ನವದೆಹಲಿ: ಮಾರುಕಟ್ಟೆ ಬಂಡವಾಳ ವಿಷಯದಲ್ಲಿ ದೇಶದ ಅತಿ ದೊಡ್ಡ ಕಂಪನಿಯಾಗಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತನ್ನ ತ್ರೈಮಾಸಿಕ ವರದಿ ಬಿಡುಗಡೆಗೂ ಮುನ್ನವೇ ದೊಡ್ಡ ನಿರ್ಣಯವೊಂದನ್ನು ಕೈಗೊಂಡಿದೆ ಎನ್ನಲಾಗಿದೆ. ಹೌದು, RIL ನ ವಿವಿಧ ಡಿವಿಜನ್ ಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನದಲ್ಲಿ ಶೇ.1೦-50 ರಷ್ಟು ಕಡಿತಗೋಳಿಸಲಾಗುತ್ತಿದೆ. ರಿಲಯನ್ಸ್ ನ ಹೈಡ್ರೋಕಾರ್ಬನ್ ಬಿಸಿನೆಸ್ ನಲ್ಲಿ ಕಾರ್ಯನಿರ್ವಹಿಸುವ ಹಾಗೂ ವಾರ್ಷಿಕ 15 ಲಕ್ಷಕ್ಕಿಂತಲೂ ಅಧಿಕ ಸಂಬಳ ಪಡೆಯುವ ನೌಕರರ ವೇತನದಲ್ಲಿ ಶೇ.10 ರಷ್ಟು ಕಡಿತಗೊಳಿಸಲು ನಿರ್ಧರಿಸಲಾಗಿದೆ. ಇದೇ ವೇಳೆ ಬೋರ್ಡ್ ಆಫ್ ಡೈರೆಕ್ಟರ್ಸ್, ಎಕ್ಸಿಕ್ಯೂಟಿವ್ ಡೈರೆಕ್ಟರ್ ಹಾಗೂ ಸೀಯರ್ ಲೀಡರ್ಸ್ ಗಳ ಕಂಪೆನಶೇಷನ್ ನಲ್ಸಿ ಶೇ.30-ಶೇ.50 ಕಡಿತಗೊಲಿಸಲಾಗುತ್ತಿದೆ. ಇನ್ನೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಚೇರ್ಮನ್ ಆಗಿರುವ ಮುಕೇಶ್ ಅಂಬಾನಿ ತಮ್ಮ ಕಂಪೆನಶೇಷನ್ ತೆಗೆದುಕೊಳ್ಳದೆ ಇರಲು ನಿರ್ಧರಿಸಿದ್ದಾರೆ.
ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಕಳೆದ 40 ದಿನಗಳಿಂದ ಲಾಕ್ ಡೌನ್ ಘೋಷಿಸಲಾಗಿದೆ. ವಿಶ್ವಾದ್ಯಂತ ಹಲವಾರು ದೇಶಗಳಲ್ಲಿಯೂ ಕೂಡ ಇದೆ ರೀತಿಯ ಸ್ಥಿತಿ ಇದೆ. ಇದರಿಂದ RILನ ರಿಫೈನಿಂಗ್ ಉದ್ಯಮ ಭಾರಿ ಪ್ರಭಾವಕ್ಕೆ ಒಳಗಾಗಿದ್ದು, ಕಂಪನಿಯ GRMನಲ್ಲಿ ಭಾರಿ ಇಳಿಕೆ ಕಂಡುಬರಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದೇ ರೀತಿ ಕಂಪನಿಯ ರಿಟೇಲ್ ಉದ್ಯಮದ ಮೇಲೂ ಕೂಡ ಪರಿಣಾಮ ಉಂಟಾಗಿದೆ. ಇದೈಂದ RILನ ಲಾಭದ ಮೇಲೆ ಒತ್ತಡ ತೀವ್ರ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿಯ ಮ್ಯಾನೇಜ್ಮೆಂಟ್ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಯಾವ ಲೆವಲ್ ನಲ್ಲಿ ಎಷ್ಟು ಕಡಿತ
ಪಿಟಿಐ ಸುದ್ದಿ ಸಂಸ್ಥೆ ಪ್ರಕಟಗೊಳಿಸಿರುವ ವರದಿಯ ಪ್ರಕಾರ ಕಂಪನಿಯ ಚೇರ್ಮನ್ ಆಗಿರುವ ಮುಕೇಶ್ ಅಂಬಾನಿ ತಮ್ಮ ವೇತನ ಪಡೆಯುತ್ತಿಲ್ಲ ಎನ್ನಲಾಗಿದೆ. ಮುಕೇಶ್ ಅಂಬಾನಿ ವಾರ್ಷಿಕವಾಗಿ 15 ಕೋಟಿ ರೂ. ಸಂಬಳ ಪಡೆಯುತ್ತಾರೆ. ಕಳೆದ ಸತತ 11 ವರ್ಷಗಳಿಂದ ಅವರ ವೇತನದಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ. ಅತ್ತ ಇನ್ನೊಂದೆಡೆ ಹಿರಿಯ ಅಧಿಕಾರಿಗಳ ಕಂಪೆನ್ಶೇಷನ್ ನಲ್ಲಿ ಶೇ.30-50ರಷ್ಟು ವೇತನ ಕಡಿತಗೊಳಿಸಲಾಗುತ್ತಿದೆ. ವಾರ್ಷಿಕವಾಗಿ 15 ಲಕ್ಷಕ್ಕೂ ಅಧಿಕ ಸಂಬಳ ಪಡೆಯುವ ನೌಕರರ ವೇತನದಲ್ಲಿ ಶೇ.10 ರಷ್ಟು ಕಡಿತಗೊಳಿಸಲಾಗುತ್ತಿದೆ. ಆದರೆ, 15 ಲಕ್ಷಕ್ಕಿಂತಲೂ ಕಡಿಮೆ ವಾರ್ಷಿಕ ವೇತನ ಪಡೆಯುವವರ ಸಂಬಳದಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ ಎಂದು ಕಂಪನಿ ಹೇಳಿದೆ. ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆಯಲ್ಲಿ ಭಾರಿ ಇಳಿಕೆಯಾಗಿದೆ. ಇದರಿಂದ ಹೈಡ್ರೋಕಾರ್ಬನ್ ಉದ್ಯಮದ ರೆವಿನ್ಯೂನಲ್ಲಿ ಭಾರಿ ಇಳಿಕೆಯಾಗಿದೆ.