ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋ

Puffed Rice making Video :ಮಂಡಕ್ಕಿ ನಿಮಗೂ ಇಷ್ಟಾನಾ? ಬಾಯಿ ಚಪ್ಪರಿಸಿಕೊಂಡು ಮಂಡಕ್ಕಿ, ಚುರುಮುರಿ, ಬೇಲ್ಪುರಿ ತಿನ್ನುವ ಮೊದಲು ದಕ್ಕಾಗಿ ಬಳಸುವ ಕಡಲೆಪುರಿ ತಯಾರಿಸುವ ಈ ವಿಡಿಯೋ ನೋಡಿ. 

Written by - Ranjitha R K | Last Updated : Aug 27, 2024, 11:22 AM IST
  • ಮಂಡಕ್ಕಿ, ಚುರ್ ಮುರಿಯನ್ನು ಇಷ್ಟಪಡದವರು ಬಹಳ ಕಡಿಮೆ.
  • ಇದನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ.
  • ದೋಸೆ, ಇಡ್ಲಿ ಮೆದುವಾಗಲು ಕೂಡಾ ಮಂಡಕ್ಕಿಯನ್ನು ಸೇರಿಸುತ್ತೇವೆ.
ಮಂಡಕ್ಕಿ, ಚುರುಮುರಿಯನ್ನು ಇಷ್ಟಪಟ್ಟು ತಿನ್ನುವವರು ಅದನ್ನು ತಯಾರಿಸುವ ಸ್ಥಳ ಮತ್ತು ವಿಧಾನವನ್ನು ಒಮ್ಮೆ ನೋಡಲೇ ಬೇಕು ! ಇಲ್ಲಿದೆ ನೋಡಿ ವಿಡಿಯೋ  title=

Puffed Rice making Video : ಮಂಡಕ್ಕಿ, ಚುರ್ ಮುರಿಯನ್ನು  ಇಷ್ಟಪಡದವರು ಬಹಳ ಕಡಿಮೆ.ಇದನ್ನು ಪಫ್ಡ್ ರೈಸ್,ಮಂಡಕ್ಕಿ,ಕಡಲೆಪುರಿ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ. ಮಂಡಕ್ಕಿಯಿಂದ ವಿವಿಧ ರೀತಿಯ ತಿನಿಸುಗಳನ್ನು ತಯಾರಿಸಬಹುದು.ಚಾಟ್ ಗಳಾದ ಚುರುಮುರಿ,ಬೆಲ್ ಪೂರಿ, ಹಿಸಿ ತಿಂಡಿಯಾದ ಮಂಡಕ್ಕಿ ಉಂಡೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಇನ್ನು   ದೋಸೆ, ಇಡ್ಲಿ ಮೆದುವಾಗಲು ಕೂಡಾ ಮಂಡಕ್ಕಿಯನ್ನು ಸೇರಿಸುತ್ತೇವೆ.

ಚಾಟ್ ಅಂಗಡಿಗೆ ಹೋಗಲಿ, ಜಾತ್ರೆಗೆ ತೆರಳಲ್ಲಿ ಅಲ್ಲಿ ಮಂಡಕ್ಕಿ, ಚುರ್ ಮುರಿ ಎಲ್ಲರ ಫೆವರಿಟ್, ಇನ್ನು ಮನೆಯಲ್ಲಿ ಇದ್ದಾಗಲೂ ಸಂಜೆಯ ಹೊತ್ತು ಏನಾದರು ತಿನ್ನಬೇಕು ಅನ್ನಿಸಿದಾಗ ಸುಲಭವಾಗಿ ಸಿಗುವುದೇ ಮಂಡಕ್ಕಿ. ಆದರೆ ನಾವುಗಳು ರುಚಿ ಎಂದು ಬಾಯಿ ಚಪ್ಪರಿಸಿ ತಿನ್ನುವ ಈ ಮಂಡಕ್ಕಿಯನ್ನು ಹೇಗೆ ತಯಾರಿಸಲಾಗುತ್ತದೆ ಎನ್ನುವುದು ತಿಳಿದಿದೆಯೇ? ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ : Viral Video: ಮಾದುವೆಯ ದಿನ ವಧುವಿನ ಎದುರೆ ಮತ್ತೊಬ್ಬಳಿಗೆ ಲಿಪ್‌**ಸ್‌ ಕೊಟ್ಟ ವರ! ನಂತರ ಆಗಿದ್ದೇನು ಗೊತ್ತಾ?

ಕಡಲೆಪುರಿ ತಯಾರಿಸುವ ಸ್ಥಳ ಇದು : 
ಕಡಲೆಪುರಿ ಅಥವಾ ಮಂಡಕ್ಕಿ ತಯಾರಿಸುವ ಕಾರ್ಖಾನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.ಇದರಲ್ಲಿ ಕಡಲೆಪುರಿಯನ್ನು ಹೇಗೆ ಮಾಡಲಾಗುತ್ತಿದೆ ಎನ್ನುವುದನ್ನು ಸ್ಪಷ್ಟವಾಗಿ ಕಾಣಬಹುದು.ನಾವು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು ಎಂದು ಸೇವಿಸುವ ಕಡಲೆಪುರಿ ಯನ್ನು ಕಾಲುಗಳಿಂದ ತುಳಿಯುವ ಮೂಲಕ ತಯಾರಿಸಲಾಗುತ್ತದೆ.ಇದಕ್ಕಾಗಿ ಅಕ್ಕಿಯನ್ನು ಕಾಲುಗಳನ್ನು ಬಳಸಿಕೊಂಡೇ ಸ್ವಚ್ಛಗೊಳಿಸಲಾಗುತ್ತದೆ.ನಂತರ,ಒಣಗಿಸುತ್ತಾರೆ. ಇನ್ನು ತಯಾರಾದಾ ಕದಲೆಪುರಿಗೆ ಉಪ್ಪು ಬೆರೆಸಿದ ನಂತರ ಅದನ್ನು ಕೂಡಾ ಕಾಲುಗಳ ಸಹಾಯದಿಂದಲೇ ಬೆರೆಸಲಾಗುತ್ತದೆ. 

ಕಡಲೆಪುರಿ ವೀಡಿಯೊವನ್ನು ಇಲ್ಲಿ ವೀಕ್ಷಿಸಿ:

 

ಇದನ್ನೂ ಓದಿ : Viral Photo: ಅಬ್ಬಬ್ಬಾ! 17 ಅಡಿಗೂ ಉದ್ದ, 30- 40 ಕೆಜಿ ತೂಕದ ಹೆಬ್ಭಾವನ್ನು ನೋಡಿದ್ದೀರಾ..!

(ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News