಸ ವ್ಯವಹಾರಕ್ಕೆ ಕೈ ಹಾಕಲು ಯೋಚಿಸುತ್ತಿದ್ದರೆ ದಿನವು ಅತ್ಯುತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ.
ಇದನ್ನೂ ಓದಿ- Rahu Gochar: ಶನಿ ನಕ್ಷತ್ರದಲ್ಲಿ ರಾಹು, ಈ ರಾಶಿಯವರಿಗೆ ತುಂಬಾ ಎಚ್ಚರಿಕೆಗೆ ಅಗತ್ಯ, ಇಲ್ಲವೇ ಭಾರೀ ನಷ್ಟ
ಸಿಂಹ ರಾಶಿಯವರ ಭವಿಷ್ಯ (Leo Horoscope):
ದಿನದ ಆರಂಭವು ಉತ್ತಮವಾಗಿರಲಿದೆ. ಸಂಜೆ ನಿಮ್ಮ ಪ್ರೀತಿಪಾತ್ರರ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ಭಾಗಿಯಾಗಬಹುದು. ಬಿಲ್ಡರ್ಗಳಿಗೆ ಹೊಸ ಒಪ್ಪಂದಗಳು ಹೆಚ್ಚಿನ ಲಾಭವನ್ನು ತರುತ್ತವೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ನಿಮಗೆ ಅನುಕೂಲಕರ ದಿನ. ಸಹೋದ್ಯೋಗಿಗಳ ಸಹಕಾರದಿಂದ ನೀವು ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಿರಿ. ವೃತ್ತಿ ಬದುಕಿನಲ್ಲಿ ಹಠಾತ್ ಬದಲಾವಣೆಗಳು ನಿಮ್ಮನ್ನು ಗೊಂದಲಗೊಳಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಮಿಶ್ರ ಫಲಿತಾಂಶಗಳಿಂದ ಕೂಡಿದ ದಿನ. ಆರ್ಥಿಕವಾಗಿ ಫಲಪ್ರದವಾಗಿರಲಿದೆ. ನಿಮ್ಮ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಬರುತ್ತವೆ. ನಿಮ್ಮ ಸಾಮಾಜಿಕ ನೆಟ್ವರ್ಕ್ ಬಲವಾಗಿ ಉಳಿಯುತ್ತದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮಗೆ ವಿಶೇಷವಾಗಿದ್ದು, ಜೀವನದಲ್ಲಿ ಹೊಸ ಬದಲಾವಣೆಗಳನ್ನು ತರಲಿದೆ. ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು ಆನಂದಿಸುವಿರಿ. ನೀವು ಇಂದು ಆರ್ಥಿಕವಾಗಿ ಯಶಸ್ಸನ್ನು ಪಡೆಯುತ್ತೀರಿ.
ಇದನ್ನೂ ಓದಿ- Guru Gochar: ಗುರು ದೆಸೆಯಿಂದ ಕುಬೇರ ರಾಜಯೋಗ 2025ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ನಿಮಗೆ ಉತ್ತಮ ದಿನ. ಉದ್ಯೋಗ ಕ್ಷೇತ್ರದಲ್ಲಿ ನೀವು ಹೊಸ ಮೈಲುಗಲ್ಲನ್ನು ಸಾಧಿಸಲು ತಂತ್ರಜ್ಞಾನದ ಸಹಾಯವನ್ನು ತೆಗೆದುಕೊಳ್ಳಿ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಹೊರಗಡೆ ಹೋಗಲು ಯೋಜಿಸಬಹುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಉತ್ಸಾಹದಿಂದ ಕೂಡಿದ ದಿನ ಇದಾಗಿದೆ. ವಿವಾಹಿತರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು. ವ್ಯಾಪಾರ ವ್ಯವಹಾರದಲ್ಲಿ ನೀವು ದೊಡ್ಡ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಹಿತ ಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಸಾಮಾನ್ಯವಾದ ದಿನ. ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆ ಹೋಗಬಹುದು. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ ದಿನ. ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುತ್ತಿದ್ದರೆ ಇಂದು ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮ್ಮ ಕೆಲಸ-ಕಾರ್ಯಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಹೊಸ ವ್ಯವಹಾರಕ್ಕಾಗಿ ಚಿಂತಿಸುತ್ತಿದ್ದರೆ ಉತ್ತಮ ದಿನ. ರಾಜಕೀಯಕ್ಕೆ ಸಂಬಂಧಿಸಿದ ಜನರ ಗೌರವ ಹೆಚ್ಚಾಗುತ್ತದೆ. ಪಕ್ಷದಲ್ಲಿ ಉನ್ನತ ಸ್ಥಾನವನ್ನೂ ಪಡೆಯಲಿದ್ದಾರೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.