BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..!

BSNL: ನಿಮ್ಮ ಆಯ್ಕೆಯ ವಿ‌ಐ‌ಪಿ ಮೊಬೈಲ್ ನಂಬರ್ ಹೊಂದುವ ಆಸೆ ನಿಮಗೂ ಇದ್ದರೆ ಬಿ‌ಎಸ್‌ಎನ್‌ಎಲ್ ನೀಡುತ್ತಿರುವ ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. 

Written by - Yashaswini V | Last Updated : Oct 22, 2024, 12:37 PM IST
  • ಪ್ರಸ್ತುತ ಪ್ರತಿ ಹೆಜ್ಜೆಯಲ್ಲೂ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ
  • ಈಗಾಗಲೇ 4ಜಿ ಸೇವೆಗಾಗಿ ಶರವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ‌ಎಸ್‌ಎನ್‌ಎಲ್
  • BSNL ಮುಂದಿನ ವರ್ಷ ಮಧ್ಯಂತರದ ವೇಳೆಗೆ 5ಜಿ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ.
BSNL ನೀಡುತ್ತಿದೆ ಗ್ರಾಹಕರ ಆಯ್ಕೆಯ VIP ಮೊಬೈಲ್ ನಂಬರ್, ಇಲ್ಲಿದೆ ಅದನ್ನು ಪಡೆಯುವ ಸರಳ ವಿಧಾನ..!  title=

BSNL Fancy Number: ಭಾರತ್ ಸಂಚಾರ್ ನಿಗಮ್ ಲಿಮಿಟೆಡ್- ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಆಕರ್ಷಕ ಕೊಡುಗೆಯೊಂದನ್ನು ಪರಿಚಯಿಸಿದೆ. ಬಿ‌ಎಸ್‌ಎನ್‌ಎಲ್ ನೀಡಿರುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು ಗ್ರಾಹಕರು ತಮ್ಮ ಆಯ್ಕೆಯಂತೆ ಫ್ಯಾನ್ಸಿ ಅಥವಾ ವಿ‌ಐ‌ಪಿ ಮೊಬೈಲ್ ನಂಬರ್ ಹೊಂದಬಹುದಾಗಿದೆ. 

ಈಗಾಗಲೇ 4ಜಿ ಸೇವೆಗಾಗಿ ಶರವೇಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ‌ಎಸ್‌ಎನ್‌ಎಲ್ ಮುಂದಿನ ವರ್ಷ ಮಧ್ಯಂತರದ ವೇಳೆಗೆ 5ಜಿ ಸೇವೆಯನ್ನು ಒದಗಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಪ್ರತಿ ಹೆಜ್ಜೆಯಲ್ಲೂ ಖಾಸಗಿ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್, ಜಿಯೋ ಮತ್ತು ವಿಐ ಕಂಪನಿಗಳಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿ‌ಎಸ್‌ಎನ್‌ಎಲ್ ಗೆ ಪೋರ್ಟ್ ಆಗುತ್ತಿರುವ ಗ್ರಾಹಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಬಿ‌ಎಸ್‌ಎನ್‌ಎಲ್ ಗ್ರಾಹಕರಿಗೆ ಫ್ಯಾನ್ಸಿ ನಂಬರ್ ನೀಡುವ ಯೋಜನೆಯನ್ನು ಆರಂಭಿಸಿದ್ದು ಇನ್ನಷ್ಟು ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. 

ಇದನ್ನೂ ಓದಿ- ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಧಿಕ 3300 GB ಡೇಟಾ ನೀಡುತ್ತಿದೆ ಬಿ‌ಎಸ್‌ಎನ್‌ಎಲ್

ಇ-ಹರಾಜು ಪ್ರಕ್ರಿಯೆ:
ನೀವೂ ಸಹ ಬಿ‌ಎಸ್‌ಎನ್‌ಎಲ್ ನ ಫ್ಯಾನ್ಸಿ ನಂಬರ್ ನೀಡಲು ಬಯಸಿದರೆ ಇ-ಹರಾಜಿನಲ್ಲಿ ಭಾಗವಹಿಸುವ ಮೂಲಕ ನಿಮ್ಮ ಸಂಖ್ಯೆಯನ್ನು ಬುಕ್ ಮಾಡಬಹುದು. ಆದಾಗ್ಯೂ, ಇದಕ್ಕಾಗಿ ಬಿ‌ಎಸ್‌ಎನ್‌ಎಲ್ ಕೆಲವು ನಿಯಮ ಮತ್ತು ಷರತ್ತುಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಬಿ‌ಎಸ್‌ಎನ್‌ಎಲ್ ಚೆನ್ನೈ ತನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. 

VIP ಮೊಬೈಲ್ ನಂಬರ್ ಪಡೆಯಲು ನಿಯಮಗಳು ಮತ್ತು ಷರತ್ತುಗಳು: 
>> ಇ-ಹರಾಜಿನಲ್ಲಿ ಭಾಗವಹಿಸುವ ಮೂಲಕ ಬಳಕೆದಾರರು ತಮ್ಮ ನೆಚ್ಚಿನ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಬಹುದು. 
>> ವಿಐಪಿ ಸಂಖ್ಯೆಯನ್ನು ಪಡೆಯಲು, ಬಳಕೆದಾರರು ಭಾರತೀಯ ಪೌರತ್ವವನ್ನು ಹೊಂದಿರುವುದು ಕಡ್ಡಾಯವಾಗಿದೆ. 
>> ಬಿಡ್ಡಿಂಗ್‌ನಲ್ಲಿ ಭಾಗವಹಿಸಲು, ನೋಂದಣಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 
>> ಒಮ್ಮೆ ಬಿಡ್ಡಿಂಗ್‌ನಲ್ಲಿ ಅರ್ಹತೆ ಪಡೆದರೆ, ಅದನ್ನು ಬದಲಾಯಿಸಲಾಗುವುದಿಲ್ಲ ಅಥವಾ ರದ್ದುಗೊಳಿಸಲಾಗುವುದಿಲ್ಲ. 
>> ಸಂಖ್ಯೆಗಳ ಬಿಡ್ಡಿಂಗ್ ಅನ್ನು H1, H2 ಅಥವಾ H3 ವರ್ಗದಲ್ಲಿ ಮಾಡಲಾಗುತ್ತದೆ. 
>> ಬಿಡ್ಡಿಂಗ್‌ನಲ್ಲಿ ಭಾಗವಹಿಸುವ ಬಳಕೆದಾರರಿಗೆ ರಹಸ್ಯ ಪಿನ್ ನೀಡಲಾಗುತ್ತದೆ. >> ಬಳಕೆದಾರರು ಬಿಡ್ಡಿಂಗ್‌ನಲ್ಲಿ ಗೆಲ್ಲದಿದ್ದರೆ, ಅವರ ನೋಂದಣಿ ಶುಲ್ಕವನ್ನು ಮುಂದಿನ 10 ದಿನಗಳಲ್ಲಿ ಮರುಪಾವತಿಸಲಾಗುತ್ತದೆ.

ಇದನ್ನೂ ಓದಿ- ಸ್ಮಾರ್ಟ್​ಫೋನ್ ಚಾರ್ಜಿಂಗ್ ತುಂಬಾ ನಿಧಾನ ಆಗ್ತಿದ್ಯಾ? ಇವೇ ಪ್ರಮುಖ ಕಾರಣ, ನೀವೇ ಸರಿಪಡಿಸಬಹುದು..! ಹೇಗ್ ಗೊತ್ತಾ?

ಈ ಬಿಡ್ಡಿಂಗ್ ಭಾಗವಹಿಸಲು ನೀವು ಬಿ‌ಎಸ್‌ಎನ್‌ಎಲ್ ವೆಬ್‌ಸೈಟ್‌ಗೆ (https://eauction.bsnl.co.in/) ಭೇಟಿ ನೀಡಿ ಇದರಲ್ಲಿ ಟೆಲಿಕಾಂ ವಲಯವನ್ನು ಆಯ್ಕೆ ಮಾಡಿ ನೋಂದಾಯಿಸಿಕೊಳ್ಳಬೇಕು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News