ಜನಸಂಖ್ಯಾ ನಿಯಂತ್ರಣದ ಕುರಿತು ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದ ಒವೈಸಿ

ಗುರುವಾರ ಮೊರಾದಾದ್ ನಲ್ಲಿ ಮಾತನಾಡಿದ್ದ RSS ಮುಖ್ಯಸ್ಥ ಮೋಹನಜೀ ಭಾಗವತ್, ಜನಸಂಖ್ಯಾ ನಿಯಂತ್ರಣಕ್ಕೆ ದೇಶಾದ್ಯಂತ ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು ಎಂದಿದ್ದರು.  

Last Updated : Jan 19, 2020, 02:23 PM IST
ಜನಸಂಖ್ಯಾ ನಿಯಂತ್ರಣದ ಕುರಿತು ಭಾಗವತ್ ಹೇಳಿಕೆಗೆ ತಿರುಗೇಟು ನೀಡಿದ ಒವೈಸಿ title=

ನಿಜಾಮಾಬಾದ್(ತೆಲಂಗಾಣ): ದೇಶದ ಅಸಲಿ ಸಮಸ್ಯೆ ನಿರುದ್ಯೋಗ ಸಮಸ್ಯೆಯಾಗಿದ್ದು, ಜನಸಂಖ್ಯೆ ಅಲ್ಲ ಎಂದು ಆಲ್ ಇಂಡಿಯಾ ಮಜ್ಲೀಸ್-ಎ-ಇತ್ತೆಹಾದುಲ್ ಮುಸ್ಲಮೀನ್ (AIMIM) ಪಕ್ಷದ ಅಧ್ಯಕ್ಷ  ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಶನಿವಾರ ನಿಜಾಮಾಬಾದ್ ನಲ್ಲಿ ಮಾತನಾಡಿರುವ ಒವೈಸಿ, ಮುಸ್ಲಿಮರ ಜನಸಂಖ್ಯೆ ನಿಯಂತ್ರಣ RSSನ ಅಜೆಂಡಾ ಆಗಿದೆ ಎಂದು ಆರೋಪಿಸಿದ್ದಾರೆ. ಗುರುವಾರ ಮೊರಾದಾದ್ ನಲ್ಲಿ ಮಾತನಾಡಿದ್ದ RSS ಮುಖ್ಯಸ್ಥ ಮೋಹನಜೀ ಭಾಗವತ್, ಜನಸಂಖ್ಯಾ ನಿಯಂತ್ರಣಕ್ಕೆ ದೇಶಾದ್ಯಂತ ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು ಎಂದಿದ್ದರು.

ಈ ಬಗ್ಗೆ ಮಾತನಾಡಿರುವ ಒವೈಸಿ, "ನನಗೆ ನಿಮ್ಮ(ಮೋಹನ್ ಭಾಗವತ್) ಹೇಳಿಕೆಯ ಕುರಿತು ನಾಚಿಕೆಯಾಗುತ್ತಿದೆ. ನನಗೆ ಎರಡಕ್ಕಿಂತ ಹೆಚ್ಚು ಮಕ್ಕಳಿವೆ. ಅಷ್ಟೇ ಯಾಕೆ ಹಲವು BJP ಮುಖಂಡರಿಗೂ ಕೂಡ ಎರಡಕ್ಕಿಂತ ಹೆಚ್ಚು ಮಕ್ಕಳಿವೆ. ಸಂಘ ಯಾವಾಗಲು ಮುಸ್ಲಿಮರ ಜನಸಂಖ್ಯೆ ಕಡಿಮೆ ಮಾಡುವ ಮಾತು ಆಡುತ್ತದೆ. ಈ ದೇಶದ ಅಸಲಿ ಸಮಸ್ಯೆ ನಿರುದ್ಯೋಗ ಸಮಸ್ಯೆಯಾಗಿದ್ದು, ಜನಸಂಖ್ಯೆ ಅಲ್ಲ" ಎಂದು ಹೇಳಿದ್ದಾರೆ. ದೇಶದಲ್ಲಿ ನೌಕರಿ ಪಡೆದ ಯುವಕರ ಸಂಖ್ಯೆ ಎಷ್ಟು ಎಂದು ಭಾಗವತ್ ಅವರನ್ನು ಪ್ರಶ್ನಿಸಿರುವ ಒವೈಸಿ, ದೇಶದಲ್ಲಿ ಉಂಟಾಗುತ್ತಿರುವ ನಿರುದ್ಯೋಗವನ್ನು ಗುರಿಯಾಗಿಸಿ , "ಕೇವಲ 2018 ನೇ ಸಾಲಿನಲ್ಲಿ, ನಿರುದ್ಯೋಗದ ಕಾರಣ 36 ಯುವಕರು ಆತ್ಮಹತ್ಯೆಗೆ ಶರಣಾಗಿದ್ದಾರೆ" ಎಂದಿದ್ದಾರೆ.

ಎರಡು ಮಕ್ಕಳ ನೀತಿ ಕುರಿತು ಮೋಹನ್ ಭಾಗವತ್ ಹೇಳಿದ್ದೇನು?
ಮುರಾದಾಬಾದ್ ನಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್, "ಜನಸಂಖ್ಯಾ ನಿಯಂತ್ರದದ ಕಾನೂನು ಅನುಷ್ಠಾನಕ್ಕೆ ಆಂದೋಲನ ನಡೆಸುವುದು ಸಂಘದ ಮುಂದಿನ ಅಜೆಂಡಾ ಆಗಿರಲಿದ್ದು, ನಾವು ನಿರಂತರವಾಗಿ ಎರಡೇ ಮಕ್ಕಳು ನೀತಿಯ ಪರವಾಗಿದ್ದೇವೆ. ಆದರೆ, ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ನಿಲುವು ತೆಗೆದುಕೊಳ್ಳಲಿದೆ" ಎಂದಿದ್ದರು.

Trending News