ಅಹಮದಾಬಾದ್‌ಗೆ ಬಂದಿಳಿದ ಟ್ರಂಪ್‌ಗೆ ಪ್ರಧಾನಿ ಮೋದಿ ಅಪ್ಪುಗೆಯ ಸ್ವಾಗತ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ(Donald Trump's India Visit)ಯ ಬಗ್ಗೆ ಉಭಯ ದೇಶಗಳು ಬಹಳ ಉತ್ಸುಕವಾಗಿವೆ. ಟ್ರಂಪ್ ಅವರ ಈ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ಬಹಳ ಮುಖ್ಯವಾಗಲಿದೆ.

Last Updated : Feb 24, 2020, 12:27 PM IST
ಅಹಮದಾಬಾದ್‌ಗೆ ಬಂದಿಳಿದ ಟ್ರಂಪ್‌ಗೆ ಪ್ರಧಾನಿ ಮೋದಿ ಅಪ್ಪುಗೆಯ ಸ್ವಾಗತ title=
Photo: ANI

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್ ತಲುಪಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ರಂಪ್  ಅವರಿಗೆ ವಿಮಾನ ನಿಲ್ದಾಣದಲ್ಲಿ ಅಪ್ಪುಗೆಯ ಸ್ವಾಗತ ನೀಡಿದರು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಗಾರ್ಡ್ ಆಫ್ ಆನರ್ ನೀಡಲಾಯಿತು. ಮೇಜರ್ ಸುಭಾಷ್ ನೇತೃತ್ವದ ಸೈನಿಕರು ಟ್ರಂಪ್ ಅವರನ್ನು ಗೌರವಿಸಿದರು. ಟ್ರಂಪ್ ಅವರ ಭಾರತ ಭೇಟಿಯ ಬಗ್ಗೆ ಉಭಯ ದೇಶಗಳು ಬಹಳ ಉತ್ಸುಕವಾಗಿವೆ. ಟ್ರಂಪ್ ಅವರ ಈ ಭೇಟಿ ಉಭಯ ದೇಶಗಳ ನಡುವಿನ ಹೊಸ ಒಪ್ಪಂದಗಳಿಗೆ ಬಹಳ ಮುಖ್ಯವಾಗಲಿದೆ.

ಪ್ರಧಾನಿ ಮೋದಿ- ಅಧ್ಯಕ್ಷ ಟ್ರಂಪ್ ಭೇಟಿ ಬಳಿಕ 5 ಪ್ರಮುಖ ಒಪ್ಪಂದ ಸಾಧ್ಯತೆ

ಅಮೆರಿಕದ ಏರ್ ಫೋರ್ಸ್ ಒನ್ ವಿಮಾನ ಭಾನುವಾರ ಹಿಂದೂಸ್ತಾನ್‌ಗೆ(ಭಾರತಕ್ಕೆ) ಹೊರಟಿತು. ಈ ವಿಮಾನದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಅವರ ಕುಟುಂಬ ಉಪಸ್ಥಿತರಿದ್ದರು. ಸೋಮವಾರ ಬೆಳಿಗ್ಗೆ 11.35 ರ ಸುಮಾರಿಗೆ ಟ್ರಂಪ್ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಲುಪಿತು.

Donald Trump ಭಾರತ ಭೇಟಿ ಬಗ್ಗೆ ದೇಶದ ಅತಿದೊಡ್ಡ ಬ್ಯಾಂಕ್ ಹೇಳಿದ್ದೇನು?

ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಟ್ರಂಪ್ ಮತ್ತು ಅವರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಆತ್ಮೀಯತೆಯಿಂದ ಬರಮಾಡಿಕೊಂಡರು.

 
ಈ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಗುಜರಾತಿ ಜಾನಪದ ನೃತ್ಯಗಾರರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ತಮ್ಮ ನೃತ್ಯ ಪ್ರದರ್ಶನದ ಮೂಲಕ ಸಂಭ್ರಮದಿಂದ ಸ್ವಾಗತಿಸಿದರು.

 

Trending News