ನವದೆಹಲಿ: ಚೀನಾ ಮೂಲದ ಮೊಬೈಲ್ ಕಂಪನಿ VIVO ಪ್ರಾಯೋಜಕತ್ವದ Indian Premier League 2020ನ 13ನೇ ಆವೃತ್ತಿಯ ಪ್ರಾಯೋಜಕತ್ವದ ಟೈಟಲ್ ಸ್ಪಾನ್ಸರ್ ಶಿಪ್ ನಿಂದ ಮುಕ್ತಗೊಳಿಸುವುದರಿದ BCCIಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ. ಈ ಕುರಿತು ಹೇಳಿಕೆ ನೀಡಿರುವ BCCI ಅಧ್ಯಕ್ಷ ಸೌರವ್ ಗಂಗೂಲಿ, ಪ್ರಸ್ತುತ ಕೇವಲ 2020ರ ಸೀಜನ್ ನಿಂದ ಮಾತ್ರ ಕಂಪನಿ ಹಾಗೂ ಕ್ರಿಕೆಟ್ ಮಂಡಳಿಯ ನಡುವಿನ ಒಪ್ಪಂದಕ್ಕೆ ತಡೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಐಪಿಎಲ್ ನ ಆದಾಯದ ಬಹು ದೊಡ್ಡ ಭಾಗ ಟೈಟಲ್ ಸ್ಪಾನ್ಸರ್ ನಿಂದ ಬರುತ್ತದೆ. ಇದರ ಒಂದು ಭಾಗವನ್ನು ಎಂಟು ಫ್ರೆಂಚೈಸಿಗಳ ಜೊತೆಗೆ ಹಂಚಿಕೆ ಮಾಡಲಾಗುತ್ತದೆ. ವರ್ಷ 2015ರಲ್ಲಿ ವಿವೋ, ಪೆಪ್ಸಿಕೋ ನಂತರ ಟೈಟಲ್ ಸ್ಪಾನ್ಸರ್ ಶಿಪ್ ಪಡೆದುಕೊಂಡಿತ್ತು. ಒಪ್ಪಂದ ಒಪ್ಪಿಕೊಳ್ಳುವ ಎರಡು ವರ್ಷ ಮುಂಚಿತವಾಗಿಯೇ ಇದನ್ನು ಹಿಂಪಡೆಯಲಾಗಿತ್ತು. ಆ ಬಳಿಕ 2017ರಲ್ಲಿ ವಿವೋ ಅಧಿಕೃತವಾಗಿ 2022ರವರೆಗೆ IPL ಸ್ಪಾನ್ಸರ್ ಶಿಪ್ ಪಡೆದುಕೊಂಡಿತ್ತು ಹಾಗೂ ಇದಕ್ಕಾಗಿ 241 ಮಿಲಿಯನ್ ಡಾಲರ್ (ಸುಮಾರು 2,199) ಹಣ ಪಾವತಿಸಿತ್ತು.
ಶನಿವಾರ ಲರ್ನಿಂಗ್ ಫ್ಫ್ಲಿಕ್ಸ್ ಹೆಸರಿನ ಆಪ್ ವತಿಯಿಂದ ಆಯೋಗಿಸಲಾಗಿದ್ದ ವೆಬಿನಾರ್ ಉದ್ದೇಶಿಸಿ ಮಾತನಾಡಿರುವ ಗಂಗೂಲಿ, " ನಾನು ಇದನ್ನು ಒಂದು ಆರ್ಥಿಕ ಸಂಕಷ್ಟ ಎಂದು ಭಾವಿಸುವುದಿಲ್ಲ. ಇದೊಂದು ಚಿಕ್ಕ ವಿಷಯವಾಗಿದ್ದು, ಆಕಸ್ಮಿಕವಾಗಿ ಸಂಭವಿಸಿದೆ. ಕೇವಲ ಒಂದೇ ಒಂದು ವಿಧಾನದ ಮೂಲಕ ನೀವು ಇದನ್ನು ಎದುರಿಸಬಹುದು. ವೃತ್ತಿಪರವಾಗಿ ಮಾತ್ರ ನೀವು ಇದನ್ನು ನಿರ್ವಹಿಸಲು ಸಾಧ್ಯ. ದೊಡ್ಡ ಸಂಕಷ್ಟಗಳು ರಾತ್ರೋ ರಾತ್ರಿ ಸಂಭವಿಸಿ, ಕೇವಲ ಒಂದು ರಾತ್ರಿಯವರೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ದೀರ್ಘಕಾಲದ ವರೆಗೆ ನಡೆಸಲಾಗಿರುವ ಸಿದ್ಧತೆಗಳು ಮಾತ್ರ ನಿಮ್ಮನ್ನು ಹಾನಿಯಿಂದ ಕಾಪಾಡಬಲ್ಲವು ಮತ್ತು ನೀವು ಯಶಸ್ಸಿಗಾಗಿ ನೀವು ಸಿದ್ಧರಾಗಿರುವಿರಿ.
ವಿವೋ ಪ್ರತಿ ವರ್ಷ BCCIಗೆ 440 ಡಾಲರ್ ಹಣ ಪಾವತಿಸಬೇಕು. ಒಂದು ವೇಳೆ ಪರ್ಯಾಯವಾಗಿ ಬಂದ ಕಂಪನಿಯಿಂದ ಮಂಡಳಿ 180 ಕೋಟಿ ರೂ. ಹಣವನ್ನು ಸಂಪಾದಿಸುವಲ್ಲಿ ಯಶಸ್ವಿಯಾದರೆ ಇದು ಮಂಡಳಿಯ ಪಾಲಿಗೆ ಒಂದು ಒಳ್ಳೆಯ ಬೆಳವಣಿಗೆ ಎಂದೇ ಹೇಳಲಾಗುವುದು.