Rahul Dravid Son Samit Dravid India vs Australia Under-19: ತಂದೆಯಂತೆ ಕ್ರಿಕೆಟ್ʼನಲ್ಲಿ ಮಿಂಚಬೇಕೆಂಬ ಹಂಬಲದಲ್ಲಿ ಮಕ್ಕಳು ಕೂಡ ಇದೇ ಕ್ಷೇತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ ಅವರಲ್ಲಿ ಯಶಸ್ಸು ಕಂಡಿದ್ದು ಕೆಲವೇ ಕೆಲವರು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸುನಿಲ್ ಗವಾಸ್ಕರ್ ಪುತ್ರ ರೋಹನ್ ಗವಾಸ್ಕರ್ ಮತ್ತು ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ.
ಇದನ್ನೂ ಓದಿ: ಹುಟ್ಟುಹಬ್ಬದ ಅಪ್ಡೇಟ್ಸ್ ಕೊಟ್ಟ ಕಿಚ್ಚ..ಮನೆಯ ಬಳಿ ಅಲ್ಲ ಸೆಲೆಬ್ರೇಷನ್ಗೆ ಸ್ಪಾಟ್-ಟೈಮಿಂಗ್ಸ್ ಫಿಕ್ಸ್ ಮಾಡಿದ ನಟ
ಇನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಕ್ರಿಕೆಟಿಗರಾಗಿದ್ದಾರೆ. ತಂದೆಯಂತೆ ಯಶಸ್ಸು ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಅವರಿಗೆ ಇನ್ನೂ ಭಾರತಕ್ಕಾಗಿ ಆಡುವ ಅವಕಾಶ ಸಿಕ್ಕಿಲ್ಲ. ಇದೀಗ ಭಾರತದ ಶ್ರೇಷ್ಠ ಬ್ಯಾಟ್ಸ್ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ.
ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಚೊಚ್ಚಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸಮಿತ್ʼಗೆ ಸ್ಥಾನ ನೀಡಲಾಗಿದೆ. ಏಕದಿನ ಮತ್ತು ನಾಲ್ಕು ದಿನಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಮೂರು 50 ಓವರ್ʼಗಳ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳು ಕ್ರಮವಾಗಿ ಪುದುಚೇರಿ ಮತ್ತು ಚೆನ್ನೈನಲ್ಲಿ ನಡೆಯಲಿವೆ. ಏಕದಿನ ತಂಡವನ್ನು ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದು, ನಾಲ್ಕು ದಿನಗಳ ತಂಡವನ್ನು ಸೋಹಮ್ ಪಟವರ್ಧನ್ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: "ಐಶ್ವರ್ಯ ರೈ ಎಂದಿಗೂ ನನ್ನವಳಾಗಲೇ ಇಲ್ಲ" ಖ್ಯಾತ ನಟನ ಸೆನ್ಸೇಷನಲ್ ಹೇಳಿಕೆ ವೈರಲ್!!
ಸಮಿತ್ ದ್ರಾವಿಡ್ ದೇಶೀಯ ಮಟ್ಟದಲ್ಲಿ ರನ್ ಗಳಿಸುತ್ತಿದ್ದಾರೆ. ಇತ್ತೀಚೆಗೆ, ಮಹಾರಾಜ KSCA T20 ಟ್ರೋಫಿಯಲ್ಲಿ ಅವರ ಕೆಲವು ದೊಡ್ಡ ಹಿಟ್ʼಗಳ ವೀಡಿಯೊಗಳು ವೈರಲ್ ಆಗಿವೆ. ಸಮಿತ್ ಮೈಸೂರು ವಾರಿಯರ್ಸ್ ಪರ 7 ಇನ್ನಿಂಗ್ಸ್ʼಗಳಲ್ಲಿ ಕ್ರಮವಾಗಿ 7, 7, 33, 16, 2, 12 ಮತ್ತು 5 ರನ್ʼಗಳ ಇನ್ನಿಂಗ್ಸ್ʼಗಳನ್ನು ಆಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.