ನವದೆಹಲಿ: ಗಳಿಕೆಯ ವಿಷಯದಲ್ಲಿ, ಭಾರತೀಯ ರೈಲ್ವೆಗಿಂತ ಉತ್ತಮ ಸಾಧನವಿಲ್ಲ. ಇದೀಗ ಈ ನಿಟ್ಟಿನಲ್ಲಿ ರೈಲ್ವೆ ನಿಮಗೆ ಮತ್ತೊಮ್ಮೆ ಗಳಿಸಲು ಅದ್ಭುತ ಅವಕಾಶವನ್ನು ನೀಡುತ್ತಿದೆ. ಭಾರತೀಯ ರೈಲ್ವೆಯ ಈಶಾನ್ಯ ರೈಲ್ವೆ ವಲಯದಲ್ಲಿರುವ ಇಜತ್‌ನಗರ ವಿಭಾಗದ 38 ರೈಲ್ವೆ ನಿಲ್ದಾಣಗಳಲ್ಲಿ 1389 ಜನ ಸಾಮಾನ್ಯ ಟಿಕೆಟ್ ಬುಕಿಂಗ್ ಸೇವಕ(ಜೆಟಿಬಿಎಸ್) ರನ್ನು ನೇಮಿಸಲಾಗುತ್ತಿದೆ. ಏಜೆಂಟರಾಗಿ ಹಣ ಗಳಿಕೆ ಮಾಡಲು ಅವಕಾಶ ನೀಡಲಾಗುತ್ತಿದೆ. ಈ ಆಯ್ದ ಏಜೆಂಟರು ಪ್ರತಿ ಟಿಕೆಟ್ ಮಾರಾಟದ ಮೇಲೆ ಕಮಿಷನ್ ಪಡೆಯಲಿದ್ದಾರೆ. ಈ ಏಜೆಂಟರು ಕಾಯ್ದಿರಿಸದ ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡಬಹುದು. ಈ ಟಿಕೆಟ್ ಬುಕಿಂಗ್ ಸೇವಕರನ್ನು ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದೆ. ಇದೇ ವೇಳೆ, ಈಶಾನ್ಯ ರೈಲ್ವೆಯ ವಾರಣಾಸಿ ವಿಭಾಗದ 43 ನಿಲ್ದಾಣಗಳಲ್ಲಿ ಸ್ಟೇಷನ್ ಟಿಕೆಟ್ ಬುಕಿಂಗ್ ಏಜೆಂಟ್ ರನ್ನು ನೇಮಕ ಮಾಡಲಾಗುತ್ತಿದೆ.
ನಮ್ಮ ಸಹಯೋಗಿ ವೆಬ್ಸೈಟ್ zeebiz.com ಪ್ರಕಾರ, ಈ ಹುದ್ದೆಗಳಿಗೆ ಆಗಸ್ಟ್ 31, 2020 ರಂದು ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು. ಇದೇ ವೇಳೆ, ಅರ್ಜಿಯ ಆಧಾರದ ಮೇಲೆ ಯಾರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿಯನ್ನು 2020 ಆಗಸ್ಟ್ 31 ರಂದು ಮಧ್ಯಾಹ್ನ 3.30 ರೊಳಗೆ ಮಾಹಿತಿ ನೀಡಲಾಗುವುದು.
ಈ ಸ್ಟೇಷನ್ ಗಳ ಮೇಲೂ ಕೂಡ ಏಜೆಂಟ್ ರನ್ನು ನೇಮಿಸಲಾಗುತ್ತಿದೆ
ಈ ಸಾಮಾನ್ಯ ಟಿಕೆಟ್ ಬುಕಿಂಗ್ ಸೇವಕರನ್ನು ಅಥವಾ ಏಜೆಂಟ್ ರನ್ನು (ಜೆಟಿಬಿಎಸ್) ಫರುಖಾಬಾದ್, ಕಾಶಿಪುರ, ಪಿಲಿಭಿತ್, ಬಡಾನ್, ಕನ್ನೌಜ್, ಕಿಚಾ, ಬಾಜ್ಪುರ್, ಸಿಕಂದ್ರ ರೋಡ್, ಕಥಗೊದಾಮ್, ಖತಿಮಾ, ರುದ್ರಪ್ರಯಾಗ್ ಸಿಟಿ, ಫತೇಘಡ, ಉಝಾನಿ, ಹಲ್ದ್ವಾನಿ, ಇಜ್ಜತ್‌ನಗರ, ರಾಮ್ ಗಡ್, ಬಾಹೇರಿ, ಭೋಜಿಪುರಾ, ಸಾರೋ ಸುಕರ್ ಕ್ಷೇತ್ರ, ದರ್ಯಾವ್‌ಗಂಜ್, ಕಲ್ಯಾನ್‌ಪುರ, ಬರಾಜ್‌ಪುರ, ಹತ್ರಾಸ್ ಸಿಟಿ, ಮಥುರಾ ಕಂಟೋನ್ಮೆಂಟ್, ಕಾಯಮ್‌ಗಂಜ್, ಬಿಲ್ಹೌರ್, ಕಾಸ್ಗಂಜ್, ಪಟಿಯಾಲಿ, ಲಾಲ್ ಕುಂವಾ, ಕಮಾಲ್‌ಗಂಜ್, ಬರೇಲಿ ಸಿಟಿ, ಗುರುಸಹಾಯಗಂಜ್, ರೋಶನ್ಪುರ್, ತನಕ್‍ಪುನ್, ಸಾಹವರ್ ಟೌನ್, ರಾವತ್ ಪುರ್, ಗಂಜ್ ಧುಂಡ್ ವಾರಾಗಳಲ್ಲಿ ನೇಮಕ ಮಾಡಲಾಗುತ್ತಿದೆ.
ಇಲ್ಲಿಂದ ನೀವು ಅರ್ಜಿ ಫಾರ್ಮ್ ಗಳನ್ನು ಪಡೆಯಬಹುದು
ಈ ಸಾಮಾನ್ಯ ಟಿಕೆಟ್ ಬುಕಿಂಗ್ ಸೇವಕ (ಜೆಟಿಬಿಎಸ್) ಆಗಲು ಆಸಕ್ತಿ ಹೊಂದಿದವರು, ರೈಲ್ವೆ ವೆಬ್‌ಸೈಟ್ https://ner.indianrailways.gov.in ಗೆ ಹೋಗಿ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು.