ನವದೆಹಲಿ: ಇಲ್ಲಿನ ಕರ್ನಾಟಕ ಭವನದ ಸಿಬ್ಬಂದಿಯೊಬ್ಬರಿಗೆ ಶನಿವಾರದಂದು ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.
ಕರ್ನಾಟಕ ಭವನದಲ್ಲಿ ರೂಮ್ ಬಾಯ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 25 ವರ್ಷದ ಯುವಕನಿಗೆ ಸೋಂಕು ತಗುಲಿದೆ ಎನ್ನಲಾಗಿದೆ. ಇತನು ಮೂಲತಃ ದೆಹಲಿಯವನು ಎಂದು ಮೂಲಗಳು ತಿಳಿಸಿವೆ. ಜೂನ್ ರವರಗೆ ಭವನಕ್ಕೆ ಕೆಲಸಕ್ಕೆ ಬಂದಿದ್ದ ಈ ಯುವಕನಿಗೆ ಏಕಾಏಕಿ ಜ್ವರ ಬಂದ ನಂತರ ಪರೀಕ್ಷೆಗೆ ಒಳಪಡಿಸಲಾಯಿತು, ಇದಾದ ನಂತರ ಶನಿವಾರದಂದು ಆತನು ಕೊರೊನಾ ಸೋಂಕು ಒಳಗಾಗಿರುವುದು ಧೃಡವಾಗಿದೆ.
ದೆಹಲಿ ಚಾಣಕ್ಯ ಪುರಿಯ ಕೌಟಿಲ್ಯ ರಸ್ತೆ ಮಾರ್ಗಕ್ಕೆ ಹೊಂದಿಕೊಂಡಿರುವ ಕರ್ನಾಟಕ ಭವನ 1 ಅಲ್ಲಿ ಈ ಯುವಕನು ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದನು. ಈಗ ಕರ್ನಾಟಕ ಭವನದ ಅಧಿಕಾರಿಗಳು ಹೇಳುವಂತೆ ಈ ಯುವಕ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕದ ರಾಜ್ಯ ಸರ್ಕಾರದ ಮೂರು ಭವನಗಳಲ್ಲಿ ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಈಗಾಗಲಿ ಅಲ್ಲಿ ಸ್ಯಾನಿಟೈಸರ್ ಮುಂತಾದ ಸಾಧನಗಳನ್ನು ಇರಿಸಲಾಗಿದೆ.