ಮುಡಾ ‌ಹಗರಣ ಮರೆಮಾಚಲು ಎಡಿಜಿಪಿ ಚಂದ್ರಶೇಖರ್ ಮೂಲಕ ಇಲ್ಲ ಸಲ್ಲದ ಪದ ಬಳಕೆ- ಜಗದೀಶ್ ಶೆಟ್ಟರ್

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮೋದಿ ಕ್ರಾಂಬಿನೆಟ್ ನಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ. ಹಿಂದಿನ ಯಾವುದೋ ಕೇಸ್ ನ ಎಫ್ಐಆರ್ ಇಟ್ಕೊಂಡು ಆಟವಾಡ್ತಿದ್ದಾರೆ. ದ್ವೇಷದ ರಾಜಕಾರಣ ಮಾಡ್ತಿದ್ದಾರೆ. 

Written by - Yashaswini V | Last Updated : Sep 30, 2024, 12:40 PM IST
  • ಮುಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿ ಮೇಲೆ ಎಫ್‌ಐ‌ಆರ್ ಆಗಿದೆ.
  • ಇದರಿಂದ ಜನರ ಮೈಂಡ್ ಮರೆಮಾಚಲು ಈ ವ್ಯವಸ್ಥೆ ಮಾಡಲಾಗಿದೆ
  • ಅಧಿಕಾರಗಳ ಕರ್ತವ್ಯ ಏನು? ಈ ರೀತಿಯಾಗಿ ವರ್ತನೆ ಮಾಡುವುದು ಪೊಲೀಸ್ ಅಧಿಕಾರಿಗಳಿಗೆ ಶೋಭೆ ತರುವುದೂ ಇಲ್ಲ.
ಮುಡಾ ‌ಹಗರಣ ಮರೆಮಾಚಲು ಎಡಿಜಿಪಿ ಚಂದ್ರಶೇಖರ್ ಮೂಲಕ ಇಲ್ಲ ಸಲ್ಲದ ಪದ ಬಳಕೆ- ಜಗದೀಶ್ ಶೆಟ್ಟರ್ title=

ಹುಬ್ಬಳ್ಳಿ: ಕೇಂದ್ರ ಸಚಿವ ಎಚ್‌ಡಿಕುಮಾರಸ್ವಾಮಿ ಅವರ‌ ಮೇಲೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ ಅವರಿಂದ  "ಹಂದಿ" ಪದ ಬಳಕೆ ಮಾಡಿ ಪತ್ರ ಬರೆಸುವ ಮೂಲಕ ಮುಡಾ ಹಗರಣ ಮರೆಮಾಚುವ ಕೆಲಸ ರಾಜ್ಯ ಸರ್ಕಾರದಿಂದ  ಮಾಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಆರೋಪ ಮಾಡಿದರು.

ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಜಗದೀಶ್ ಶೆಟ್ಟರ್, ಎಚ್‌ಡಿ ಕುಮಾರಸ್ವಾಮಿ ಕೇಂದ್ರ ಸಚಿವರು ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಂಪುಟ ದರ್ಜೆ ಖಾತೆ ಸಚಿವರು ಆಗಿದ್ದಾರೆ. ಮುಡಾ ಹಗರಣ ಆರಂಭವಾದ ನಂತರ ಲೋಕಾಯುಕ್ತ ಪೊಲೀಸರಿಂದ ಎಚ್‌ಡಿ‌ಕೆ ವಿರುದ್ಧ ಎಫ್‌ಐ‌ಆರ್ ಪ್ರಕ್ರಿಯೆ ಆರಂಭವಾಗಿರುವುದು ಕೇವಲ ದ್ವೇಷದ ರಾಜಕಾರಣ ಎಂದರು. 

ಮುಡಾ ಹಗರಣದಲ್ಲಿ ಜನರ ಮೈಂಡ್ ಡೈವರ್ಟ್ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ, ಕೇಂದ್ರ ಸಚಿವರ ಮೇಲೆ ಎಫ್ಐಆರ್ ಇದ್ರೆ ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಕೇಂದ್ರ ಮಂತ್ರಿಗಳ ಮೇಲೆ ಅಧಿಕಾರಿ ಕೆಟ್ಟದಾಗಿ ಮಾತನಾಡ್ತಾರೆ. ಅವರ ಮಿತಿ ದಾಟಿ ಮಾತನಾಡ್ತಾ ಇದ್ದಾರೆ.  ಅಧಿಕಾರಿಗಳು ರಾಜಕಾರಣಿಗಳಂತೆ ವರ್ತಿಸಬಾರದು. ಐಪಿಎಸ್ ಅಧಿಕಾರಿ ಚಂದ್ರಶೇಖರ್ ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್ ನೀಡಿದರು. 

ಇದನ್ನೂ ಓದಿ- ನನ್ನ ಮೇಲೆ ರಾಜಕೀಯ ಪ್ರೇರಿತ ಕೇಸ್ ಹಾಕಿರುವುದು ಇದೇ ಮೊದಲು: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಡಾ ಹಗರಣದಲ್ಲಿ ಸಿಎಂ ಹಾಗೂ ಅವರ ಪತ್ನಿ ಮೇಲೆ ಎಫ್‌ಐ‌ಆರ್ ಆಗಿದೆ. ಇದರಿಂದ ಜನರ ಮೈಂಡ್ ದೈವರ್ಟ್ ಈ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಕೆಟ್ಟ ಪದ ಬಳಕೆ ಮಾಡುವುದು ಸರಿಯಲ್ಲ. ಅಧಿಕಾರಗಳ ಕರ್ತವ್ಯ ಏನು? ಈ ರೀತಿಯಾಗಿ ವರ್ತನೆ ಮಾಡುವುದು ಪೊಲೀಸ್ ಅಧಿಕಾರಿಗಳಿಗೆ ಶೋಭೆ ತರುವುದೂ ಇಲ್ಲ. ಪೊಲೀಸ್ ಅಧಿಕಾರಿಗಳ ನಡುವಳಿಕೆ  ಸರಿಯಲ್ಲ ಎಂದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಂದ ದಸರಾ ಉದ್ಘಾಟನೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿಗಳಾಗಿದ್ದಾರೆ. ಅವರು ಈಗ ಆತ್ಮಾವಲೋಕನ ಮಾಡಬೇಕು. ಈ ಹಿಂದೆ ಯಡಿಯೂರಪ್ಪ ಅವರ ಮೇಲೆ ಆರೋಪ ಬಂದಾಗ ಏನು ಮಾತನಾಡಿದ್ದರು. ಅವರೊಬ್ಬ ಮುಖ್ಯಮಂತ್ರಿಯಾದವರು ಈ ರೀತಿಯ ಸಂದರ್ಭದಲ್ಲಿ ದಸರಾ ಉದ್ಘಾಟನೆ ಮಾಡುವುದು ಎಷ್ಟು ಸರಿ  ಎಂದು ಪ್ರಶ್ನಿಸಿದರಲ್ಲದೆ, ಭಂಡತನ ಪ್ರದರ್ಶನ ಮಾಡಿದರೆ ಏನು ಮಾಡೋದು ಎಂದರು. 

ಇದನ್ನೂ ಓದಿ-  ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಪದ ಬಳಕೆ: ಲೋಕಾಯುಕ್ತ ಎಡಿಜಿಪಿ ವಿರುದ್ಧ ಗಿರೀಶ್‌ ಲಿಂಗಣ್ಣ ಬೇಸರ

ದಾವಣಗೆರೆಯಲ್ಲಿ ಬಿಜೆಪಿ ಅತೃಪ್ತ ನಾಯಕರ ಸಭೆ! 
ಇನ್ನು ಭಾರತೀಯ ಜನತಾ ಪಕ್ಷದಲ್ಲಿ ಅತೃಪ್ತರ ಸಭೆ ನಡೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಡಲು ಹಿಂದೇಟು ಹಾಕಿದ ಜಗದೀಶ್ ಶೆಟ್ಟರ್, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಶಾಸಕರ ಖರೀದಿಗೆ 1000 ಕೋಟಿ ಮೀಸಲು ವಿಚಾರವಾಗಿ ಸಹ ಇದೊಂದು ವೈಯಕ್ತಿಕ ವಿಚಾರ ಈ ಬಗ್ಗೆ  ನಾನು ಮಾತನಾಡಲ್ಲ ಎಂದಷ್ಟೇ ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News