ಸರ್ಕಾರದ ಈ ಘೋಷಣೆಯಿಂದಾಗಿ ದೀಪಾವಳಿ ಹೊತ್ತಿಗೆ ಇಳಿಯುವುದೇ ಬಂಗಾರದ ದರ!ಮತ್ತೆ ಮರುಕಳಿಸುವುದೇ ಹಿಂದಿನ ಬೆಲೆ!

Gold-Silver Rate:ಸರ್ಕಾರ ಬಂಗಾರದ ಮೇಲಿನ ಆಮದು ಸುಂಕವನ್ನು ಕಫಿಮೆ ಮಾಡಿದೆ. ಇದರಿಂದ ಚಿನ್ನ ಖರೀದಿ ಪ್ರಮಾಣವೂ ಹೆಚ್ಚಿದೆ.   

Written by - Ranjitha R K | Last Updated : Sep 23, 2024, 12:23 PM IST
  • ಚಿನ್ನ ಯಾರಿಗೆ ತಾನೇ ಇಷ್ಟವಿಲ್ಲ?
  • ದೀಪಾವಳಿ,ಧನತ್ರಯೋದಶಿಗೆ ಚಿನ್ನವನ್ನು ಖರೀದಿಸುವುದು ಮಂಗಳಕರ
  • ಹಬ್ಬದ ಹೊತ್ತಿಗೆ ಕಡಿಮೆಯಾಗುವುದೇ ಬಂಗಾರದ ಬೆಲೆ
ಸರ್ಕಾರದ ಈ ಘೋಷಣೆಯಿಂದಾಗಿ ದೀಪಾವಳಿ ಹೊತ್ತಿಗೆ ಇಳಿಯುವುದೇ ಬಂಗಾರದ ದರ!ಮತ್ತೆ ಮರುಕಳಿಸುವುದೇ ಹಿಂದಿನ ಬೆಲೆ!  title=

Gold-Silver Rate : ಚಿನ್ನ ಯಾರಿಗೆ ತಾನೇ ಇಷ್ಟವಿಲ್ಲ? ಇದು ಅಮೂಲ್ಯವಾದ ಲೋಹವಾಗಿರುವ ಜೊತೆಗೆ ಬಂಗಾರ ಭಾವನಾತ್ಮಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ.ದೀಪಾವಳಿ,ಧನತ್ರಯೋದಶಿಗೆ ಚಿನ್ನವನ್ನು ಖರೀದಿಸುವುದು ಮಂಗಳಕರ ಎನ್ನುವ ನಂಬಿಕೆಯಿದೆ.ಇನ್ನು ಚಿನ್ನದ ಆಮದು ಸುಂಕವನ್ನು ಸರ್ಕಾರ ಕಡಿತಗೊಳಿಸಿದ್ದು, ಖರೀದಿ ಮತ್ತಷ್ಟು ಹೆಚ್ಚಿದೆ. 

ಹೆಚ್ಚುತ್ತಿರುವ ಚಿನ್ನದ ಆಮದು :   
ದೇಶದಲ್ಲಿ ಚಿನ್ನದ ಬೆಲೆ ಒಂದು ತಿಂಗಳಲ್ಲಿ ಶೇ.4.2ರಷ್ಟು ಏರಿಕೆಯಾಗಿದೆ.ಒಂದು ತಿಂಗಳಲ್ಲಿ,ಚಿನ್ನದ ಬೆಲೆ ಸುಮಾರು 3000 ರೂ.ಗಳಷ್ಟು ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ 74,093 ರೂ.ಗೆ ತಲುಪಿದೆ.ಬೆಲೆ ಏರಿಕೆಯಾಗಿದ್ದರೂ ಚಿನ್ನದ ಖರೀದಿ ಮಾತ್ರ ಕಡಿಮೆಯಾಗಿಲ್ಲ.ದೇಶದಲ್ಲಿ ಚಿನ್ನದ ಆಮದು ನಿರಂತರವಾಗಿ ಹೆಚ್ಚುತ್ತಿದೆ. ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಆಮದು ತೆರಿಗೆ ಕಡಿತದಿಂದ ಚಿನ್ನದ ಬೆಲೆ ಕುಸಿಯಬಹುದು ಎಂದು ನಿರೀಕ್ಷಿಸಲಾಗಿತ್ತು.

ಇದನ್ನೂ ಓದಿ :  ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ ಸೆನ್ಸೆಕ್ಸ್‌ ಮತ್ತು ನಿಫ್ಟಿ-50; ಹೂಡಿಕೆದಾರರಿಗೆ ಹೊಡೆಯಿತು ಜಾಕ್‌ಪಾಟ್‌!

ಆಮದು ಸುಂಕ ಕಡಿತದಿಂದ ವಿದೇಶದಿಂದ ಚಿನ್ನ ಆಮದು ಮಾಡಿಕೊಳ್ಳುವುದು ಸುಲಭವಾಯಿತು.ವಿದೇಶದಿಂದ ಚಿನ್ನ ಆಮದು ಮಾಡಿಕೊಳ್ಳಲಾಗುತ್ತಿದ್ದು, ಜ್ಯುವೆಲ್ಲರ್ಸ್ ತಲುಪುತ್ತಿದೆ.ಹಬ್ಬ ಹರಿದಿನಗಳಲ್ಲಿ ಚಿನ್ನದ ಬೇಡಿಕೆ ಶೇ.30ರಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಜನರು ದೀಪಾವಳಿ ಮತ್ತು ಧನತ್ರಯೋದಶಿಗೆ   ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಾರೆ.ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಬಂಗಾರದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ನದ ದರ ಕೂಡಾ ಏರಿಕೆಯಾಗುತ್ತಿದೆ. 

ಚಿನ್ನದ ಬೆಲೆ :
24 ಕ್ಯಾರೆಟ್ ಚಿನ್ನದ ಬೆಲೆ 74093/10 ಗ್ರಾಂ
23ಕ್ಯಾರೆಟ್ ಚಿನ್ನದ ಬೆಲೆ 73796/10 ಗ್ರಾಂ
22ಕ್ಯಾರೆಟ್ ಚಿನ್ನದ ಬೆಲೆ 67869/10 ಗ್ರಾಂ
18 ಕ್ಯಾರೆಟ್ ಚಿನ್ನದ ಬೆಲೆ 55570/10 ಗ್ರಾಂ
14 ಕ್ಯಾರೆಟ್ ಚಿನ್ನದ ಬೆಲೆ 43344/10 ಗ್ರಾಂ

ಇದನ್ನೂ ಓದಿ : Arecanut Price in Karnataka: ಶಿವಮೊಗ್ಗ, ಮಂಗಳೂರು & ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ರೇಟ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News