Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ಹೀಗೆ ಇನ್ನೂ ಜನ ಸೋಭಿತಾ ಹಾಗೂ ನಾಗಚೈತನ್ಯ ಅವರ ನಿಶ್ಚಿತಾರ್ಥದ ಕುರಿತಾದ ಸುದ್ದಿಯನ್ನೆ ಇನ್ನೂ ಅರಗಿಸಿಕೊಳ್ಳುವುದಕ್ಕೆ ಸಾದ್ಯಾವಗುತ್ತಿಲ್ಲ, ಅಷ್ಟರಲ್ಲೆ ನಟಿ ಸಮಂತಾ ಅವರ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶೋಭಿತಾ ಧೂಳಿಪಾಲ, ಸಮಂತಾ ನನ್ನ ಆತ್ಮ ಸಂಗಾತಿ ಎಂದು ಹೇಳಿದ್ದಾರೆ, ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಸೋಭಿತಾ ಧೂಳಿಪಾಲ, ಹಲವು ವಿಷಯಗಳ ಕುರಿತು ಮಾಹಿತಿಯನ್ನು ಬಿಚ್ಚಿಟ್ಟಿದ್ದು, ಪದವಿಯ ಸಮಯದಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ನಂತರ ಮಾಡೆಲಿಂಗ್ ಮಾಡಲು ಆರಂಭಿಸಿದ್ದ ಈಕೆಗೆ ಈ ಮುಂಚೆ ಸಿನಿಮಾದಲ್ಲಿ ನಾಯಕಿಯಾಗುವ ಆಲೋಚನೆ ಇರಲಿಲ್ಲವಂತೆ.
2016 ರಲ್ಲಿ ಅನುರಾಗ್ ಕಶ್ಯಪ್ ಅವರ ರಮಣ್ ರಾಘವ್ 2.0 ನಲ್ಲಿ ನಾನು ಹಾಜರ್ ಆಗಿದ್ದೆ, ಆ ಸಿನಿಮಾದ ನಂತರ ನನ್ನ ಜೀವನವೇ ಬದಲಾಯಿತು ಎಂದು ನಟಿ ಸೋಭಿತಾ ಧೂಳಿಪಾಲ ತಮ್ಮ ಮೊದಲನೆ ಸಿನಿಮಾ ಹೇಗೆ ತಮ್ಮ ಜೀವನವನ್ನು ಬದಲಿಸಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.
ತನಗೆ ಮನ್ನಣೆ ತಂದುಕೊಟ್ಟ ಸಿನಿಮಾಗಳು ಮತ್ತು ವೆಬ್ ಸೀರೀಸ್ ಬಗ್ಗೆ ಮಾತನಾಡಿದ ಸೋಭಿತಾ ಸಮಂತಾ ಬಗ್ಗೆ ಕೂಡ ಮಾತನಾಡಿದ್ದಾರೆ. ಸಮಂತಾ ನನ್ನ ಆತ್ಮ ಸಂಗಾತಿ ಎಂದಿದ್ದಾರೆ.
ಅಷ್ಟಕ್ಕೂ ಸೋಭಿತಾ ಧೂಳಿಪಾಲ ಮಾತನಾಡಿದ್ದು, ನಟಿ ಸಮಂತಾ ಅವರ ಕುರಿತು ಅಲ್ಲ ಹೊರತಾಗಿ, ಸೋಭಿತಾ ಅವರ ಸಹೋದರಿ ಸಮಂತಾ ಅವರ ಕುರಿತು.
ಸೋಭಿತಾ ಅವರ ಸಹೋದರಿಯ ಹೆಸರು ಕೂಡ ಸಮಂತಾ ಆಗಿದ್ದು, ನಟಿಗೆ ಈಕೆ ತುಂಬಾ ಹತ್ತಿರ. ತಮ್ಮ ಸಹೋದರಿಯ ಜೊತೆಗೆ ನಟಿ ತುಂಬಾ ಆತ್ಮೀಯ ಬಾಂಧವ್ಯವನ್ನು ಹೊಂದಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ನಟಿ ಸೋಭಿತಾ, ನಟಿ ಸಮಂತಾ ಅವರ ಕುರಿತು ಈ ರೀತಿ ಹೇಳಿದ್ದಾರೆ ಎಂದು ಭಾವಿಸಿ ಟ್ರೋಲ್ ಮಾಡುತ್ತಿದ್ದಾರೆ.