ದಿನಭವಿಷ್ಯ 25-09-2024: ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ

Today Horoscope 25th September 2024: ಈ ದಿನ ಬುಧವಾರ ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 25, 2024, 07:31 AM IST
  • ಅಷ್ಟಮಿ ತಿಥಿಯ ಈ ದಿನ ಬುಧವಾರ
  • ಆರ್ದ್ರಾ ನಕ್ಷತ್ರ, ವರೀಯಾನ್ ಯೋಗ
  • ದ್ವಾದಶ ರಾಶಿಗಳ ಫಲಾಫಲ ಏನು?
ದಿನಭವಿಷ್ಯ 25-09-2024:  ಇಂದು ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ನಿಮ್ಮ ರಾಶಿಗೆ ಹೇಗಿದೆ ತಿಳಿಯಿರಿ  title=

Budhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಬುಧವಾರ ಆರ್ದ್ರಾ ನಕ್ಷತ್ರ ವರೀಯಾನ್ ಯೋಗ ದ್ವಾದಶ ರಾಶಿಗಳ ಫಲಾಫಲ ಏನು? 

ಮೇಷ ರಾಶಿಯವರ ಭವಿಷ್ಯ (Aries Horoscope):  
ಲಾಭದ ಯೋಜನೆಗಳತ್ತ ಗಮನ ಹರಿಸಿದರೆ ಇಂದು ಉತ್ತಮವಾದ ದಿನ. ವೃತ್ತಿ ಬದುಕಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ಹಿರಿಯರ ಸಲಹೆಗಳನ್ನು ಪಾಲಿಸುವುದರಿಂದ ಶುಭ ಫಲವನ್ನು ಕಾಣಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮಗೆ ಹೆಚ್ಚು ಶ್ರಮದಾಯಕವಾದ ದಿನ. ಈ ದಿನ ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ. ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಲಾಭ ಲಭಿಸಲಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹಣಕಾಸಿನ ದೃಷ್ಟಿಯಿಂದ ಇಂದು ಉತ್ತಮವಾದ ದಿನ. ಕೌಟುಂಬಿಕ ವ್ಯವಹಾರಗಳಲ್ಲಿ ಮೂಡಿದ್ದ ಬಿರುಕುಗಳು ಸರಿ ಹೋಗಲಿವೆ. ಕೆಲಸದಲ್ಲಿ ಉತ್ತಮ ಫಲಿತಾಂಶಕ್ಕಾಗಿ ನಿಮ್ಮ ಮಾತು ಮತ್ತು ನಡವಳಿಕೆಯನ್ನು ನಿಯಂತ್ರಿಸುವುದು ಒಳ್ಳೆಯದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇಂದು ಉತ್ತಮ ದಿನವಾಗಲಿದೆ. ಯಾವುದೇ ದೊಡ್ಡ ವ್ಯವಹಾರವನ್ನು ಇಂದು ಅಂತಿಮಗೊಳಿಸಬಹುದು. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಲು ಯೋಜಿಸಬಹುದು. 

ಇದನ್ನೂ ಓದಿ- ಮುಂದಿನ 18 ದಿನಗಳ ಕಾಲ ಈ ರಾಶಿಯವರಿಗೆ ಶುಕ್ರ ದೆಸೆ: ಮುಟ್ಟಿದ್ದೆಲ್ಲಾ ಚಿನ್ನ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯವರು ಇಂದು ಸ್ವಲ್ಪ ಯೋಚಿಸಿ ಕೆಲಸ ಮಾಡುವುದರಿಂದ ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು. ಹಣಕಾಸಿನ ಸಂಬಂಧಿತ ವಿಷಯಗಳು ಬಗೆಹರಿಯುವುವು. ಹೊಸ ವಾಹನ ಖರೀದಿ ಯೋಗವೂ ಇದೆ. ಕುಟುಂಬದಿಂದ ಶುಭ ಸುದ್ದಿ ನಿರೀಕ್ಷಿಸಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯವರಿಗೆ ಇಂದು ಪ್ರೀತಿ ಜೀವನದಲ್ಲಿ ಸಂಘರ್ಷದ ದಿನ. ಯಾವುದೇ ಪ್ರತೀಕೂಲ ಪರಿಸ್ಥಿತಿಯಲ್ಲಿ ನೀವು ತಾಳ್ಮೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಇಲ್ಲವೇ ಪರಿಸ್ಥಿತಿ ಕೈಮೀರಿ ಹೋಗಬಹುದು. ಸರ್ಕಾರಿ ಯೋಜನೆಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನೀವು ಇಷ್ಟು ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾದ ದಿನ. ಅದೃಷ್ಟದ ಬೆಂಬಲದಿಂದ ಸರ್ಕಾರಿ ಕೆಲಸಗ್ಲೌ ಕೈಗೂಡುವುವುದು. ಮನೆಯಲ್ಲಿ ಸಂತೋಷದ ವಾತಾವಾರಣ ಇರಲಿದ್ದು ಮನಸ್ಸಿಗೆ ನೆಮ್ಮದಿ ದೊರೆಯಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ವ್ಯವಹಾರದಲ್ಲಿ ನಿಮ್ಮ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ ಮತ್ತು ಯಾವುದೇ ಸರ್ಕಾರಿ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಹಿಂದಿನ ಸಾಲಗಳನ್ನು ಮರುಪಾವತಿ ಮಾಡಲು ಅವಕಾಶ ದೊರೆಯಲಿದೆ. ಹಳೆಯ ತಪ್ಪಿನಿಂದ ಪಾಠ ಕಲಿತು ಮುನ್ನಡೆಯಿರಿ. 

ಇದನ್ನೂ ಓದಿ- ಷಡಾಷ್ಟಕ ಯೋಗ: ಶನಿ ವಕ್ರದೃಷ್ಟಿ- ಈ ರಾಶಿಯವರಿಗೆ ಭಾರೀ ನಷ್ಟ, ಎಚ್ಚರಿಕೆ ಅಗತ್ಯ

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯವರಿಗೆ ಇಂದು ಮಿಶ್ರ ಫಲಗಳಿಂದ ಕೂಡಿದ ದಿನ. ಉದ್ಯೋಗದಲ್ಲಿ ಬಡ್ತಿ ಸಂಭವವಿದೆ. ಸ್ನೇಹಿತರ ಸಹಕಾರದಿಂದ ವ್ಯವಹಾರದಲ್ಲಿ ಏಳ್ಗೆಯನ್ನು ಕಾಣುವಿರಿ. ಆದಾಗ್ಯೂ, ಇಂದು ನಿಮ್ಮ ಮಕ್ಕಳ ಆರೋಗ್ಯವು ಕಾಳಜಿಯ  ವಿಷಯವಾಗಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯವರಿಗೆ ಇಂದು ಸಂಪತ್ತು ಹೆಚ್ಚಾಗಲಿದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿವಾದಗಳು ಬಗೆಹರಿಯಲಿವೆ. ಸಂಜೆ ವೇಳೆಗೆ ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ. ನೀವು ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಂಡರೆ, ಅದರಿಂದ ನಷ್ಟ ಸಾಧ್ಯತೆ ಇದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯ ಜನರಿಗೆ ಇಂದು ಲಾಭದಾಯಕ ದಿನವಾಗಿದೆ. ನಿಮ್ಮ ಕೆಲಸದಲ್ಲಿ ಕುಟುಂಬದ ಸದಸ್ಯರು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ವಿದ್ಯಾರ್ಥಿಗಳು ಹೊಸ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಆದಾಗ್ಯೂ, ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿರಬೇಕು.

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯವರಿಗೆ ಇಂದು ಶುಭ ದಿನ. ವೃತ್ತಿ ಸಂಬಂಧಿತ ಕೆಲಸಗಳಿಗಾಗಿ ಪ್ರವಾಸ ಕೈಗೊಳ್ಳಬೇಕಾಗಬಹುದು. ಪ್ರವಾಸವು ಲಾಭದಾಯಕವಾಗಿರುತ್ತದೆ. ಸಂಜೆ ವೇಳೆಗೆ ಸಂಗಾತಿಯಿಂದ ಶುಭ ಸುದ್ದಿಯನ್ನು ಕೇಳಬಹುದು. ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳು ಲಾಭದಾಯಕವಾಗಿರುತ್ತವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News