IIFA ರಂಗೇರಿಸಲು ನೋರಾ ರೆಡಿ..! ಬಿಟೌನ್‌ ಬೆಡಗಿಯ ಹಾಟ್‌ ಡಾನ್ಸ್‌ ಮಿಸ್‌ ಮಾಡ್ಕೋಬೇಡಿ..

IIFA 2024 : ನೋರಾ ಫತೇಹಿ, ತನ್ನ ಅದ್ಭುತವಾದ ನೃತ್ಯ ಮತ್ತು ಗ್ಲಾಮರ್‌ ಶೋ ಮೂಲಕ ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ. ಇದೀಗ ಸೆಪ್ಟೆಂಬರ್ 28, 2024 ರಂದು ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ನಡೆಯಲಿರುವ NEXA IIFA ಪ್ರಶಸ್ತಿಗಳು 2024 ನಲ್ಲಿ ವೇದಿಕೆಯನ್ನು ಮಿಂಚಲು ರೆಡಿಯಾಗಿದ್ದಾಳೆ..  

Written by - Krishna N K | Last Updated : Sep 20, 2024, 06:01 PM IST
    • NEXA IIFA ಅವಾರ್ಡ್‌ ಕಾರ್ಯಕ್ರಮ ಇದೇ ತಿಂಗಳು 28 ರಂದು ನಡೆಯಲಿದೆ.
    • ಈ ಕಾರ್ಯಕ್ರಮದಲ್ಲಿ ಮೂರನೇ ಬಾರಿಗೆ ನೋರಾ ಅದ್ಭುತ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
    • ಅಬುಧಾಬಿಯ ಅತ್ಯಾಕರ್ಷಕ ಯಾಸ್ ಐಲ್ಯಾಂಡ್‌ನಲ್ಲಿ IIFA ಕಾರ್ಯಕ್ರಮ ನಡೆಯಲಿದೆ.
IIFA ರಂಗೇರಿಸಲು ನೋರಾ ರೆಡಿ..! ಬಿಟೌನ್‌ ಬೆಡಗಿಯ ಹಾಟ್‌ ಡಾನ್ಸ್‌ ಮಿಸ್‌ ಮಾಡ್ಕೋಬೇಡಿ.. title=

IIFA Awards 2024 : NEXA IIFA ಅವಾರ್ಡ್‌ ಕಾರ್ಯಕ್ರಮ ಇದೇ ತಿಂಗಳು 28 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೂರನೇ ಬಾರಿಗೆ ನೋರಾ ಅದ್ಭುತ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಟೌನ್‌ ಸುಂದರಿ, “ನಾನು ಅ‍ದ್ಧೂರಿ IIFA ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ಉತ್ಸುಕಳಾಗಿದೇನೆ.! ಅಬುಧಾಬಿಯ ಅತ್ಯಾಕರ್ಷಕ ಯಾಸ್ ಐಲ್ಯಾಂಡ್‌ನಲ್ಲಿ IIFA ನಡೆಯಲಿದ್ದು, ಈ ಭವ್ಯ ಕಾರ್ಯಕ್ರಮದಲ್ಲಿ ಕಲಾವಿದರ ಜೊತೆ ಶೋ ನೀಡಲು ಕಾತುರಳಾಗಿದ್ದೇನೆ ಅಂತ ತಿಳಿಸಿದ್ದಾರೆ..

ಗ್ಲಾಮರ್‌, ಡಾನ್ಸ್‌ ಮತ್ತು ಸ್ಟಾರ್‌ಡಮ್‌ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ನೋರಾ, IIFA ಈವೇಂಟ್‌ನಲ್ಲಿ ಸತತವಾರಿ ಮೂರು ಬಾರಿ ಪ್ರದರ್ಶನ ನೀಡಿದ್ದಾರೆ.. ಇದೀಗ 4ನೇ ಬಾರಿಗೆ ಶೋ ನೀಡಲು ರೆಡಿಯಾಗಿದ್ದಾರೆ. ಅಬುಧಾಬಿಯ ಯಾಸ್ ಐಲ್ಯಾಂಡ್‌ನಲ್ಲಿ ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿ ಪ್ರಧಾನ ಸಮಾರಂಭ (IIFA) ನಡೆಯಲಿದೆ.

ಇದನ್ನೂ ಓದಿ:RGV ʼಸೀರೆʼ ಸಿನಿಮಾದ ನಟಿಯ ಮೈಮೇಲೆ ಯಾಕೋ ನಿಲ್ಲುತ್ತಿಲ್ಲ ಸೀರೆ..! ಫೋಟೋಸ್‌ ವೈರಲ್‌

ಹಿಂದಿ, ತೆಲುಗು ಸೇರಿದಂತೆ ಕೆಲ ಸೌತ್‌ ಚಿತ್ರಗಳಲ್ಲಿ ಕೆಲಸ ಮಾಡಿರುವ ನೋರಾ, ಬಾಲಿವುಡ್‌ "ರೋರ್: ಟೈಗರ್ಸ್ ಆಫ್ ದಿ ಸುಂದರಬನ್ಸ್" ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. "ಬಾಹುಬಲಿ: ದಿ ಬಿಗಿನಿಂಗ್" ಚಿತ್ರದ ಮನೋಹರಿ ಸಾಂಗ್‌ ಮೂಲಕ ದಕ್ಷಿಣ ಸಿನಿರಸಿಕರಿಗೆ ಪರಿಚಯವಾದರು.

32 ವರ್ಷದ ಈ ಸುಂದರಿ, ರಿಯಾಲಿಟಿ ಶೋ "ಬಿಗ್ ಬಾಸ್" ನಲ್ಲಿ ಭಾಗವಹಿಸಿದ್ದರು. ಈ ಚೆಲುವೆಯ ದಿಲ್ಬರ್, ಗರ್ಮಿ, ಸಾಕಿ ಸಾಕಿ, ಕುಸು ಕುಸು, ಜೆಡಾ ನಶಾ, ಸೇರಿದಂತೆ ಹಲವು ಹಾಡುಗಳು ವಿಶ್ವದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿವೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News