140 ಕೋಟಿ ಬಜೆಟ್‌.. 8 ದೊಡ್ಡ ಸ್ಟಾರ್‌ಗಳು.. ಆದರೂ ಮೂರೇ ದಿನದಲ್ಲಿ ಅಟ್ಟರ್‌ ಪ್ಲಾಪ್‌ ಆದ ಸಿನಿಮಾ!

Biggest Flops of Bollywood Films: ʼಕಳಂಕ್‌ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್‌ ಪ್ಲಾಪ್‌ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು. 

Biggest Flops/Disasters of Bollywood Films at the Box Office: ಕಳೆದ ಕೆಲವು ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಅನೇಕ ಬಿಗ್‌ ಬಜೆಟ್ ಚಿತ್ರಗಳು ಬಂದಿವೆ. ಇವುಗಳಲ್ಲಿ ಕೆಲವು ಹಿಟ್ ಮತ್ತು ಕೆಲವು ಅಟ್ಟರ್‌ ಪ್ಲಾಪ್‌ ಆಇವೆ. ಇನ್ನು ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್‌ ಮಾಡಿದ್ದು, ಚಿತ್ರದ ಕಲೆಕ್ಷನ್ ನೋಡಿದವರೂ ಬೆಚ್ಚಿಬಿದ್ದಿದ್ದಾರೆ. ಬಿಗ್‌ಬಜೆಟ್‌ ಚಿತ್ರಗಳಾದ ಕೈಟ್ಸ್‌, ಗುಜಾರಿಶ್, ಪ್ಲೇಯರ್ಸ್‌, Tezz, ಜೋಕರ್ ಸೇರಿದಂತೆ ಅನೇಕ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿವೆ. ಬಹುವೆಚ್ಚದಲ್ಲಿ ನಿರ್ಮಾಣವಾಗಿದ್ದರೂ, ಸ್ಟಾರ್‌ ನಟರಿದ್ದರೂ ಸಹ ಅದೃಷ್ಟ ಕೈಕೊಟ್ಟು ಅಟ್ಟರ್‌ ಪ್ಲಾಪ್‌ ಆದ ಸಿನಿಮಾಗಳಿಗೆ ಲೆಕ್ಕವಿಲ್ಲ. ಈ ಸಾಲಿಗೆ ಸೇರುವ ಚಿತ್ರದ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತಿದ್ದೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

2019ರಲ್ಲಿ ಬಿಗ್‌ ಬಜೆಟ್‌ನ ಚಿತ್ರವೊಂದು ಥಿಯೇಟರ್‌ಗಳಿಗೆ ಅಪ್ಪಳಿಸಿತು. ಈ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 8 ಜನ ದೊಡ್ಡ ತಾರೆಯರಿದ್ದರು. ಆದರೆ ಬಿಗ್ ಬಜೆಟ್ ಅಥವಾ ಈ ದೊಡ್ಡ ಸ್ಟಾರ್‌ಗಳು ಪ್ರೇಕ್ಷಕರನ್ನು ಥಿಯೇಟರ್ ಗಳತ್ತ ಸೆಳೆಯಲು ಸಾಧ್ಯವಾಗಲಿಲ್ಲ. ಚಿತ್ರಕ್ಕೆ ಹಾಕಿದ ಬಂಡವಾಳವನ್ನೂ ಗಳಿಸಲು ಸಹ ಸಾಧ್ಯವಾಗಲಿಲ್ಲ. ಹೌದು, ನಾವು 2019ರಲ್ಲಿ ಬಿಡುಗಡೆಯಾದ ಬಹುತಾರಾಗಣದ ಚಿತ್ರ 'ಕಳಂಕ್' ಬಗ್ಗೆ ಮಾತನಾಡುತ್ತಿದ್ದೇವೆ.

2 /5

ʼಕಳಂಕ್‌ʼ ಸಿನಿಮಾದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ವರುಣ್ ಧವನ್, ಕುನಾಲ್ ಖೇಮು ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ವಿಶೇಷವಾದದ್ದೇನೂ ಮಾಡಲಾಗಲಿಲ್ಲ. ಅಟ್ಟರ್‌ ಪ್ಲಾಪ್‌ ಆಗುವ ಮೂಲಕ ಈ ಸಿನಿಮಾ ನಿರ್ಮಾಪಕರಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿತು. 

3 /5

ಈ ಚಿತ್ರದ ಬಜೆಟ್ ಬಗ್ಗೆ ಹೇಳುವುದಾದರೆ, 'ಕಳಂಕ್' ಸುಮಾರು 140 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಸಂಜಯ್ ದತ್-ಮಾಧುರಿ ದೀಕ್ಷಿತ್ ಮತ್ತು ಆಲಿಯಾ ಭಟ್ ಅವರಂತಹ ನಟರು ಮತ್ತು ಭವ್ಯವಾದ ಸೆಟ್‌ಗಳ ಹೊರತಾಗಿಯೂ, ಪ್ರೇಕ್ಷಕರು ಚಿತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು. ಇಷ್ಟು ದೊಡ್ಡ ತಾರೆಯರು ಚಿತ್ರದಲ್ಲಿದ್ದರೂ ಪ್ರೇಕ್ಷಕರು ಗಟ್ಟಿಯಾದ ಕಥೆಯಿಲ್ಲವೆಂದು ಹೇಳಿದ್ದರು. ಚಿತ್ರವು ಪ್ರೇಕ್ಷಕರು ಮತ್ತು ಚಲನಚಿತ್ರ ವಿಮರ್ಶಕರಿಂದ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಈ ಚಿತ್ರದ ಕಥೆಯು ತುಂಬಾ ದುರ್ಬಲವಾಗಿತ್ತು, ಇದರಿಂದಾಗಿಯೇ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

4 /5

ಈ ಬಹುತಾರಾಗಣದ ಚಿತ್ರದೊಂದಿಗೆ ಸಂಜಯ್ ದತ್ ಮತ್ತು ಮಾಧುರಿ ದೀಕ್ಷಿತ್ ಜೋಡಿಯು ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿತ್ತು. ಈ ಇಬ್ಬರು ಹಿರಿಯ ನಟರಲ್ಲದೆ ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಕಪೂರ್, ಕೃತಿ ಸನೋನ್, ಕುನಾಲ್ ಖೇಮು, ವರುಣ್ ಧವನ್ ಮತ್ತು ಆಲಿಯಾ ಭಟ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 140 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್‌ ಮಾಡಲು ಸಾಧ್ಯವಾಗಲಿಲ್ಲ. ನಿರ್ಮಾಪಕರು ಈ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು, ಆದರೆ ಶೀಘ್ರದಲ್ಲೇ ಥಿಯೇಟರ್‌ಗಳಲ್ಲಿ ವೀಕ್ಷಕರ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿದಾಗ ಎಲ್ಲಾ ನಿರೀಕ್ಷೆಗಳು ಹುಸಿಯಾದವು. 

5 /5

'ಕಳಂಕ್' ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರದ ಶೀರ್ಷಿಕೆಯನ್ನು ಆರಂಭದಲ್ಲಿ 'ಶಿದ್ದತ್' ಎಂದು ಇಡಲಾಗಿತ್ತು. ನಂತರ ಕೆಲವು ಕಾರಣಗಳಿಂದ ಶೀರ್ಷಿಕೆಯನ್ನು ʼಕಳಂಕ್ʼ ಎಂದು ಬದಲಾಯಿಸಲಾಯಿತು. ಚಿತ್ರದಲ್ಲಿ ಮಾಧುರಿ ದೀಕ್ಷಿತ್ ನಿರ್ವಹಿಸಿದ ಪಾತ್ರವನ್ನು ಮೊದಲು ಶ್ರೀದೇವಿಗೆ ಆಫರ್ ಮಾಡಲಾಗಿತ್ತು. ಅವರು ಈ ಚಿತ್ರಕ್ಕೆ ಸಹಿ ಹಾಕಿದ್ದರು, ಆದರೆ ಚಿತ್ರದ ಶೂಟಿಂಗ್ ಪ್ರಾರಂಭವಾಗುವ ಮೊದಲೇ ಶ್ರೀದೇವಿ ನಿಧನರಾದರು. ಚಿತ್ರದ ಶೂಟಿಂಗ್ ಏಪ್ರಿಲ್ 2018ರಲ್ಲಿ ಪ್ರಾರಂಭವಾಯಿತು, ಆದರೆ ಅದಕ್ಕೂ ಮೊದಲು ಅಂದರೆ ಫೆಬ್ರವರಿ 24ರಂದು ಶ್ರೀದೇವಿ ನಿಧನರಾಗಿದ್ದರು.