ಡಯಟ್‌ ಮಾಡಿದರೂ ತೂಕ ಹೆಚ್ಚಾಗುತ್ತಿದೆಯೇ..? ಅದಕ್ಕೆ ಈ 5 ಕಾರಣಗಳು ಇರಬಹುದು..!

Weight loss : ಆರೋಗ್ಯವಾಗಿರಲು ಪ್ರತಿನಿತ್ಯ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಇದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. ಇದರಿಂದ ಚಯಾಪಚಯವು ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Oct 16, 2024, 07:56 PM IST
    • ಇತ್ತೀಚಿಗೆ ತೂಕವನ್ನು ಕಳೆದುಕೊಳ್ಳುವುದು ದೊಡ್ಡ ಸವಾಲಾಗಿದೆ.
    • ಅನೇಕ ಜನರು ತಮ್ಮ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.
    • ಈ ಕಾರಣದಿಂದಾಗಿ, ದೇಹದ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ.
ಡಯಟ್‌ ಮಾಡಿದರೂ ತೂಕ ಹೆಚ್ಚಾಗುತ್ತಿದೆಯೇ..? ಅದಕ್ಕೆ ಈ 5 ಕಾರಣಗಳು ಇರಬಹುದು..! title=

Weight Loss tips : ಇತ್ತೀಚಿಗೆ ತೂಕವನ್ನು ಕಳೆದುಕೊಳ್ಳುವುದು ದೊಡ್ಡ ಸವಾಲಾಗಿದೆ. ಬಿಡುವಿಲ್ಲದ ಜೀವನಶೈಲಿ, ತ್ವರಿತ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಅನೇಕ ಜನರಿಗೆ ತಮ್ಮ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಆಹಾರವು ಸಹ ತೂಕ ಹೆಚ್ಚಾಗಲು ಮುಖ್ಯ ಕಾರಣವಾಗಿದೆ. ಈ ಕಾರಣದಿಂದಾಗಿ, ದೇಹದ ಕೊಬ್ಬು ಹೆಚ್ಚಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಸರಿಯಾಗಿ ಡಯಟ್ ಮಾಡುತ್ತಿದ್ದರೂ ತೂಕ ಹೆಚ್ಚಾಗುತ್ತಿದ್ದರೆ ಅದಕ್ಕೆ ಕಾರಣ ಇಲ್ಲಿವೆ ನೋಡಿ..

ತೂಕ ಹೆಚ್ಚಳ: ತೂಕ ಹೆಚ್ಚಾದಂತೆ ದೇಹದ ಆಕಾರ ಕೆಡತುತ್ತದೆ.. ಈ ಕಾರಣದಿಂದಾಗಿ, ಆತ್ಮವಿಶ್ವಾಸ ಕುಗ್ಗುತ್ತದೆ. ಹೆಚ್ಚಿನ ತೂಕದಿಂದಾಗಿ, ಸಣ್ಣ ಕೆಲಸಗಳನ್ನು ಮಾಡುವಾಗಲೂ ಸುಸ್ತು, ಸ್ವಲ್ಪ ನಡೆದರೂ ಅಥವಾ ಮೆಟ್ಟಿಲುಗಳನ್ನು ಹತ್ತಿದರೂ ಉಸಿರಾಟದ ತೊಂದರೆ, ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ:ಗುಲಾಬಿ, ಮಲ್ಲಿಗೆ, ಕನಕಾಂಬರ..! ಯುವತಿಯರೇ ಯಾವ ಹೂವನ್ನು ಮುಡಿದರೆ ಆರೋಗ್ಯ, ಧನಲಾಭ ಗೊತ್ತೆ..?

ಬೊಜ್ಜು ಮಧುಮೇಹ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದೊತ್ತಡ ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ತೂಕ ಹೆಚ್ಚಾಗುವುದನ್ನು ನಿರ್ಲಕ್ಷಿಸಬಾರದು. ಬದಲಿಗೆ ಸರಿಯಾದ ಸಮಯದಲ್ಲಿ ಅದನ್ನು ನಿಯಂತ್ರಿಸುವುದು ಮುಖ್ಯ.

ದೈಹಿಕ ಚಟುವಟಿಕೆಯ ಕೊರತೆ: ನೀವು ಸರಿಯಾದ ಆಹಾರವನ್ನು ಅನುಸರಿಸಿದರೂ, ದೈಹಿಕ ಚಟುವಟಿಕೆ ಇಲ್ಲದಿದ್ದರೆ, ನಿಮ್ಮ ತೂಕ ಹೆಚ್ಚಾಗುತ್ತದೆ. 8 ಗಂಟೆಗಳ ಕಾಲ ನಿರಂತರವಾಗಿ ಕುಳಿತುಕೊಳ್ಳುವ ಜನರು ಈ ಸಮಸ್ಯೆಯನ್ನು ಎದುರಿಸುತ್ತಾರೆ. ನೀವೂ ಸಹ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ಕುಳಿತುಕೊಳ್ಳುವವರಾಗಿದ್ದರೆ, ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಲಘು ವ್ಯಾಯಾಮ, ಜಾಗಿಂಗ್, ವಾಕಿಂಗ್ ಇತ್ಯಾದಿಗಳನ್ನು ಮಾಡುವುದು ಉತ್ತಮ.  

ಹಾರ್ಮೋನ್ ಸಮತೋಲನ: ನೀವು ಸರಿಯಾದ ಆಹಾರ ಮತ್ತು ವ್ಯಾಯಾಮವನ್ನು ಅನುಸರಿಸಿದರೂ ಸಹ ನಿಮ್ಮ ತೂಕ ಹೆಚ್ಚಾಗುತ್ತಿದ್ದೇಯೆ..? ಇದಕ್ಕೆ ಹಾರ್ಮೋನ್ ಅಸಮತೋಲನವೂ ಪ್ರಮುಖ ಕಾರಣವಾಗಿರಬಹುದು. ಥೈರಾಯ್ಡ್ ಮಟ್ಟವು ಸಮತೋಲನದಲ್ಲಿಲ್ಲದಿದ್ದರೆ, ಚಯಾಪಚಯವು ನಿಧಾನಗೊಳ್ಳುತ್ತದೆ. ಈ ಕಾರಣದಿಂದಾಗಿ, ನಿಮ್ಮ ತೂಕವು ಹೆಚ್ಚಾಗಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ:ಗುಲಾಬಿ, ಮಲ್ಲಿಗೆ, ಕನಕಾಂಬರ..! ಯುವತಿಯರೇ ಯಾವ ಹೂವನ್ನು ಮುಡಿದರೆ ಆರೋಗ್ಯ, ಧನಲಾಭ ಗೊತ್ತೆ..?

ನಿದ್ರೆ: ಆರೋಗ್ಯವಾಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಎಷ್ಟು ಮುಖ್ಯವೋ, ವಿಶ್ರಾಂತಿಯೂ ಅಷ್ಟೇ ಮುಖ್ಯ. ಮಲಗುವ ಕ್ರಮ ಚೆನ್ನಾಗಿಲ್ಲದಿದ್ದರೂ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅಂದರೆ ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ, ಅದು ಹಾರ್ಮೋನ್ ಅಸಮತೋಲನಕ್ಕೆ ಕಾರಣವಾಗಬಹುದು. 7 ರಿಂದ 8 ಗಂಟೆ ನಿದ್ದೆ ಮಾಡಿ ಬೆಳಗ್ಗೆ ಸರಿಯಾದ ಸಮಯಕ್ಕೆ ಏಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News