Free Food In Train: ದೇಶವಾಸಿಗಳ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಕರಿಗಾಗಿ ಹಲವು ಸೌಕರ್ಯಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಆಹಾರ ಸೌಲಭ್ಯವೂ ಒಂದು. ಆದರೆ ರೈಲಿನಲ್ಲಿ ಆಹಾರ ಪಡೆಯಲು ಹಣ ಪಾವತಿಸಬೇಕು. ಆದರೆ, ಈ ಒಂದು ಟ್ರೈನ್‍ನಲ್ಲಿ ಉಚಿತವಾಗಿ ಆಹಾರ ನೀಡಲಾಗುತ್ತದೆ.
ಈ ರೈಲಿನಲ್ಲಿ 29 ವರ್ಷಗಳಿಂದ ಸಿಗುತ್ತಿದೆ "ಫ್ರೀ ಫುಡ್":
ಭಾರತೀಯ ರೈಲ್ವೇಯ ಒಂದು ವಿಶೇಷ ರೈಲಿನಲ್ಲಿ ಕಳೆದ 29 ವರ್ಷಗಳಿಂದ ಪ್ರಯಾಣಿಕರಿಗೆ 'ಉಚಿತ ಆಹಾರ' ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ರೈಲನ್ನು "ಲಂಗರ್ ರೈಲು" ಎಂತಲೂ ಕರೆಯಲಾಗುತ್ತದೆ.
ಇದನ್ನೂ ಓದಿ- UMANG ಆಪ್ ಬಳಸಿ ಪಿಎಫ್ ಹಣ ವಿತ್ ಡ್ರಾ ಮಾಡಲು ಸಿಂಪಲ್ ಹಂತ-ಹಂತದ ಪ್ರಕ್ರಿಯೆ
1995 ರಿಂದ ಆರಂಭವಾದ ಲಂಗರ್ ಸೇವೆ:
ಭಾರತದ 39 ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಸಚ್‌ಖಂಡ್ ಎಕ್ಸ್‌ಪ್ರೆಸ್ (12715) ರೈಲಿನಲ್ಲಿ ಆರು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತದೆ. ವಾಸ್ತವವಾಗಿ, ಈ ರೈಲು ದೇಶದ ಐದು ದೊಡ್ಡ ಸಿಖ್ ಗುರುದ್ವಾರಗಳಲ್ಲಿ ನಾಂದೇಡ್ (ಮಹಾರಾಷ್ಟ್ರ)ದ ಹಜೂರ್ ಸಾಹಿಬ್ ಮತ್ತು ಅಮೃತಸರ (ಪಂಜಾಬ್) ನಡುವೆ ಚಲಿಸುತ್ತದೆ. ಎರಡು ಗುರುದ್ವಾರಗಳನ್ನು ಸಂಪರ್ಕಿಸುವ ಈ ರೈಲಿನಲ್ಲಿ 1995 ರಿಂದ ಸಿಖ್ ಸಮುದಾಯವು ಲಂಗರ್ ಸೇವೆ ಅನ್ನು ಆರಂಭಿಸಿದೆ.
ಈ ರೈಲಿಗಾಗಿ ಪಶ್ಚಿಮ ದೆಹಲಿಯ ತಿಲಕ್ ನಗರದ ವೀರ್ಜಿ ದಾ ಡೇರಾ ದಿಂದ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಲಂಗರ್ ಆಹಾರವನ್ನು ತಯಾರಿಸಲಾಗುತ್ತದೆ.
ಇದನ್ನೂ ಓದಿ- ಬ್ಯಾಂಕ್‌ನಲ್ಲಿ ಅನಾವಶ್ಯಕವಾಗಿ ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರಾ? ಯೋಚಿಸಬೇಡಿ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ
ತಮ್ಮದೇ ಪಾತ್ರೆಗಳನ್ನು ತರುವ ಪ್ರಯಾಣಿಕರು:
ಸಚ್‌ಖಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮನ್ಮಾಡ್, ನಾಂದೇಡ್, ಭೂಸಾವಲ್, ಭೋಪಾಲ್, ಗ್ವಾಲಿಯರ್ ಮತ್ತು ನವದೆಹಲಿ ಎಂಬ ಆರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಲಂಗರ್ ಆಹಾರವನ್ನು ನೀಡಲಾಗುತ್ತದೆ. ಇನ್ನೂ ಈ ರೈಲಿನಲ್ಲಿ ಲಂಗರ್ ಸೇವೆ ಲಭ್ಯವಿರುವ ಬಗ್ಗೆ ಅರಿವಿರುವ ಪ್ರಯಾಣಿಕರು ಉಚಿತ ಆಹಾರವನ್ನು ಪಡೆಯಲು ತಮ್ಮದೇ ಆದ ಪಾತ್ರೆಗಳನ್ನು ತರುವುದು ವಿಶೇಷವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.