Cement Garlic Video : ವಂಚನೆ ಮಾಡುವ ವಂಚಕರು ಹೊಸ ಹಂತವನ್ನು ತಲುಪಿದ್ದಾರೆ.ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದ್ದು,ಮಾರುಕಟ್ಟೆಯಲ್ಲಿ ಸಿಮೆಂಟ್ ಬೆಳ್ಳುಳ್ಳಿ ಪೂರೈಕೆಗೆ ಇಳಿದಿದ್ದಾರೆ. ಹೌದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಾರಾಷ್ಟ್ರದ ಅಕೋಲಾದಲ್ಲಿ ಇಂತಹದ್ದೇ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಸಿಮೆಂಟ್‌ನಿಂದ ಮಾಡಿದ ನಕಲಿ ಬೆಳ್ಳುಳ್ಳಿಯನ್ನು ವೀಡಿಯೊದಲ್ಲಿ ಕಾಣಬಹುದು.
ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ಪ್ರಾರಂಭಿಸಿದಾಗ,ಅದು ಬೆಳ್ಳುಳ್ಳಿಯಲ್ಲ ಸಿಮೆಂಟ್ ಎನ್ನುವ ಸತ್ಯ ತಿಳಿಯುತ್ತದೆ. ಇನ್ನು ಇದರ ತೂಕವೂ ಹೆಚ್ಚು.ಇದರ ಲಾಭವನ್ನೇ ವಂಚಕರು ಪಡೆದುಕೊಳ್ಳುತ್ತಿರುವುದು. ಈ ಸಿಮೆಂಟ್ ಬೆಳ್ಳುಳ್ಳಿಯನ್ನು ಅಕೋಲಾದ ಬಜೋರಿಯಾ ನಗರ ಮಾರುಕಟ್ಟೆಗೆ ಸರಬರಾಜು ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ : ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ಕಪ್ಪು ಕಾಳಿಂಗನ ವಿಡಿಯೋ ವೈರಲ್.!
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸುಭಾಷ್ ಪಾಟೀಲ್ ಅವರ ಪತ್ನಿ ತರಕಾರಿ ಖರೀದಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಬೀದಿ ವ್ಯಾಪಾರಿಯಿಂದ ಬೆಳ್ಳುಳ್ಳಿ ಖರೀದಿಸಿದ್ದಾರೆ. ಮನೆಗೆ ಬಂದು ಅಡುಗೆ ಮಾಡುವಾಗ ಬೆಳ್ಳುಳ್ಳಿಯನ್ನು ಸುಲಿಯಲು ಪ್ರಾರಂಭಿಸಿದಾಗ,ಅವರ ಕಣ್ಣನ್ನು ನಂಬುವುದೇ ಅವರಿಗೆ ಸಾಧ್ಯವಾಗಲಿಲ್ಲ. ಹೊರಗಡೆಯಿಂದ ಬೆಳ್ಳುಳ್ಳಿ ರೀತಿ ಕಾಣುತ್ತಿದ್ದ ಆ ವಸ್ತು ಒಳಗಡೆಯಿಂದ ಬರೀ ಸಿಮೆಂಟ್ ಆಗಿತ್ತು.
ವಿಡಿಯೋ ನೋಡಿ.
Viral Video | महाराष्ट्र के अकोला में फेरीवाले ने महिला को बेचा सीमेंट से बना नकली लहसुन...#ScamAlert #CementGarlic #maharashtra #Garlic #FakeAlert pic.twitter.com/Tsa6E7X4IS
— Zee Business (@ZeeBusiness) August 18, 2024
ಇದನ್ನೂ ಓದಿ : ಹಾವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಮೈಝುಂ ಎನಿಸುವ ಬಲು ಅಪರೂಪದ ವಿಡಿಯೋ ವೈರಲ್
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ನೋಡಿದ ಬಳಕೆದಾರರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು ಈ ದಿನವನ್ನು ನೋಡುವುದೊಂದು ಬಾಕಿ ಇತ್ತು ಎಂದು ಪ್ರತಿಕ್ರಿಯೆ ನೀಡಿದರೆ, ಇನ್ನೊಬ್ಬರು ಜನ ವಂಚನೆಯ ಯಾವ ಹಂತಕ್ಕೆ ಇಳಿದಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬೆಳ್ಳುಳ್ಳಿಯನ್ನು ಪ್ರತಿ ಲೋಫ್‌ಗೆ 80-90 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ನಗರಗಳಲ್ಲಿ ಇದೇ ದರಗಳು ಅಸ್ತಿತ್ವದಲ್ಲಿವೆ.ಇಂತಹ ಸಮಯದಲ್ಲಿ ಪೂರೈಕೆಯೂ ಕಡಿಮೆ ಆಗಿರುವುದರಿಂದ ವಂಚಕರು ಜನರನ್ನು ವಂಚಿಸಲು ಹೊಸ ದಾರಿ ಕಂಡುಕೊಂಡಿದ್ದಾರೆ. ತರಕಾರಿ ಮಾರುಕಟ್ಟೆಗಳಲ್ಲಿ ನಕಲಿ ಬೆಳ್ಳುಳ್ಳಿ ಸರಬರಾಜಾಗುತ್ತಿದೆ.ಮುಂದಿನ ಬಾರಿ ನೀವು ತರಕಾರಿಗಳನ್ನು ಖರೀದಿಸಲು ಹೋದಾಗ,ಬಹಳ ಎಚ್ಚರಿಕೆಯಿಂದ ಖರೀದಿ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ