ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ವಾಡಿಕೆಯ ಪರೀಕ್ಷೆಗಳಿಗಾಗಿ ಗುರುವಾರದಂದು ದೆಹಲಿಯಲ್ಲಿನ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
"ವಾಡಿಕೆಯ ಪರೀಕ್ಷೆಗಳಿಗಾಗಿ ಅವರನ್ನು ದೆಹಲಿಯ ಖಾಸಗಿ ಸೌಲಭ್ಯಕ್ಕೆ ಸಂಜೆ 7 ಗಂಟೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಆರೋಗ್ಯ ಬುಲೆಟಿನ್ ನಲ್ಲಿ ತಿಳಿಸಿದೆ.
"ಅವರ ಸ್ಥಿತಿ ಪ್ರಸ್ತುತ ಸ್ಥಿರವಾಗಿದೆ" ಎಂದು ಆಸ್ಪತ್ರೆಯ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಡಿ.ಎಸ್. ರಾಣಾ ಅವರು ಬುಲೆಟಿನ್ ನಲ್ಲಿ ಹೇಳಿದ್ದಾರೆ.