ವಿರಾಟ್ ಕೊಹ್ಲಿ ಅಲ್ಲದಿದ್ರೆ ಯಾರಾಗ್ತಾರೆ 'ಆರ್‌ಸಿ‌ಬಿ' ಕ್ಯಾಪ್ಟನ್?

RCB Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಆಯ್ಕೆ ಮಾಡಿರುವ ತಂಡದ ಬಗ್ಗೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ತಂಡಕ್ಕೆ ಕನ್ನಡಿಗ ಆಟಗಾರರನ್ನು ಆಯ್ಕೆ ಮಾಡಿಲ್ಲದಿರುವ ಬಗ್ಗೆ ತೀವ್ರವಾದ ಆಕ್ಷೇಪಗಳು ಕೇಳಿಬರುತ್ತಿವೆ. ಜೊತೆಗೆ ಯಾವ ಮಾನದಂಡದಲ್ಲಿ ಇಂಥ ತಂಡವನ್ನು ಆಯ್ಕೆ ಮಾಡಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ನಾಯಕನ್ನನ್ನು ಆಯ್ಕೆ ಮಾಡಿಲ್ಲದಿರುವುದಂತೂ ಹೆಚ್ಚು ಚರ್ಚೆ ಆಗುತ್ತಿದೆ. 

Written by - Yashaswini V | Last Updated : Nov 29, 2024, 02:43 PM IST
  • 2025ರ ಐಪಿಎಲ್ ಪಂದ್ಯಾವಳಿಗೆ ಇನ್ನೂ ನಾಯಕನ ಆಯ್ಕೆಯನ್ನು ಸಸ್ಪೆನ್ ಆಗಿ ಇಟ್ಟಿರುವ ಆರ್‌ಸಿಬಿ
  • ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದ ವಿರಾಟ್ ಕೊಹ್ಲಿ 2021ರಲ್ಲಿ ಕ್ಯಾಪ್ಟನ್ಸಿಗೆ ಗುಡ್ ಬೈ ಹೇಳಿದ್ದಾರೆ.
  • ವಿರಾಟ್ ಕೊಹ್ಲಿ ನಂತರ ಆರ್‌ಸಿಬಿ ಕ್ಯಾಪ್ಟನ್ ಆಗಿದ್ದ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡ್ ಮಾಡಿಲ್ಲ.
ವಿರಾಟ್ ಕೊಹ್ಲಿ ಅಲ್ಲದಿದ್ರೆ  ಯಾರಾಗ್ತಾರೆ 'ಆರ್‌ಸಿ‌ಬಿ' ಕ್ಯಾಪ್ಟನ್? title=

IPL 2025:  ಮುಂಬರುವ ಐಪಿಎಲ್ ಟೋರ್ನಿಗೆ ಆರ್‌ಸಿಬಿ ಇನ್ನೂ ನಾಯಕನನ್ನು ಆಯ್ಕೆ ಮಾಡಿಲ್ಲ. ನಾಯಕನ ಆಯ್ಕೆಯನ್ನು ಸಸ್ಪೆನ್ಸ್ ಆಗಿ ಇಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಮತ್ತೆ ವಿರಾಟ್ ಕೊಹ್ಲಿ ಅವರಿಗೆ ಕ್ಯಾಪ್ಟನ್ಸಿ ಕೊಡಲೆಂದೇ ಇನ್ನೂ ಆಯ್ಕೆ ಮಾಡಿಲ್ವಾ? ವಿರಾಟ್ ಕೊಹ್ಲಿ ಒಪ್ಪದಿದ್ದರೆ ಯಾರಾಗ್ತಾರೆ ಎನ್ನುವ ಕುತೂಹಲ ಕೂಡ ಹುಟ್ಟಿಕೊಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಆಯ್ಕೆ ಮಾಡಿರುವ ತಂಡದ ಬಗ್ಗೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ತಂಡಕ್ಕೆ ಕನ್ನಡಿಗ ಆಟಗಾರರನ್ನು ಆಯ್ಕೆ ಮಾಡಿಲ್ಲದಿರುವ ಬಗ್ಗೆ ತೀವ್ರವಾದ ಆಕ್ಷೇಪಗಳು ಕೇಳಿಬರುತ್ತಿವೆ. ಜೊತೆಗೆ ಯಾವ ಮಾನದಂಡದಲ್ಲಿ ಇಂಥ ತಂಡವನ್ನು ಆಯ್ಕೆ ಮಾಡಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ನಾಯಕನ್ನನ್ನು ಆಯ್ಕೆ ಮಾಡಿಲ್ಲದಿರುವುದಂತೂ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ ಈ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. 

ಇದೇ ನವೆಂಬರ್ 24 ಹಾಗು 25ರಂದು ನಡೆದ ಹರಾಜಿನಲ್ಲಿ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ಬಹಳ ಮುಖ್ಯವಾಗಿ ನಾಯಕತ್ವಕ್ಕೆ ಬೇಕಾದ ಆಟಗಾರನನ್ನು ಬಿಡ್ ಮಾಡಿಲ್ಲ. ಕೆ.ಎಲ್. ರಾಹುಲ್, ರಿಷಬ್ ಪಂತ್, ಕೆ.ಎಲ್. ರೌಲ್ ಹಾಗು ಜೋಸ್ ಬಟ್ಲರ್ ಹರಾಜಿನಲ್ಲಿ ಲಭ್ಯ ಇದ್ದರು. ಆರ್‌ಸಿಬಿ ರಿಷಬ್ ಪಂತ್ ಮತ್ತು ಕೆ.ಎಲ್. ರಾಹುಲ್‌ಗಾಗಿ ಫ್ರಾಂಚೈಸಿಗಳೊಂದಿಗೆ ಬಿಡ್ಡಿಂಗ್ ವಾರ್‌ ಮಾಡಿ ಕಡೆಗೆ ಅವರ ಬೆಲೆ 10 ಕೋಟಿ ರೂಪಾಯಿ ಮೀರಿದಾಗ ಸುಮ್ಮನಾಯಿತು. ಜೊತೆಗೆ  ಶ್ರೇಯಸ್ ಅಯ್ಯರ್‌ಗೂ ಬಿಡ್ ಮಾಡಲಿಲ್ಲ.

ಇದನ್ನೂ ಓದಿ- IPL 2025: ಹರಾಜಿನಲ್ಲಿ RCB ಪಾಲಾದ ಆಟಗಾರರು ಯಾರು..? ಇದು ಬೆಂಗಳೂರು ತಂಡ ಖರೀದಿಸಿದ ಪ್ಲೇಯರ್ಸ್‌ ಲಿಸ್ಟ್‌..!

ಇನ್ನು 2022ರಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಹರಾಜು ಪ್ರಕ್ರಿಯೆಗೂ ಮುಂಚೆಯೇ ಕೈಬಿಟ್ಟಿತ್ತು. ಡು ಪ್ಲೆಸಿಸ್ ಅವರನ್ನು ದೆಹಲಿ ಕ್ಯಾಪಿಟಲ್ಸ್  2 ಕೋಟಿ ರೂಪಾಯಿ ಮೂಲ ಬೆಲೆಗೆ ತೆಗೆದುಕೊಂಡಿತು. ಅದಾದ ಮೇಲೆ ಆರ್‌ಸಿಬಿ ನಾಯಕ ಯಾರು ಎಂಬುದು ಈವರೆಗೂ ಗೊತ್ತಾಗಿಲ್ಲ. ವಿರಾಟ್ ಕೊಹ್ಲಿ ತಂಡದ ಹಿರಿಯ ಸದಸ್ಯ. ಆರ್‌ಸಿಬಿ ಜೊತೆಗೆ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ ಅನುಭವವೂ ಅವರಿಗಿದೆ. ಹಾಗಾಗಿ ಮತ್ತೊಮ್ಮೆ ವಿರಾಟ್ ಕೊಹ್ಲಿಗೇ ಕ್ಯಾಪ್ಟನ್ಸಿ ಕೊಡಲಾಗುತ್ತದೆ ಎನ್ನುವ ಊಹಾಪೋಹಗಳಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ನಿರ್ದೇಶಕ ಮೊ ಬಾಬತ್ ‘ವಿರಾಟ್ ಕೊಹ್ಲಿ ತಂಡದ ಹಿರಿಯ ಆಟಗಾರ, ಆದರೆ ನಾವು ಇನ್ನೂ ಯಾರನ್ನು ನಾಯಕನ ಸ್ಥಾನಕ್ಕೆ ತರಬೇಕು ಎಂಬ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ’ ಎಂದು ಹೇಳಿದ್ದಾರೆ.

ಆರ್‌ಸಿಬಿ ಅಭಿಮಾನಿಗಳ ಪೈಕಿ ಹೆಚ್ಚಿನವರು ವಿರಾಟ್ ಕೊಹ್ಲಿ ಮತ್ತೆ ನಾಯಕನ ಆರ್ಮ್‌ಬ್ಯಾಂಡ್ ಧರಿಸುವುದನ್ನು ನೋಡಲು ಬಯಸುತ್ತಾರೆ. 36 ವರ್ಷದ ವಿರಾಟ್ ಕೊಹ್ಲಿ 2013 ರಿಂದ 2021ರವರೆಗೆ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಆರ್‌ಸಿಬಿ 2016 ರಲ್ಲಿ ರನ್ನರ್ ಅಪ್ ಆಗಲು ಮತ್ತು ನಾಲ್ಕು ಬಾರಿ ಪ್ಲೇಆಫ್ ತಲುಪಲು ವಿರಾಟ್ ಕೊಹ್ಲಿ ಕೊಡುಗೆ ಇದೆ. ಹಾಗಾಗಿ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಜೊತೆಗೆ ವಿರಾಟ್ ಕೊಹ್ಲಿ ಅಲ್ಲದಿದ್ದರೆ, ಅವರೇ ಒಪ್ಪದಿದ್ದರೆ ಆರ್‌ಸಿಬಿಯನ್ನು ಮುಂದಿನ ಟೋರ್ನಿಗೆ ಮುನ್ನಡೆಸುವವರು ಯಾರು ಎನ್ನುವ ಪ್ರಶ್ನೆ ಕಾಡುತ್ತಿದೆ. 

ಭುವನೇಶ್ವರ್ ಕುಮಾರ್ 
ಭಾರತದ ಅತ್ಯಂತ ಅನುಭವಿ ವೇಗಿಗಳಲ್ಲಿ ಒಬ್ಬರಾದ ಭುವನೇಶ್ವರ್ ಕುಮಾರ್ ಅವರನ್ನು ಐಪಿಎಲ್ 2025ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 10.75 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿದೆ. ನಿಖರತೆ ಮತ್ತು ಡೆತ್ ಓವರ್‌ಗಳಲ್ಲಿ ರನ್ ನಿಯಂತ್ರಿಸುವುದು ಅವರ ವಿಶೇಷ. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯಕ್ಕೆ ಭುವನೇಶ್ವರ್ ಕುಮಾರ್ ಹೆಸರುವಾಸಿ. ಈಗ ಅವರು ಆರ್‌ಸಿಬಿ ಲೈನ್‌ಅಪ್‌ಗೆ ಪ್ರಮುಖ ಆಸ್ತಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಭುವನೇಶ್ವರ್ ಅವರಿಗೆ ನಾಯಕತ್ವ ಹೊಸದಲ್ಲ, ಅವರು ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್‌ ಕ್ಯಾಪ್ಟನ್ ಆಗಿದ್ದರು. ಭುವನೇಶ್ವರ್ ಕುಮಾರ್ ಶಾಂತ ವರ್ತನೆಗೆ ಹೆಸರಾಗಿದ್ದು, ಒತ್ತಡದ ಸಂದರ್ಭಗಳಲ್ಲಿ ಅವರು ನಿರ್ಧಾರ ತೆಗೆದುಕೊಳ್ಳುವ ರೀತಿ ತಂಡಕ್ಕೆ ಅನುಕೂಲಕರವಾಗಲಿದೆ. ಹಾಗಾಗಿ ವಿರಾಟ್ ಕೊಹ್ಲಿ ಅಲ್ಲದಿದ್ದರೆ ಭುವನೇಶ್ವರ್ ಕುಮಾರ್ ಆರ್‌ಸಿಬಿ ಕ್ಯಾಪ್ಟನ್ ಆಗುವ ಸಾಧ್ಯತೆಗಳಿವೆ. 

ಲಿಯಾಮ್ ಲಿವಿಂಗ್ಸ್ಟೋನ್
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ತಂಡಕ್ಕೆ 8.75 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಖರೀದಿಯಾಗಿದ್ದಾರೆ. ಲಿವಿಂಗ್‌ಸ್ಟೋನ್ ಹಾರ್ಡ್-ಹಿಟ್ಟಿಂಗ್ ಸಾಮರ್ಥ್ಯಗಳಿಗೆ ಹೆಸರುವಾಸಿ. ಅವರು ಇಂಗ್ಲೆಂಡ್ ವೈಟ್-ಬಾಲ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದದ ODI ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಮುನ್ನಡೆಸಿದ್ದ ಲಿವಿಂಗ್‌ಸ್ಟೋನ್  2023ರ ವೈಟಾಲಿಟಿ ಬ್ಲಾಸ್ಟ್‌ನಲ್ಲಿ ಲಂಕಾಶೈರ್ ತಂಡವನ್ನೂ ಲೀಡ್ ಮಾಡಿದ್ದರು. ಇದೀಗ ಆರ್‌ಸಿಬಿ ತಂಡಕ್ಕೆ ನಾಯಕತ್ವ ಕೊಡಬಲ್ಲರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- IPL 2025: ಶಾಸ್ತ್ರಕ್ಕೆ ಒಂದು ಇರ್ಲಿ ಎನ್ನುವಂತೆ ಓರ್ವ ಕನ್ನಡಿಗನನ್ನ ಖರೀದಿಸಿದ RCB: ಆತ ಯಾರು? ಆತನ ಖರೀದಿಗೆ ಫ್ರಾಂಚೈಸಿ ಕೊಟ್ಟ ದುಡ್ಡೆಷ್ಟು?

ಜಿತೇಶ್ ಶರ್ಮಾ
ಈ ಬಾರಿ ಆರ್‌ಸಿಬಿ ಜರ್ಸಿ ತೊಡಲು ತುದಿಗಾಲಲ್ಲಿ ನಿಂತಿರುವ ಜಿತೇಶ್ ಶರ್ಮ ಅವರು ಫಿನಿಶರ್ ಆಗಿ ತಮ್ಮ ಅರ್ಹತೆಯನ್ನು ಸಾಬೀತು ಪಡಿಸಿದ್ದಾರೆ. ಈಗ ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಬಲ್ಲ ಆಟಗಾರ ಎನಿಸಿಕೊಂಡಿದ್ದಾರೆ. ಜಿತೇಶ್ ಶರ್ಮಾ ಅವರನ್ನು ಐಪಿಎಲ್ 2024ರಲ್ಲಿ ಪಿಬಿಕೆಎಸ್‌ ಉಪನಾಯಕನನ್ನಾಗಿ ಮಾಡಿತ್ತು. ಅವರಿಗೆ ನಾಯಕತ್ವದ ಅನುಭವವಿಲ್ಲದಿದ್ದರೂ ಅವಕಾಶ ನೀಡಬಹುದು ಎಂದು ಹೇಳಲಾಗುತ್ತಿದೆ. ಜಿತೇಶ್ ಶರ್ಮಾ ಅವರನ್ನು ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 11 ಕೋಟಿ ರೂಪಾಯಿಗೆ ಖರೀದಿ ಮಾಡಲಾಗಿದೆ. 

ಕೃನಾಲ್ ಪಾಂಡ್ಯ
ಕೃನಾಲ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿ ಫಿನಿಶರ್ ಆಗಿ ಪ್ರಖ್ಯಾತರಾಗಿದ್ದಾರೆ. ನಿರ್ಣಾಯಕ ಸಂದರ್ಭದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಕೈಚಳಕ ತೋರಬಲ್ಲ ಸಾಮರ್ಥ್ಯ ಅವರಿಗಿದೆ. 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ನಾಯಕತ್ವ ವಹಿಸಿ ಆರು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬರೋಡಾ ತಂಡವನ್ನು ಲೀಡ್ ಮಾಡಿದ್ದರು. ಆಗ ಒತ್ತಡದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವ ಅವರ ಸಾಮರ್ಥ್ಯವನ್ನು ಓರೆಗೆ ಅಚ್ಚಲಾಗಿತ್ತು. ಅದರಲ್ಲಿ ಅವರು ಯಶಸ್ವಿಯಾಗಿದ್ದರು. ಅವರ ನಾಯಕತ್ವದಲ್ಲಿ ಬರೋಡಾ ಪ್ರತಿಷ್ಠಿತ ಟಿ20 ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದೆ. ಕೃನಾಲ್ ಪಾಂಡ್ಯ ಅವರ ಸರ್ವಾಂಗೀಣ ಕೌಶಲ್ಯ ಮತ್ತು ನಾಯಕತ್ವದ ಅನುಭವವನ್ನು ಗಮನಿಸಿದರೆ ಅವರನ್ನು ಆರ್‌ಸಿಬಿ ಕ್ಯಾಪ್ಟನ್ಸಿಗೆ ಪರಿಗಣಿಸಬಹುದು ಎನ್ನುವುದು ಕೆಲವರ ವಾದವಾಗಿದೆ.

ಫಿಲ್ ಸಾಲ್ಟ್
ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಾಯಕತ್ವಕ್ಕಾಗಿ ಆರ್‌ಸಿಬಿಯ ಡಾರ್ಕ್ ಹಾರ್ಸ್ ಆಗಬಹುದು ಎನ್ನಲಾಗುತ್ತಿದೆ. ಅವರು ಇತ್ತೀಚಿಗೆ ಆಸ್ಟೇಲಿಯಾದ ವಿರುದ್ಧ T20I ಸರಣಿಯಲ್ಲಿ ಚೊಚ್ಚಲ ಬಾರಿಗೆ ಇಂಗ್ಲೆಂಡ್‌ ನಾಯಕತ್ವವನ್ನು ವಹಿಸಿಕೊಂಡು 1-1ರ ಸಮಬಲ ಸಾಧಿಸಿದರು. ಆರ್‌ಸಿಬಿ ಅವರನ್ನು 11.75 ಕೋಟಿ ರೂಪಾಯಿಗೆ ಖರೀದಿಸಿದೆ. ಫಿಲ್ ಸಾಲ್ಟ್ ಅವರನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News