ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ !

Chikki making video :ಚಿಕ್ಕಿ ಫ್ಯಾಕ್ಟರಿಯಲ್ಲಿ ಚಿಕ್ಕಿ ಮಾಡುವ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಚಿಕ್ಕಿ ಪ್ರಿಯರಾಗಿ ಉಳಿಯುತ್ತೀರಾ ನೀವೇ ಹೇಳಿ.

Written by - Ranjitha R K | Last Updated : Aug 28, 2024, 02:59 PM IST
  • ಚಿಕ್ಕಿ ಹೆಸರು ಕೇಳಿದ ಕೂಡಲೇ ಬಾಯಿಯಲ್ಲಿ ನೀರು ಬರುತ್ತದೆ.
  • ಚಿಕ್ಕಿ ಇಷ್ಟ ಇಲ್ಲ ಎನ್ನುವವರು ಬಹಳ ಕಡಿಮೆ.
  • ಚಿಕ್ಕಿ ತಯಾರಿಸುವ ಕಾರ್ಖಾನೆ ವಿಡಿಯೋ
 ಕಡಲೆ ಚಿಕ್ಕಿ, ಎಳ್ಳಿನ ಚಿಕ್ಕಿ ಎಲ್ಲರಿಗೂ ಇಷ್ಟ!ಆದರೆ ತಿನ್ನುವ ಮೊದಲು ಈ ವಿಡಿಯೋ ಒಮ್ಮೆ ನೋಡಿ ಬಿಡಿ ! title=

Chikki making video : ಚಿಕ್ಕಿ ಹೆಸರು ಕೇಳಿದ ಕೂಡಲೇ ಬಾಯಿಯಲ್ಲಿ ನೀರು ಬರುತ್ತದೆ. ಬಹುಶಃ ಚಿಕ್ಕಿ ಇಷ್ಟ ಇಲ್ಲ ಎನ್ನುವವರು ಬಹಳ ಕಡಿಮೆ.ಇದೊಂದು   ಸಾಂಪ್ರದಾಯಿಕ ಭಾರತೀಯ ಮಿಠಾಯಿ.ಬೆಲ್ಲದೊಂದಿಗೆ ಅನೆಕ ಪದಾರ್ಥಗಳನ್ನು ಮಿಕ್ಸ್ ಮಾಡಿ ಈ ಚಿಕ್ಕಿ ತಯಾರಿಸಲಾಗುತ್ತದೆ. ಹೆಚ್ಚಾಗಿ ತಯಾರಿಸುವುದು ಕಡಲೆ ಬೀಜದಿಂದಲೇ. ಕಡಲೆಬೀಜವಲ್ಲದೆ, ಹುರಿಗಡ್ಲೆ,ಎಳ್ಳು,ಮಂಡಕ್ಕಿ, ಅವಲಕ್ಕಿ, ಅಥವಾ ಒಣಕೊಬ್ಬರಿಯನ್ನು ಬಳಸಿ ಕೂಡಾ ಚಿಕ್ಕಿ ತಯಾರಿಸಲಾಗುತ್ತದೆ. ಆದರೆ ಜನ ಇಷ್ಟ ಪಟ್ಟು ತಿನ್ನುವ ಚಿಕ್ಕಿ ಯಾವುದು ಎಂದು ಕೇಳಿದರೆ ಬಹುತೇಕರು ಹೇಳುವುದು ಕಡಲೆ ಬೀಜ ಚಿಕ್ಕಿ ಎಂದೇ. 

ಚಿಕ್ಕಿ ತಯಾರಿಸುವ ಕಾರ್ಖಾನೆ:
ಚಿಕ್ಕಿ ತಯಾರು ಮಾಡುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಲಕ್ಷ್ಮಿಕುಂಜಿ ಎಂಬವರು ತಮ್ಮ  Instagram ಪೇಜ್ ನಲ್ಲಿ  ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಮೇಲೆ ಚಿಕ್ಕಿ ಇಷ್ಟ ಎನ್ನುವವರು ಚಿಕ್ಕಿಯ ಹೆಸರು ಕೇಳಿದ ಕೂಡಲೇ ಓಡಿ ಹೋಗಬೇಕು ಎನ್ನುವ ಹಾಗಿದೆ ಈ ವಿಡಿಯೋ. 

ಇದನ್ನೂ ಓದಿ : Viral Video: ಗೋಮಾತೆಯ ಎದುರು ಗರಿಬಿಚ್ಚಿ ಕುಣಿದ ನವಿಲು! ನವಿಲಿನ ನಾಟ್ಯಕ್ಕೆ ಮನಸೋತ ಕಾಮದೇನು

ಇಲ್ಲಿ ಬೆಲ್ಲ ಮತ್ತು ಕಡಲೆಕಾಯಿ ಮಿಶ್ರಣವನ್ನು ಬರಿ ನೆಲದ ಮೇಲೆ ಹರಡಿರುವುದನ್ನು ಕಾಣಬಹುದು.ಯಾವ ಜಾಗದಲ್ಲಿ ಬೆಲ್ಲ, ಕಡಲೆ ಬೀಜವನ್ನು ಹರಡಿ ಇಡ ಲಾಗಿದೆಯೂ ಅಲ್ಲಿಯೇ ಕಾರ್ಮಿಕರು ಬರೀಗಾಲಿನಲ್ಲಿ ಓಡಾಡುವುದನ್ನು ಕೂಡಾ ಕಾಣಬಹುದು. ಇನ್ನು ಈ ಮಿಶ್ರಣವನ್ನು ಅಲ್ಲಿಯೇ ಚಿಕ್ಕಿ ಅಚ್ಚಿಗೆ ಹಾಕಲಾಗುತ್ತದೆ. ಕೈ ಯಿಂದಲೇ ಅದನ್ನು ಸಮ ಮಾಡಲಾಗುತ್ತದೆ. ಮತ್ತೆ ಅಚ್ಚಿನಿಂದ ತೆಗೆದು ಅಲ್ಲಿಯೇ ನೆಲದ ಮೇಲೆ ಎಸೆಯಲಾಗುತ್ತದೆ. ಒಟ್ಟಿನಲ್ಲಿ ನೆಲದ ಮೇಲೆ ಬಿದ್ದಿರುವ ಧೂಳು, ಕಸ, ಕೊಳೆ ಎಲ್ಲಾ ಸೇರಿ ಚಿಕ್ಕಿಯ ರುಚಿ ಹೆಚ್ಚಿಸುವ ಪರಿಯೋ ಇದು ದೇವರೇ ಬಲ್ಲ. 

ಇದನ್ನೂ ಓದಿ : ಹಾವಿನೊಂದಿಗೆ ರೋಮ್ಯಾನ್ಸ್..! ವಿಷ ಸರ್ಪದ ಬಾಯಿಗೆ ನಾಲಿಗೆ ಹಾಕಿದ ಪುಂಡ.. ಮುಂದೆನಾಯ್ತು ನೀವೇ ನೋಡಿ!!

ಚಿಕ್ಕಿ ತಯಾರಿಸುವ ವೀಡಿಯೊ : 

 

ಈ ವೈರಲ್ ವೀಡಿಯೋಗೆ ಜನರ ಪ್ರತಿಕ್ರಿಯೆ :
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ ನೋಡಿ ಬಳಕೆದಾರರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News