Gold Rate Today : ಚಿನ್ನ ಮತ್ತು ಬೆಳ್ಳಿಯ ಆಮದು ಮೇಲಿನ ಕಸ್ಟಮ್ ಸುಂಕವನ್ನು ಕಡಿಮೆ ಮಾಡುವ ಸರ್ಕಾರದ ಘೋಷಣೆಯ ನಂತರ,ಸ್ಥಳೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಶೇಕಡಾ 7 ರಷ್ಟು ಕುಸಿದಿವೆ. ಅಂದರೆ 10 ಗ್ರಾಂ ಚಿನ್ನದ ಮೇಲೆ ಸುಮಾರು 5000 ರೂ. ಇಳಿಕೆಯಾಗಿದೆ.ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವವರ ಮತ್ತು ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.
ಕಸ್ಟಮ್ಸ್ ಸುಂಕ ಕಡಿತದಿಂದಾಗಿ ಚಿನ್ನದ ಆಮದು ಅಗ್ಗವಾಗಿದೆ.ಈ ಕ್ರಮವು ಚಿನ್ನದ ಕಳ್ಳಸಾಗಣೆಗೆ ಕಡಿವಾಣ ಹಾಕುತ್ತದೆ.ಚಿನ್ನದ ಬೆಲೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಿರುವುದರಿಂದ ಚಿನ್ನದ ಬೆಲೆಯಲ್ಲಿ ಕಡಿತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಇವರು ಜುಲೈ 31 ರ ನಂತರವೂ ITR ಸಲ್ಲಿಸಬಹುದು !ಆದಾಯ ತೆರಿಗೆ ವಿಭಾಗದ ಮಾಹಿತಿ !
ಇಳಿಕೆಯಾಗುತ್ತಲೇ ಇದೆ ಚಿನ್ನದ ಬೆಲೆ :
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ರಿಂದ ಶೇಕಡಾ 6 ಕ್ಕೆ ಇಳಿಸುವ ಘೋಷಣೆಯ ನಂತರ, ಚಿನ್ನದ ಬೆಲೆ 10 ಗ್ರಾಂಗೆ 3,350 ರೂ. ಇಳಿಕೆಯಾಗಿ 72,300 ರೂ.ಗೆ ಇಳಿದಿದೆ. ಅಖಿಲ ಭಾರತ ಬುಲಿಯನ್ ಅಸೋಸಿಯೇಷನ್ ಪ್ರಕಾರ,ಬುಧವಾರ ಚಿನ್ನದ ಬೆಲೆಯಲ್ಲಿ 650 ರೂಪಾಯಿಗಳಷ್ಟು ಇಳಿಕೆಯಾಗಿದೆ.ಗುರುವಾರ ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ ಕಂಡು 10 ಗ್ರಾಂಗೆ 1000 ರೂಪಾಯಿ ಇಳಿಕೆ ಕಂಡು 70,650 ರೂಪಾಯಿಗೆ ತಲುಪಿದೆ. ಸುಂಕ ಕಡಿತದ ನಂತರ, ಚಿನ್ನದ ಬೆಲೆಯು ಕಳೆದ ಮೂರು ಸೆಷನ್‌ಗಳಲ್ಲಿ 10 ಗ್ರಾಂಗೆ 5,000 ಅಥವಾ 7.1 ಪ್ರತಿಶತದಷ್ಟು ಕುಸಿದಿದೆ.
ಮೂಲ ಕಸ್ಟಮ್ಸ್ ಸುಂಕ ಕಡಿತಗೊಳಿಸಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ ಎನ್ನುತ್ತಾರೆ ವ್ಯಾಪಾರಿಗಳು.ಇದಲ್ಲದೇ, ಇದು ಹಬ್ಬದ ಸೀಸನ್‌ಗೂ ಮುನ್ನ ಆಭರಣ ವ್ಯಾಪಾರಿಗಳಿಗೆ ಮಾರಾಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಚಿನ್ನದ ವಲಯದ ವ್ಯಾಪಾರಿಗಳು ಈ ಬಗ್ಗೆ ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು ಎನ್ನುತ್ತಾರೆ ಮತ್ತೊಬ್ಬ ವ್ಯಾಪಾರಿ.
ಇದನ್ನೂ ಓದಿ : Gruha Lakshmi Scheme: ಈ ದಿನ ಮಹಿಳೆಯರ ಖಾತೆಗೆ ಬರಲಿದೆ 2 ತಿಂಗಳ ʼಗೃಹಲಕ್ಷ್ಮಿʼ ಹಣ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.