ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಭಾನುವಾರ ಬೆಳಗ್ಗೆ11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ದೇಶದ ರೈತರಿಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಕೊಡುಗೆಯನ್ನು ಘೋಷಿಸಲಿದ್ದಾರೆ. ಕೃಷಿ ಮೂಲಸೌಕರ್ಯ ನಿಧಿಯಡಿ (Agricultural Infrastructure Fund), ಇದರಿಂದ ರೈತರಿಗೆ ಅವರ ಬೆಳೆಗೆ ಉತ್ತಮ ಬೆಲೆ ಪಡೆಯಲು ಹಣಕಾಸು ಸೌಲಭ್ಯವನ್ನು ಪಡೆಯುವ ಅವಕಾಶ ಲಭಿಸಲಿದೆ.
8.5 ಕೋಟಿ ರೈತರಿಗೆ 17 ಸಾವಿರ ಕೋಟಿ ರೂ. ಸಿಗುವ ನಿರೀಕ್ಷೆ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ 'ಪಿಎಂ ಕಿಸಾನ್ ಯೋಜನಾ' (PM-Kisan Yojana)ಅಡಿ ದೇಶದ ಒಟ್ಟು 8.5 ಕೋಟಿ ರೈತರಿಗೆ ಯೋಜನೆಯ ಆರನೆಯ ಕಂತಿನ ರೂಪದಲ್ಲಿ 17,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಇರುವ ಲಕ್ಷಾಂತರ ರೈತರು, ಸಹಕಾರಿ ಸಂಘಗಳು ಮತ್ತು ನಾಗರಿಕರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್ ಉಪಸ್ಥಿತರಿರಲಿದ್ದಾರೆ.
ಇದಕ್ಕಾಗಿ ನಿರ್ಮಾಣಗೊಂಡಿದೆ Fund
ಈ ಒಂದು ಲಕ್ಷ ಕೋಟಿ ರೂ.ಗಳ ಹಣಕಾಸು ಸೌಲಭ್ಯವನ್ನು 'ಕೃಷಿ ಮೂಲಸೌಕರ್ಯ ನಿಧಿ'ಗೆ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಈ ನಿಧಿಯು ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಲಿದೆ. ಇದಲ್ಲದೆ ಸಮುದಾಯ ಕೃಷಿ ಸ್ವತ್ತುಗಳಾದ ಕೋಲ್ಡ್ ಸ್ಟೋರೇಜ್, ಸಂಗ್ರಹ ಕೇಂದ್ರಗಳು, ಉತ್ತಮ ಸುಗ್ಗಿಯ ನಂತರದ ನಿರ್ವಹಣೆಗಾಗಿ ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಕಾರಿಯಾಗಲಿದೆ
ಈ ಸೌಲಭ್ಯಗಳನ್ನು ಆರಂಭಗೊಳ್ಳುವುದರಿಂದ ರೈತರಿಗೆ ಅವರು ಬೆಳೆಗೆ ಉತ್ತಮ ಬೆಲೆ ಪಡೆಯಲು ಸಾಧ್ಯವಾಗಲಿದೆ. ಈ ಸೌಲಭ್ಯಗಳಿಂದಾಗಿ, ರೈತರು ತಮ್ಮ ಬೆಳೆಗಳನ್ನು ಸಂಗ್ರಹಿಸಲು ಮತ್ತು ತಮ್ಮ ಸರಕುಗಳನ್ನು ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗಲಿದೆ. ಇದು ಅವರ ಆದಾಯವನ್ನು ಹೆಚ್ಚಿಸುತ್ತದೆ. ಆಹಾರ ಸಂಸ್ಕರಣೆಯ ಅನುಕೂಲದಿಂದ ರೈತರು ತಮ್ಮ ಬೆಳೆಗಳಿಗೆ ಹೆಚ್ಚಿನ ಬೆಲೆ ಪಡೆಯಲು ಸಾಧ್ಯವಾಗಲಿದೆ.
11 ಸರ್ಕಾರಿ ಬ್ಯಾಂಕ್ ಗಳ ಜೊತೆಗೆ ಒಪ್ಪಂದ
ಇದಕ್ಕಾಗಿ ಕೇಂದ್ರ ಸರ್ಕಾರ ಸಾಲ ನೀಡುವ ಹಲವು ಹಣಕಾಸಿನ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು,, ಒಂದು ಲಕ್ಷ ಕೋಟಿ ರೂ. ಸಾಲದ ಯೋಜನೆ ಇಂದು ಆರಂಭಗೊಳ್ಳಲಿದೆ. ಇದರಲ್ಲಿ ಸಾರ್ವಜನಿಕ ವಲಯದ ಒಟ್ಟು 12 ಬ್ಯಾಂಕ್ ಗಳ ಪೈಕಿ 11 ಬ್ಯಾಂಕ್ ಗಳು ಈ ಮೊದಲೇ ಯೋಜನೆಗಾಗಿ ಕೃಷಿ ಸಹಯೋಗ ಹಾಗೂ ರೈತರ ಕಲ್ಯಾಣ ವಿಭಾಗದ ಜೊತೆಗೆ ಮೆಮೊರೆಂಡಂ ಆಫ್ ಅಂಡರ್ ಸ್ಟ್ಯಾಂಡಿಂಗ್ ಗೆ ಸಹಿ ಹಾಕಿವೆ. ಈ ಯೋಜನೆಯಿಂದ ಅತಿ ಹೆಚ್ಚು ರೈತರಿಗೆ ಸಹಾಯವಾಗಬೇಕು ಹಾಗೂ ಅವರ ಆದಾಯದಲ್ಲಿ ಏರಿಕೆಯಾಗಬೇಕು ಎಂಬ ಉದ್ದೇಶದಿಂದ ಈ ಯೋಜನೆಯ ಲಾಭಾರ್ಥಿಗಳಿಗೆ ಶೇ.3 ರಷ್ಟು ಸಬ್ಸಿಡಿ ಹಾಗೂ 2 ಕೋಟಿ ರೂ. ಸಾಲ ಗ್ಯಾರಂಟಿ ನೀಡುವುದಾಗಿ ಹೇಳಿದೆ.