ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಿಗ್ಗೆಸ್ಟ್‌ ಶೋ ‘ಜೀ ಎಂಟರ್ಟೈನರ್ಸ್'..! ಪ್ರೇಕ್ಷಕರಿಗೆ ಸಿಗಲಿದೆ ಮನರಂಜನೆಯ ಫುಲ್ ಮೀಲ್ಸ್

Zee Entertainers show : ಮನರಂಜನೆಗೆ ಮತ್ತೊಂದು ಹೆಸರೇ ಜೀ ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ನಾನ್ ಫಿಕ್ಷನ್ ಶೋ ಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ. ತನ್ನ ವಿಭಿನ್ನ ಮತ್ತು ವಿಶಿಷ್ಟ ಪ್ರಯತ್ನದಿಂದ ವರುಷಗಳಿಂದ GEC ರಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಂಡು ಬಂದಿರುವ ಜೀ಼ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

Written by - Krishna N K | Last Updated : Oct 30, 2024, 06:46 PM IST
    • ಮನರಂಜನೆಗೆ ಮತ್ತೊಂದು ಹೆಸರೇ ಜೀ ಕನ್ನಡ.
    • GEC ರಾಂಕಿಂಗ್ ನಲ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಂಡು ಬಂದಿರುವ ಜೀ
    • ಜೀ಼ ಕನ್ನಡ ಈಗ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.
ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಿಗ್ಗೆಸ್ಟ್‌ ಶೋ ‘ಜೀ ಎಂಟರ್ಟೈನರ್ಸ್'..! ಪ್ರೇಕ್ಷಕರಿಗೆ ಸಿಗಲಿದೆ ಮನರಂಜನೆಯ ಫುಲ್ ಮೀಲ್ಸ್ title=

ಬೆಂಗಳೂರು : ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಫ್ಯಾಮಿಲಿಗಾಗಿ ಬಿಗ್ಗೆಸ್ಟ್ ಎಂಟರ್ಟೈನ್ ಶೋ ಜೀ ಎಂಟರ್ಟೈನರ್ಸ್ ' ನ ಜೀ ಕನ್ನಡ ವಾಹಿನಿ ಹೊತ್ತುತರುತ್ತಿದೆ ಇದರ ವಿಶೇಷತೆ ಅಂದರೆ ನಿಮ್ಮ ನೆಚ್ಚಿನ ಕಲಾವಿದರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಅಷ್ಟೇ ಅಲ್ಲದೇ, ನಿಮ್ಮನ್ನು ಮನರಂಜಿಸಲು ನಿಮ್ಮ ನೆಚ್ಚಿನ ತಾರೆಯರು ಟಾಸ್ಕ್ ನಲ್ಲಿ ಎಷ್ಟೆಲ್ಲಾ ಸವಾಲುಗಳನ್ನು ಎದುರಿಸುತ್ತಾರೆ ಅಂತ ನಿಮಗೆ ನೋಡಲು ಸಿಗುತ್ತದೆ. ಇದರಲ್ಲಿ 'ಸ್ಮಾರ್ಟರ್, ಸ್ಟ್ರಾಂಗರ್, ಫಾಸ್ಟರ್, ಫ್ಯಾಮಿಲಿಯರ್, ಲಕ್ಕಿಯರ್' ಎಂಬ 5 ಸುತ್ತುಗಳಿದ್ದು ಸೆಲ್ಫ್ ಡಿಫೆನ್ಸ್, ಸಾಂಸ್ಕೃತಿಕ, ಮತ್ತು ಇನ್ನಿತರ ಕ್ಷೇತ್ರಗಳಿಗೆ ಸಂಬಂಧ ಪಟ್ಟ ಟಾಸ್ಕ್ ಇರಲಿದ್ದು ವೀಕ್ಷಕರಿಗೆ ಮನಪೂರ ಮನರಂಜನೆ ಸಿಗೋದಂತು ಗ್ಯಾರಂಟಿ.

ಇದನ್ನೂ ಓದಿ:ದರ್ಶನ್‌ಗೆ ಬೇಲ್‌ ಸಿಗುತ್ತಿದ್ದಂತೆ ರೇಣುಕಾಸ್ವಾಮಿ ತಂದೆ ಶಾಕಿಂಗ್‌ ಹೇಳಿಕೆ..! ತಪ್ಪಿತಸ್ತರಿಗೆ ಕಾನೂನು..

ತನ್ನ ಅಮೋಘ ನಿರೂಪಣಾ ಶೈಲಿ ಮತ್ತು ಮಾತುಗಾರಿಕೆಯಿಂದ ಕನ್ನಡಿಗರ ಮನಕದ್ದ ಖ್ಯಾತ ನಿರೂಪಕ ಅಕುಲ್ ಬಾಲಾಜಿ ಅವರು ಈ ಶೋ ವನ್ನು ನಡೆಸಿಕೊಡಲಿದ್ದಾರೆ. ಈ ಶೋನ ಇನ್ನೊಂದು ಹೈಲೈಟ್ ಅಂದ್ರೆ ವಿಭಿನ್ನ ಸೆಟ್. ಅಷ್ಟೇ ಅಲ್ಲದೇ ಪ್ರತಿ ಸಂಚಿಕೆಯಲ್ಲೂ ತಾರೆಯರ 50 ಫ್ಯಾನ್ ಗಳು ಆಟದಲ್ಲಿ ಪಾಲ್ಗೊಳ್ಳಬಹುದಾಗಿದೆ.
 
ಮೊದಲನೇ ಮತ್ತು ಎರಡನೇ ಸಂಚಿಕೆಗಳನ್ನು ಗಮನವಿಟ್ಟು ವೀಕ್ಷಿಸಿ, ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಮತ್ತು 'ಜೀ ಎಂಟರ್ಟೈನರ್ಸ್ ಪ್ಲೇ ಅಂಡ್ ವಿನ್' ಕಾಂಟೆಸ್ಟ್ ನ ವಿನ್ನರ್ ನೀವಾಗಿ, ನಿಮ್ಮದಾಗಿಸಿಕೊಳ್ಳಿ 55 ಇಂಚ್ ನ LED TV ಯನ್ನು. ಎಗ್ಸೈಟ್ಮೆಂಟ್ ದುಪ್ಪಟ್ಟಾಗಲು ವೀಕ್ಷಿಸಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೀ ಎಂಟರ್ಟೈನರ್ಸ್' ಇದೇ ನವೆಂಬರ್ 2 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News