ವೀಸಾ ನಿರ್ಬಂಧಗಳಲ್ಲಿ ವಿನಾಯಿತಿ ಘೋಷಿಸಿದ ಯುಎಸ್, H-1B ವೀಸಾ ಇರುವವರಿಗೆ ಪ್ರಯೋಜನ

ಎಚ್ -1 ಬಿ ವೀಸಾಗಳ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಯುನೈಟೆಡ್ ಸ್ಟೇಟ್ಸ್ ನಿರ್ಧರಿಸಿದೆ. 

Last Updated : Aug 13, 2020, 10:01 AM IST
  • ಜೂನ್ 22 ರಂದು ಟ್ರಂಪ್ ಈ ವರ್ಷ ಎಚ್ 1-ಬಿ ವೀಸಾಗಳನ್ನು ಅಮಾನತುಗೊಳಿಸುವುದಾಗಿ ಘೋಷಿಸಿದರು.
  • ಇದೀಗ ವೀಸಾ ಹೊಂದಿರುವವರಿಗೆ ಕೆಲವು ಷರತ್ತುಗಳೊಂದಿಗೆ ಅಮೆರಿಕಕ್ಕೆ ಬರಲು ಅವಕಾಶ ನೀಡಲಾಗಿದೆ.
  • ವಿಶೇಷವಾಗಿ ವೀಸಾ ನಿರ್ಬಂಧದಿಂದಾಗಿ ಕೆಲಸ ತೊರೆದವರಿಗೆ ಅವಕಾಶ.
ವೀಸಾ ನಿರ್ಬಂಧಗಳಲ್ಲಿ ವಿನಾಯಿತಿ ಘೋಷಿಸಿದ ಯುಎಸ್, H-1B ವೀಸಾ ಇರುವವರಿಗೆ ಪ್ರಯೋಜನ title=

ವಾಷಿಂಗ್ಟನ್: ಎಚ್ -1 ಬಿ ವೀಸಾಗಳ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಲು ಅಮೆರಿಕ (America) ನಿರ್ಧರಿಸಿದೆ. ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಟ್ರಂಪ್ ಸರ್ಕಾರ ಹೇಳಿದೆ, ಇದರಿಂದಾಗಿ ವೀಸಾ ಹೊಂದಿರುವವರಿಗೆ ಆಯ್ದ ಪ್ರಕರಣಗಳಲ್ಲಿ ಅಮೆರಿಕಕ್ಕೆ ಬರಲು ಅವಕಾಶವಿರಲಿದೆ.

ಯುಎಸ್ನ ಈ ನಿರ್ಧಾರವು ವೀಸಾ (VISA) ನಿರ್ಬಂಧದಿಂದಾಗಿ ವಿಶೇಷವಾಗಿ ಕೆಲಸ ತೊರೆದವರಿಗೆ ಪ್ರಯೋಜನವನ್ನು ನೀಡುತ್ತದೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಹೆಚ್ -1 ಬಿ ವೀಸಾ (H-1B Visa) ಹೊಂದಿರುವವರು ನಿರ್ಬಂಧಗಳನ್ನು ಘೋಷಿಸುವ ಮೊದಲು ತಾವು ಸಂಬಂಧ ಹೊಂದಿದ್ದ ಅದೇ ಕಂಪನಿಯೊಂದಿಗೆ ತಮ್ಮ ಉದ್ಯೋಗವನ್ನು ಮುಂದುವರಿಸಲು ಬಯಸಿದರೆ ಅವರಿಗೆ ಮರಳಲು ಅವಕಾಶವಿರುತ್ತದೆ ಎಂದು ಹೇಳಿದರು. ಅಂತಹ ಹಿಡುವಳಿದಾರರ ಜೊತೆಗೆ ಅವರ ಅವಲಂಬಿತರಿಗೆ (ಸಂಗಾತಿ ಮತ್ತು ಮಕ್ಕಳು) ಸಹ ಅಮೆರಿಕಕ್ಕೆ ಪ್ರಯಾಣಿಸಲು ಅವಕಾಶವಿರುತ್ತದೆ.

'ಯುಎಸ್ (US) ಪ್ರವಾಸವನ್ನು ಮುಂದುವರಿಸಲು ಇಚ್ಛಿಸುವ ಎಚ್ -1 ಬಿ ವೀಸಾ ಹೊಂದಿರುವವರು ತಮ್ಮ ಪ್ರಸ್ತುತ ಉದ್ಯೋಗವನ್ನು ಅದೇ ಉದ್ಯೋಗದಾತರೊಂದಿಗೆ, ಅದೇ ಸ್ಥಾನದಲ್ಲಿ ಮತ್ತು ಅದೇ ವೀಸಾ ವರ್ಗೀಕರಣದೊಂದಿಗೆ ಮುಂದುವರಿಸುತ್ತಾರೆ' ಎಂದು ವಿದೇಶಾಂಗ ಸಚಿವಾಲಯದ ಸಲಹೆಗಾರ ಹೇಳಿದ್ದಾರೆ.

ಟ್ರಂಪ್ ಆಡಳಿತವು ತಾಂತ್ರಿಕ ತಜ್ಞರು, ಉನ್ನತ ಮಟ್ಟದ ವ್ಯವಸ್ಥಾಪಕರು ಮತ್ತು ಎಚ್ -1 ಬಿ ವೀಸಾಗಳನ್ನು ಹೊಂದಿರುವ ಇತರ ಕಾರ್ಮಿಕರಿಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಯುನೈಟೆಡ್ ಸ್ಟೇಟ್ಸ್ನ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಅವರ ಪ್ರಯಾಣ ಅಗತ್ಯವಾಗಿದೆ. ಅಲ್ಲದೆ COVID ಸಾಂಕ್ರಾಮಿಕವನ್ನು ಗಮನದಲ್ಲಿಟ್ಟುಕೊಂಡು,  ಸಾಂಕ್ರಾಮಿಕ ರೋಗದ ಪರಿಣಾಮಗಳನ್ನು ಕಡಿಮೆ ಮಾಡಲು ಅಥವಾ ಸಾಕಷ್ಟು ಸಾರ್ವಜನಿಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆ ನಡೆಸಲು ಅಂತಹ ವೀಸಾ ಹೊಂದಿರುವವರಿಗೆ ಯುಎಸ್ ಗೆ ಬರಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ. ಇದರೊಂದಿಗೆ ಸಾರ್ವಜನಿಕ ಆರೋಗ್ಯ ಅಥವಾ ಆರೋಗ್ಯ ವೃತ್ತಿಪರರಿಗೆ ಅಥವಾ ಸಂಶೋಧಕರಾಗಿ ಕೆಲಸ ಮಾಡಲು ಅವಕಾಶ ದೊರೆಯಲಿದೆ.

ಸಚಿವಾಲಯದ ಪ್ರಕಾರ ಯುಎಸ್ ವಿದೇಶಾಂಗ ನೀತಿ ಉದ್ದೇಶಗಳು/ ಒಪ್ಪಂದಗಳು ಅಥವಾ ಒಪ್ಪಂದದ ಕಟ್ಟುಪಾಡುಗಳನ್ನು ಪೂರೈಸಲು ಯುಎಸ್ ಸರ್ಕಾರಿ ಸಂಸ್ಥೆ ಅಥವಾ ಸಂಸ್ಥೆಯ ಕೋರಿಕೆಯ ಆಧಾರದ ಮೇಲೆ ಪ್ರಯಾಣವನ್ನು ಅನುಮತಿಸಲಾಗುತ್ತದೆ. ಇದು ರಕ್ಷಣಾ ಇಲಾಖೆ ಅಥವಾ ಯಾವುದೇ ಇತರ ಯು.ಎಸ್. ಸರ್ಕಾರಿ ಸಂಸ್ಥೆ ಗೊತ್ತುಪಡಿಸಿದ ವ್ಯಕ್ತಿಗಳು, ಸಂಶೋಧನೆ ನಡೆಸುವುದು, ಐಟಿ ಬೆಂಬಲ / ಸೇವೆಗಳನ್ನು ಒದಗಿಸುವುದು ಅಥವಾ ಯುಎಸ್ ಸರ್ಕಾರಿ ಸಂಸ್ಥೆಗೆ ಅಗತ್ಯವಿರುವ ಯಾವುದೇ ರೀತಿಯ ಯೋಜನೆಗಳೊಂದಿಗೆ ಸಂಬಂಧಿಸಿದೆ ಎಂದು ವಿವರಿಸಲಾಗಿದೆ.

ಶಾಕಿಂಗ್! ಫೆಡರಲ್ ಸೇವೆಯಲ್ಲಿ H1-B ವೀಸಾ ಹೊಂದಿರುವವರ ನೇಮಕ ನಿಷೇಧಿಸಿದ ಟ್ರಂಪ್

ವಿಶೇಷವೆಂದರೆ ಜೂನ್ 22 ರಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈ ವರ್ಷ ಎಚ್ 1-ಬಿ ವೀಸಾಗಳನ್ನು ಅಮಾನತುಗೊಳಿಸುವುದಾಗಿ ಘೋಷಿಸಿದರು. ಟ್ರಂಪ್ ಅವರ ಈ ನಿರ್ಧಾರವು ವಿಶೇಷವಾಗಿ ಭಾರತಕ್ಕೆ ಹಿನ್ನಡೆಯೆಂದೇ ಪರಿಗಣಿಸಲಾಗಿತ್ತು. ಏಕೆಂದರೆ ಭಾರತೀಯ ಐಟಿ ವೃತ್ತಿಪರರು ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಾರೆ. 
 

Trending News