RCB ಸೇರಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾನೆ ಟೀಂ​ ಇಂಡಿಯಾ ಈ ಯುವ ಬ್ಯಾಟ್ಸ್‌ʼಮನ್.​​.. ಯಾರವರು?

Nitish Reddy: ನಿತೀಶ್ ರೆಡ್ಡಿ, ಸನ್‌ರೈಸರ್ಸ್ ಹೈದರಾಬಾದ್‌ ಪರ ಲೀಗ್‌ʼನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬ್ಯಾಟ್ ಮತ್ತು ಬಾಲ್‌ʼನೊಂದಿಗೆ ಸಮಾನವಾಗಿ ಕೊಡುಗೆ ನೀಡಿದ್ದ ಅವರು, ಋತುವಿನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದಿದ್ದರು.  

Written by - Bhavishya Shetty | Last Updated : Jul 26, 2024, 03:18 PM IST
    • ನಿತೀಶ್ ರೆಡ್ಡಿ ಲೀಗ್‌ʼನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು
    • ವಿರಾಟ್ ಕೊಹ್ಲಿ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿದ ನಿತೀಶ್ ರೆಡ್ಡಿ
    • ಐಪಿಎಲ್ 2024 ರಲ್ಲಿ ಅತ್ಯುತ್ತಮ ಯುವ ಆಟಗಾರರಲ್ಲಿ ಒಬ್ಬರಾಗಿದ್ದರು
RCB ಸೇರಲು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾನೆ ಟೀಂ​ ಇಂಡಿಯಾ ಈ ಯುವ ಬ್ಯಾಟ್ಸ್‌ʼಮನ್.​​.. ಯಾರವರು? title=
File Photo

Nitish Reddy: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡಿದ ಅನುಭವದ ಬಗ್ಗೆ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಆಲ್‌ರೌಂಡರ್ ನಿತೀಶ್ ರೆಡ್ಡಿ ಮಾತನಾಡಿದ್ದಾರೆ. ಹೈದರಾಬಾದ್ ಆಲ್‌ʼರೌಂಡರ್ ನಿತೀಶ್ ರೆಡ್ಡಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ಅತ್ಯುತ್ತಮ ಯುವ ಆಟಗಾರರಲ್ಲಿ ಒಬ್ಬರಾಗಿದ್ದರು. 

ಇದನ್ನೂ ಓದಿ:  ಅಪ್ಪ ನಿವೃತ್ತಿಯಾಗ್ತಿದ್ದಂತೆ ಮಗ ಫೀಲ್ಡ್‌ʼಗಿಳಿಯಲು ರೆಡಿ... ಈ ಟೂರ್ನಿ ಮೂಲಕ ದ್ರಾವಿಡ್‌ ಪುತ್ರ ಕ್ರಿಕೆಟ್‌ʼಗೆ ಭರ್ಜರಿ ಎಂಟ್ರಿ

ನಿತೀಶ್ ರೆಡ್ಡಿ, ಸನ್‌ರೈಸರ್ಸ್ ಹೈದರಾಬಾದ್‌ ಪರ ಲೀಗ್‌ʼನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಬ್ಯಾಟ್ ಮತ್ತು ಬಾಲ್‌ʼನೊಂದಿಗೆ ಸಮಾನವಾಗಿ ಕೊಡುಗೆ ನೀಡಿದ್ದ ಅವರು, ಋತುವಿನ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಗೆದಿದ್ದರು.

ಇನ್ನು ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿದ ನಿತೀಶ್ ರೆಡ್ಡಿ, "ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ದೊಡ್ಡ ಅಭಿಮಾನಿ. 2023 ರಲ್ಲಿ ಕೊಹ್ಲಿ ಜೊತೆ ಆಟೋಗ್ರಾಫ್ ಮತ್ತು ಫೋಟೋ ತೆಗೆದುಕೊಂಡಿದ್ದೆ. ಪಂದ್ಯದ ನಂತರದ ಹ್ಯಾಂಡ್‌ಶೇಕ್ ಸಮಯದಲ್ಲಿ ಕೊಹ್ಲಿ ನನ್ನ ಹೆಸರನ್ನು ನೆನಪಿಸಿಕೊಂಡರು" ಎಂದು ಹೇಳಿದ್ದಾರೆ.  

"ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ನನ್ನ ಫೇವರೇಟ್ . ನಾನು ಕಳೆದ 10 ವರ್ಷಗಳಿಂದ RCB ಯ ದೊಡ್ಡ ಅಭಿಮಾನಿಯಾಗಿದ್ದೇನೆ. 2023 ರಲ್ಲಿ, ನನಗೆ ವಿರಾಟ್ ಕೊಹ್ಲಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ಆಗ ಶೇಕ್‌ ಹ್ಯಾಂಡ್‌ ಮಾಡಲು ಅವಕಾಶ ಸಿಕ್ಕರೆ ಸಾಕು ಎಂದು ಭಾವಿಸಿದ್ದೆ" ಎಂದಿದ್ದಾರೆ. 

ಇದನ್ನೂ ಓದಿ:  ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗನ ಪ್ರೇಯಸಿಗೆ ಮಿಸ್‌ʼಕಾಲ್‌ ನೀಡಿ ಸಿಕ್ಕಿಬಿದ್ದ ಗೌತಮ್ ಗಂಭೀರ್!? ಸ್ವತಃ ಆ ನಟಿಯೇ ರೀವಿಲ್ ಮಾಡಿದ ಶಾಕಿಂಗ್ ಸಂಗತಿ

"2024ರಲ್ಲಿ, ವಿರಾಟ್ ಕೊಹ್ಲಿ ನನ್ನ ಆಟವನ್ನು ಗಮನಿಸಬೇಕೆಂದು ಆರ್‌ಸಿಬಿ ವಿರುದ್ಧ ಉತ್ತಮವಾಗಿ ಆಡಬೇಕೆಂದು ನಾನು ಬಯಸಿದ್ದೆ. ಆ ಪಂದ್ಯದಲ್ಲಿ ನಾನು ಬ್ಯಾಟಿಂಗ್ ಮಾಡಲು ಸಾಧ್ಯವಾಗದಿದ್ದರೂ, ಪಂದ್ಯದ ನಂತರದ ಹ್ಯಾಂಡ್‌ಶೇಕ್ ಸಮಯದಲ್ಲಿ ಅವರು ನನ್ನ ಹೆಸರನ್ನು ನೆನಪಿಸಿಕೊಂಡರು. ಅದು ನನಗೆ ಬಹಳಷ್ಟು ಖುಷಿ ನೀಡಿತು" ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News