ಸೂಪರ್ ಸ್ಟಾರ್ ರಜನಿಕಾಂತ್ ಸ್ಥಿತಿ ಈಗ ಹೇಗಿದೆ? ಕಣ್ಣಾರೆ ನೋಡಿದ ಸ್ಥಿತಿಯ ಬಗ್ಗೆ ಪತ್ನಿ ಹೇಳಿದ್ದಿಷ್ಟು! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ

Rajnikanth Health Update: ಸೌತ್ ಸೂಪರ್‌ಸ್ಟಾರ್ ರಜನಿಕಾಂತ್ ಬಗ್ಗೆ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ತಡರಾತ್ರಿ ನಟನ ಆರೋಗ್ಯ ಹದಗೆಟ್ಟಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.   

Written by - Savita M B | Last Updated : Oct 1, 2024, 09:53 AM IST
  • ರಜನಿಕಾಂತ್ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತು.
  • ಬಹಳ ದಿನಗಳಿಂದ ಹೊಟ್ಟೆಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಸ್ಥಿತಿ ಈಗ ಹೇಗಿದೆ? ಕಣ್ಣಾರೆ ನೋಡಿದ ಸ್ಥಿತಿಯ ಬಗ್ಗೆ ಪತ್ನಿ ಹೇಳಿದ್ದಿಷ್ಟು! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ title=

Rajinikanth wife: ಮಾಧ್ಯಮ ವರದಿಗಳ ಪ್ರಕಾರ, 73 ವರ್ಷದ ರಜನಿಕಾಂತ್ ಅವರಿಗೆ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡಿತು. ನಂತರ ಅವರ ಕುಟುಂಬ ಸದಸ್ಯರು ತರಾತುರಿಯಲ್ಲಿ ನಟನನ್ನು ಚೆನ್ನೈನ ಅಪೋಲೋ ಗ್ರಿಮ್ಸ್ ರಸ್ತೆ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ನಟ ಚಿಕಿತ್ಸೆ ಪಡೆಯುತ್ತಿದ್ದು, ಆತಂಕ ಪಡುವ ಅಗತ್ಯವಿಲ್ಲ. ಅವರಿಗೆ ಬಹಳ ದಿನಗಳಿಂದ ಹೊಟ್ಟೆಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ-5 ವರ್ಷಕ್ಕೆ ಎಂಟ್ರಿ.. 15 ವರ್ಷಕ್ಕೆ ಸ್ಟಾರ್ ಹೀರೋಯಿನ್.. ವಿವಾಹಿತ ನಟನನ್ನು ಪ್ರೀತಿಸಿ ಗರ್ಭಿಣಿಯಾದ ನಟಿ ಈಕೆ..!

 ರಜನಿಕಾಂತ್ ಅವರ ಪತ್ನಿ ಮಾದ್ಯಮದವರೊಂದಿಗೆ ಮಾತನಾಡಿ ನಟನ ಆರೋಗ್ಯದ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ. ಅವರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ ಆದರೆ ನಟನ ಸ್ಥಿತಿ ಮೊದಲಿಗಿಂತ ಉತ್ತಮವಾಗಿದೆ ಎಂದು ಹೇಳಿದ್ದಾರೆ. ರಜನಿಕಾಂತ್ ಅವರ ಈ ಸುದ್ದಿ ಕೇಳಿ ಅವರ ಅಭಿಮಾನಿಗಳು ಭಯಭೀತರಾಗಿದ್ದಾರೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಾರ್ಥಿಸುತ್ತಿದ್ದಾರೆ. ರಜನಿಕಾಂತ್ ಶೀಘ್ರದಲ್ಲೇ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ, ಪ್ರಸ್ತುತ ವೈದ್ಯರು ನಟನನ್ನು ನೋಡಿಕೊಳ್ಳುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ರಜನಿಕಾಂತ್ ಅವರ ಆರೋಗ್ಯ ಹಲವಾರು ಬಾರಿ ಹದಗೆಟ್ಟಿದ್ದು, ನಟ 2016 ರಲ್ಲಿ ಅಮೇರಿಕಾದಲ್ಲಿ Kidney transplant ಮಾಡಿಸಿಕೊಂಡರು. ಇದಾದ ನಂತರ ಕೆಲ ಕಾಲ ಸಿನಿಮಾಗಳಿಂದ ವಿರಾಮ ತೆಗೆದುಕೊಂಡರು.

ಇದನ್ನೂ ಓದಿ-"ಮಗುವಾದ ನಂತರ, ನಾನು ಒಂಟಿಯಾಗಿದ್ದೇನೆ.."ಹೆರಿಗೆಯ ನಂತರ ಒಂಟಿಯಾದ್ರಾ ನಟಿ ದೀಪಿಕಾ ಪಡುಕೋಣೆ? ಹೀಗೊಂದು ಶಾಕಿಂಗ್‌ ಹೇಳಿಕೆ ಕೊಡಲು ಕಾರಣ ಏನು?

 ರಜನೀಕಾಂತ್ ಅವರ ಕೆಲಸದ ಬಗ್ಗೆ ಮಾತನಾಡುವುದಾದರೇ.. ಅವರು ತಮ್ಮ ಎರಡು ಸಿನಿಮಾ ಪ್ರಚಾರದಲ್ಲಿದ್ದಾರೆ. ನಟನ 'ವೆಟ್ಟಯ್ಯನ್' ಚಿತ್ರವು ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದ ವಿಶೇಷವೆಂದರೆ ಅಮಿತಾಬ್ ಬಚ್ಚನ್ ಕೂಡ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News