ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಗಣನೀಯ ಕಡಿಮೆಯಾಗಿದೆ: ಬಿಪಿನ್ ರಾವತ್

ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಈಗ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದೂ ಅವರು ಹೇಳಿದರು.

Last Updated : Jan 8, 2018, 06:05 PM IST
ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಗಣನೀಯ ಕಡಿಮೆಯಾಗಿದೆ: ಬಿಪಿನ್ ರಾವತ್ title=

ನವದೆಹಲಿ : ಅರುಣಾಚಲ ಪ್ರದೇಶದೊಳಗೆ ಬಂದು ಭಾರತೀಯ ಭೂ ಪ್ರದೇಶದಲ್ಲಿ ಚೀನ ಕಾರ್ಮಿಕರು ರಸ್ತೆ ನಿರ್ಮಾಣಕ್ಕೆ ತೊಡಗಿದ್ದ ಪ್ರಕರಣವನ್ನು ಬಗೆಹರಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಇಂದು ಸೋಮವಾರ ಹೇಳಿದ್ದಾರೆ.

ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಈಗ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದೂ ಅವರು ಹೇಳಿದರು.

ಇಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾತನಾಡಿದ ಜನರಲ್‌ ರಾವತ್‌, ಎರಡು ದಿನಗಳ ಹಿಂದಷ್ಟೆ ಈ ವಿವಾದಿತ ಪ್ರಕರಣವನ್ನು ಕೊನೆಗೊಳಿಸುವ ಸಂಬಂಧವಾಗಿ ಗಡಿ ಸಿಬ್ಬಂದಿ ಸಭೆ ನಡೆದಿದ್ದು ಪ್ರಕರಣವು ಇತ್ಯರ್ಥಗೊಂಡಿದೆ ಎಂದು ಹೇಳಿದ್ದಾರೆ.

Trending News