Bank ಗ್ರಾಹಕರೇ ಎಚ್ಚರ... ಈ ರೀತಿಯ ಸಂದೇಶ ಬಂದರೆ ಅಪ್ಪಿತಪ್ಪಿ ಕೂಡ ಕ್ಲಿಕ್ಕಿಸಬೇಡಿ

ಭಾರತೀಯ ಸ್ಟೇಟ್ ಬ್ಯಾಂಕ್ ಟ್ವೀಟ್ ಮಾಡುವ ಮೂಲಕ ಈ ಎಚ್ಚರಿಕೆ ನೀಡಿದೆ. ಜೂನ್ 21 ರಿಂದ ದೇಶದ ದೊಡ್ಡ ನಗರಗಳಲ್ಲಿ ಸೈಬರ್ ದಾಳಿ ನಡೆಯಲಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ಬ್ಯಾಂಕ್ ಹೇಳಿದೆ.

Last Updated : Jun 22, 2020, 11:30 AM IST
Bank ಗ್ರಾಹಕರೇ ಎಚ್ಚರ... ಈ ರೀತಿಯ ಸಂದೇಶ ಬಂದರೆ ಅಪ್ಪಿತಪ್ಪಿ ಕೂಡ  ಕ್ಲಿಕ್ಕಿಸಬೇಡಿ  title=

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಚ್ಚರಿಕೆಯ ಸಂದೇಶವೊಂದನ್ನು ಜಾರಿಗೊಳಿಸಿದೆ. ಉಚಿತ COVID-19 ಪರೀಕ್ಷೆಯ ಹೆಸರಿನಲ್ಲಿ ಯಾವುದೇ ಇಮೇಲ್ ಬಂದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ, ಇಲ್ಲದಿದ್ದರೆ ನೀವು ಸೈಬರ್ ದಾಳಿಗೆ ತುತ್ತಾಗಬಹುದು ಎಂದು ಎಸ್‌ಬಿಐ ಹೇಳಿದೆ. ಟ್ವೀಟ್ ಮಾಡುವ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್ ಈ ಎಚ್ಚರಿಕೆ ರವಾಹಿಸಿದೆ. ಜೂನ್ 21 ರಿಂದ ದೇಶದ ದೊಡ್ಡ ನಗರಗಳಲ್ಲಿ ಈ ಸೈಬರ್ ದಾಳಿ ನಡೆಯಲಿದೆ ಎಂಬ ಮಾಹಿತಿಯ ಹಿನ್ನೆಲೆ ಈ ಎಚ್ಚರಿಕೆಯ ಸಂದೇಶ ನೀಡಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ.

ಜೂನ್ 21 ರಿಂದ ಸೈಬರ್ ಅಪರಾಧಿಗಳು ಫಿಶಿಂಗ್ ಅಟ್ಯಾಕ್ ಅಭಿಯಾನ  ನಡೆಸಬಹುದು ಎಂದು CERT-in ನಿಂದ ಒಂದು ಆತಂಕಕಾರಿ ವರದಿ ಬಂದಿದೆ ಎಂದು ಎಸ್‌ಬಿಐ ಹೇಳಿದೆ. ಶಂಕಿತ ಇಮೇಲ್ ಐಡಿ ncov2019@gov.in ಅನ್ನು ಬಳಸಲಾಗುತ್ತದೆ. ಇಮೇಲ್‌ನ ವಿಷಯ  'ಫ್ರೀ ಕೋವಿಡ್ 19 ಟೆಸ್ಟಿಂಗ್' ಇರಲಿದೆ ಎನ್ನಲಾಗಿದೆ. ಆದ್ದರಿಂದ, ncov2019@gov.in ಮೇಲ್ ಐಡಿಯಿಂದ ಯಾವುದೇ ಇಮೇಲ್ ಬಂದರೆ ಅದನ್ನು ಕ್ಲಿಕ್ಕಿಸಬೇಡಿ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.

20 ಲಕ್ಷ ನಾಗರಿಕರ ಇ-ಮೇಲ್ ಐಡಿಗಳಿವೆಯಂತೆ
ಸೈಬರ್ ಅಪರಾಧಿಗಳು ತಮ್ಮ ಬಳಿ 20 ಲಕ್ಷ ಜನರು / ನಾಗರಿಕರ ಇಮೇಲ್ ಐಡಿಗಳಿವೆ ಎಂದು ಹೇಳಿಕೊಂಡಿದ್ದಾರೆ ಎಂದು ಎಸ್‌ಬಿಐ ಹೇಳಿದೆ. ಅವರು 'ಫ್ರೀ ಕೋವಿಡ್ 19 ಟೆಸ್ಟಿಂಗ್' ವಿಷಯದ ಅಡಿ ncov2019@gov.in ಮೇಲ್ ಐಡಿಯೊಂದಿಗೆ ಇಮೇಲ್ ಕಳುಹಿಸಲು ಯೋಜನೆ ರೂಪಿಸಿದ್ದಾರೆ. ಇದರದೇ ಒಂದು ಭಾಗವಾಗಿ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್ ಜನರಿಂದ ಅವರ ವೈಯಕ್ತಿಕ ಮಾಹಿತಿಗಳನ್ನು ಇಮೇಲ್ ಮೂಲಕ ಕೇಳಲಾಗುತ್ತಿದೆ ಎಂದು SBI ಹೇಳಿದೆ.

Trending News