ನವದೆಹಲಿ : ಮುಂದಿನ ಅಧಿಸೂಚನೆ ಹೊರಡಿಸುವವರೆಗೂ ಎಲ್ಲಾ ಪ್ಯಾಸೆಂಜರ್ ರೈಲುಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ (Indian Railways) ಹೇಳಿದೆ. ಆದರೆ ಪ್ರಸ್ತುತ ಚಾಲನೆಯಲ್ಲಿರುವ 230 ವಿಶೇಷ ರೈಲುಗಳ ಸೇವೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ಈಗಾಗಲೇ ನಿರ್ಧರಿಸಿದಂತೆ ಮತ್ತು ಮುಂದಿನ ಸೂಚನೆ ಬರುವವರೆಗೂ ನಿಯಮಿತ ಪ್ರಯಾಣಿಕ ಮತ್ತು ಸ್ಥಳೀಯ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಲಾಕ್‌ಡೌನ್ ಸಮಯದಲ್ಲಿ ಚಲಿಸುತ್ತಿರುವ 230 ವಿಶೇಷ ರೈಲುಗಳ ಚಲನೆ ಮುಂದುವರೆಯಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಮುಂಬೈನಲ್ಲಿ ಸೀಮಿತ ಆಧಾರದ ಮೇಲೆ ಚಲಿಸುವ ಸ್ಥಳೀಯ ರೈಲುಗಳು ಸಹ ಚಾಲನೆಯಲ್ಲಿರುತ್ತವೆ ಎಂದು ಹೇಳಲಾಗಿದೆ.
ಭಾರತೀಯ ರೈಲ್ವೆಯಲ್ಲಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ದೊಡ್ಡ ಆಘಾತ
ವಿಶೇಷ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಮತ್ತು ಅಗತ್ಯತೆಗೆ ಅನುಗುಣವಾಗಿ ಹೆಚ್ಚಿನ ವಿಶೇಷ ರೈಲುಗಳನ್ನು ಓಡಿಸಬಹುದು ಎಂದು ರೈಲ್ವೆ ತಿಳಿಸಿದೆ.
ಆದರೆ ಮುಂದಿನ ಸೂಚನೆ ಬರುವವರೆಗೂ ಲಾಕ್‌ಡೌನ್‌ಗೆ (Lockdown) ಮುಂಚಿತವಾಗಿ ಚಲಿಸುತ್ತಿದ್ದ ಇತರ ಎಲ್ಲಾ ಸಾಮಾನ್ಯ ರೈಲುಗಳು ಮತ್ತು ಉಪನಗರ ರೈಲುಗಳನ್ನು ರದ್ದುಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಹೇಳಿದೆ.
ಇದೇ ವೇಳೆ ಮುಂದಿನ ಆದೇಶದವರೆಗೂ ರೈಲ್ವೆ ತನ್ನ ಎಲ್ಲ ಸೇವೆಗಳನ್ನು ನಿಲ್ಲಿಸಿದೆ ಎಂಬ ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ರೈಲ್ವೆ ನಿರಾಕರಿಸಿದೆ.
ಅಯೋಧ್ಯೆ: ರಾಮಮಂದಿರದಂತೆ ಕಾಣಲಿದೆಯಂತೆ ಹೊಸ ರೈಲ್ವೆ ನಿಲ್ದಾಣ, ಇಲ್ಲಿದೆ ವೈಶಿಷ್ಟ್ಯ
ರೈಲ್ವೆ ತನ್ನ ಒಂದು ಟ್ವೀಟ್‌ನಲ್ಲಿ ಆಗಸ್ಟ್ 30 ರವರೆಗೆ ರೈಲ್ವೆ ಎಲ್ಲಾ ಸಾಮಾನ್ಯ ರೈಲುಗಳನ್ನು ರದ್ದುಗೊಳಿಸಿದೆ ಎಂಬ ಸುದ್ದಿ ಕೆಲವು ಮಾಧ್ಯಮ ಸಂಸ್ಥೆಗಳಿಂದ ಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯ ಯಾವುದೇ ಹೊಸ ಸುತ್ತೋಲೆ ಹೊರಡಿಸಿಲ್ಲ. ವಿಶೇಷ ಮೇಲ್ ಎಕ್ಸ್‌ಪ್ರೆಸ್ ರೈಲುಗಳು ಮುಂದುವರಿಯಲಿವೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.