ರತನ್ ಟಾಟಾ ಟಾಪ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣದಿರಲು ಆ ಒಬ್ಬ ವ್ಯಕ್ತಿಯೇ ಕಾರಣ...!

Ratan Tata: ಸುಮಾರು ಆರು ದಶಕಗಳಿಂದ ಪ್ರಬಲ ಸಂಸ್ಥೆಯಾಗಿರುವ ಟಾಟಾ ಸಂಸ್ಥೆ ದೇಶದ ಅತಿದೊಡ್ಡ ಉದ್ಯಮ ಸಂಸ್ಥೆ ಆಗಿದೆ. ರತನ್ ಟಾಟಾ ತಮ್ಮ ಸಂಸ್ಥೆಯ 30 ಕಂಪನಿಗಳ ರುವಾರಿಯಾಗಿ ವಿಶ್ವದ ಹಲವು ದೇಶಗಳಲ್ಲಿ ಟಾಟಾ ಉದ್ಯಮವನ್ನು ಬೆಳೆಸಿದ್ದಾರೆ. 

Written by - Yashaswini V | Last Updated : Oct 11, 2024, 09:43 AM IST
  • ಉಪ್ಪು ಮಾರಾಟದಿಂದ ಪ್ರಸಿದ್ದ ಕೋಟ್ಯಾಂತರ ರೂ. ಮೌಲ್ಯದ ಕಾರ್ ಗಳ ಮಾರಾಟದವರೆಗೂ ತಮ್ಮದೇ ಆದ ಛಾಪು ಮೂಡಿಸಿರುವ ದೇಶದ ಅತಿ ದೊಡ್ಡ ಉದ್ಯಮ ಸಂಸ್ಥೆ 'ಟಾಟಾ'
  • ಟಾಟಾ ಸಂಸ್ಥೆ ವಿಶ್ವದ ಹಲವು ದೇಶಗಳಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿ ಭಾರೀ ಲಾಭಗಳಿಸುತ್ತಿದೆ.
  • ಆದರೂ, ರತನ್ ಟಾಟಾ ಅವರು ಎಂದಿಗೂ ವಿಶ್ವದ ಟಾಪ್ 10 ಬಿಲೇಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳದಿರಲು ಕಾರಣ ಏನ್ ಗೊತ್ತಾ...
ರತನ್ ಟಾಟಾ ಟಾಪ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣದಿರಲು ಆ ಒಬ್ಬ ವ್ಯಕ್ತಿಯೇ ಕಾರಣ...!  title=

Ratan Tata: ದೇಶದ ಪ್ರಭಾವಶಾಲಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ರತನ್ ಟಾಟಾ ವಿಶ್ವದಾದ್ಯಂತ 100ಕ್ಕೂ ಹೆಚ್ಚು ದೇಶಗಳಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸಿದ್ದರು. ಟಾಟಾ ಸಂಸ್ಥೆಯ 30 ಕಂಪನಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅದನ್ನು ಹೊಸ ಎತ್ತರಕ್ಕೆ ಬೆಳೆಸಿದ ಕೀರ್ತಿ ಹೊಂದಿರುವ ರತನ್ ಟಾಟಾ ಅವರ ಹೆಸರು ಎಂದಿಗೂ ಸಹ ವಿಶ್ವದ ಅಗ್ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಾಣಿಸಲೇಇಲ್ಲ. ಇದಕ್ಕೆ ಮೂಲ ಕಾರಣರಾದವರು ಒಬ್ಬ ವ್ಯಕ್ತಿ. 

ಭಾರತಕ್ಕೆ ಅಪಾರ ಕೊಡುಗೆ ನೀಡಿರುವ ರತನ್ ಟಾಟಾ ಕೇವಲ ತಮ್ಮ ಉದ್ಯಮವನ್ನು ಬೆಳಸಿದ್ದಷ್ಟೇ ಅಲ್ಲ ಲಕ್ಷಾಂತರ ಭಾರತೀಯರ ಮನೆ ದೀಪವನ್ನು ಬೆಳಗಿಸಿದ್ದಾರೆ. ಕೇವಲ ಲಾಭದ ದೃಷ್ಟಿಯಿಂದಷ್ಟೇ ದುಡಿಯದೆ ಹಲವು ಜನಪರ ಕೆಲಸಗಳನ್ನು ಮಾಡಿ ಕೊಡುಗೈ ದಾನಿಯಾಗಿ ಎನಿಸಿಕೊಂಡಿರುವ ರತನ್ ಟಾಟಾ ಇಂದು ಮನೆ ಮಾತಾಗಿದ್ದಾರೆ. ಅಷ್ಟೇ ಅಲ್ಲ, ಇವರ ಹೆಸರು ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 

ಉಪ್ಪು ಮಾರಾಟದಿಂದ ಪ್ರಸಿದ್ದ ಕೋಟ್ಯಾಂತರ ರೂ. ಮೌಲ್ಯದ ಕಾರ್ ಗಳ ಮಾರಾಟದವರೆಗೂ ತಮ್ಮದೇ ಆದ ಛಾಪು ಮೂಡಿಸಿರುವ ದೇಶದ ಅತಿ ದೊಡ್ಡ ಉದ್ಯಮ ಸಂಸ್ಥೆಯಾಗಿರುವ ಟಾಟಾ ಸಂಸ್ಥೆ ಇಂದಿಗೂ ಸಹ ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಲ್ಲಿ ಕಾಣಿಸದಿರಲು "ಜಮ್ಸೆಟ್ಜಿ ಟಾಟಾ" ರೂಪಿಸಿದ್ದ ಒಂದು ನಿಯಮವೇ ಪ್ರಮುಖ ಕಾರಣ. 

ಇದನ್ನೂ ಓದಿ- ರತನ್‌ ಟಾಟಾ ನೆನೆದು ಕಣ್ಣಿರಿಟ್ಟ ಖ್ಯಾತ ನಟಿ! ಮಾಜಿ ಪ್ರೇಮಿಯನ್ನು ನೆನೆದು ಭಾವುಕರಾದ್ರು ನಾಯಕಿ

ಜಮ್ಸೆಟ್ಜಿ ಟಾಟಾ ನಿಯಮ: 
ಹೌದು, ವಾಸ್ತವವಾಗಿ ಟಾಟಾ ಸಂಸ್ಥೆ ವಿಶ್ವದ ಹಲವು ದೇಶಗಳಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಿ ಭಾರೀ ಲಾಭಗಳಿಸಿದ್ದರೂ ಅವರು ವಿಶ್ವದ ಟಾಪ್ 10 ಅಗ್ರಗಣ್ಯರ ಪಟ್ಟಿಯಲ್ಲಿ ಕಾಣಿಸದಿರಲು "ಜಮ್ಸೆಟ್ಜಿ ಟಾಟಾ" ಅವರು ರೂಪಿಸಿದ್ದ ನಿಯಮವೇ ಪ್ರಮುಖ ಕಾರಣ. 

ಜಮ್ಸೆಟ್ಜಿ ಟಾಟಾ ಅವರು, ಟಾಟಾ ಸನ್ಸ್‌ನಲ್ಲಿ ಗಳಿಸುವ ಬಹುಪಾಲು ಹಣವನ್ನು ಟಾಟಾ ಟ್ರಸ್ಟ್‌ಗೆ ದಾನ ಮಾಡಬೇಕೆಂದು ನಿಯಮವನ್ನು ರೂಪಿಸಿದ್ದರು. ಹಾಗಾಗಿಯೇ ಸಾಫ್ಟ್‌ವೇರ್‌ನಿಂದ ಕ್ರೀಡೆಯವರೆಗೆ ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಾಂತ ಬಿಸಿನೆಸ್ ಗ್ರೂಪ್ ಆಗಿ ಪರಿವರ್ತಿಸಿದ ಹರಿಕಾರ ರತನ್ ಟಾಟಾ "ಬಿಲಿಯನೇರ್‌ಗಳ ಪಟ್ಟಿಯಲ್ಲಿ" ಕಾಣಿಸುವುದಕ್ಕಿಂತ ಅವರ ದುಡಿಮೆಯ ಬಹುಪಾಲು ಹಣವನ್ನು ಸಮಾಜಕ್ಕಾಗಿ ದಾನ ಮಾಡುವ ಮುಖಾಂತರ ಜನರ ಮನಸ್ಸಿನಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. 

ಇದನ್ನೂ ಓದಿ- ರತನ್ ಟಾಟಾ ತಮ್ಮ ನೆಚ್ಚಿನ 'ನಾಯಿ'ಗೆ ಹುಷಾರಿಲ್ಲ ಎಂದು ವಿದೇಶ ಪ್ರವಾಸವನ್ನೇ ರದ್ದುಗೊಳಿಸಿದ್ದರಂತೆ..!

ಟಾಟಾ ಸಂಸ್ಥೆ ಸಮಾಜಮುಖಿ ಕೆಲಸಗಳಿಂದಾಗಿ ದೇಶದಲ್ಲಿ ಕೋಟ್ಯಾಂತರ ಜನರಿಗೆ ಉದ್ಯೋಗ ದೊರೆತಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ರತನ್ ಟಾಟಾ ತಮ್ಮ ಸಂಪಾದನೆಯ ಶೇ. 50ಕ್ಕಿಂತಲೂ ಹೆಚ್ಚು ಹಣವನ್ನು ದಾನ ಮಾಡುತ್ತಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News