ಬೆಂಗಳೂರು: ಬೃಹತ್ ಡ್ರಗ್ಸ್ ಮಾಫಿಯಾ ( Drugs Mafia)ದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸ್ ವಶದಲ್ಲಿರುವ ಚಿತ್ರನಟಿ ರಾಗಿಣಿ ದ್ವಿವೇದಿ (Ragini Dwivedi) ಬೆಂಗಳೂರಿನ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ರಾತ್ರಿ ಕಳೆದಿದ್ದಾರೆ.
ರಾಗಿಣಿ ದ್ವಿವೇದಿ (Ragini Dwivedi)ಗೆ ಸಾಮಾನ್ಯ ಆರೋಪಿಗೆ ನೀಡುವಂತೆ ಮೂರು ಜನ ಇರಬಹುದಾದ ಕೋಣೆಯನ್ನು ನೀಡಲಾಗಿದೆ. ಯಾವುದೇ ರೀತಿಯ ವಿಐಪಿ ಸೌಲಭ್ಯಗಳನ್ನು ಒದಗಿಸಿಲ್ಲ. ರಾಗಿಣಿ ಜೊತೆಗೆ ಭದ್ರತೆಗೆ ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ರಾಗಿಣಿಗೆ ನೀಡಿರುವ ಕೋಣೆಯಲ್ಲಿ ಮಂಚ, ಫ್ಯಾನ್, ಅಟ್ಯಾಚ್ ಟ್ಯಾಯ್ಲೆಟ್ ವ್ಯವಸ್ಥೆ ಇದೆ. ನಿನ್ನೆ ತಡರಾತ್ರಿ 12.15ರ ವೇಳೆಗೆ ರಾಗಿಣಿ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು. ಬಳಿಕ ಅವರಿಗೆ ರಾತ್ರಿ ಊಟಕ್ಕೆ ಅನ್ನ, ಸಾಂಬರ್, ಚಪಾತಿ, ಪಲ್ಯ ಮತ್ತು ಅಪ್ಪಳ ಕೊಡಲಾಗಿತ್ತು.
ನಾನು ಮತ್ತು ರಾಗಿಣಿ ಲೀವಿಂಗ್ ಟುಗೆದರ್ ನಲ್ಲಿದ್ದೇವೆ: ರವಿಶಂಕರ್
ಯಾವುದೇ ರೀತಿಯ ಲಗೇಜ್ ಇಲ್ಲದೇ ಬಂದಿದ್ದ ರಾಗಿಣಿ ಅವರನ್ನು ನೋಡಲು ಮಧ್ಯರಾತ್ರಿಯಲ್ಲಿ ಅವರ ಕುಟುಂಬ ವರ್ಗದವರು ಮಹಿಳಾ ಸಾಂತ್ವಾನ ಕೇಂದ್ರದ ಬಳಿ ಆಗಮಿಸಿದ್ದರು. ತಾಯಿ ರೋಹಿಣಿ ದ್ವಿವೇದಿ, ತಂದೆ ರಾಕೇಶ್ ದ್ವಿವೇದಿ ಅವರು ಮಗಳಿಗಾಗಿ ಪಾಸ್ತಾ, ನೀರಿನ ಬಾಟಲ್ ಹಾಗೂ ಬಟ್ಟೆ ತಂದಿದ್ದರು. ಆದರೆ ಪೊಲೀಸರು ಮಹಿಳಾ ಸಾಂತ್ವನ ಕೇಂದ್ರ ಪ್ರವೇಶಿಸಲು ಮತ್ತು ರಾಗಿಣಿ ಭೇಟಿಯಾಗಲು ಅವಕಾಶ ನಿರಾಕರಿಸಿದರು. ಒಳಗಡೆಗೆ ಪ್ರವೇಶ ಸಿಗದ ಹಿನ್ನಲೆಯಲ್ಲಿ ಪೋಷಕರು ಊಟ ಮತ್ತು ಬಟ್ಟೆಯನ್ನು ವಾಪಸ್ ತೆಗೆದುಕೊಂಡು ಹೋದರು.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಬಂಧನ
ರಾಗಿಣಿ ದ್ವಿವೇದಿ ಅವರನ್ನು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತಂದಿದ್ದ ಡ್ರಗ್ಸ್ ಧಂಧೆ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಇಂದು ಬೆಳಿಗ್ಗೆ 8 ಗಂಟೆಗೆ ಮತ್ತೆ ತಮ್ಮ ಕಚೇರಿಗೆ ಕರೆದುಕೊಂಡು ಹೋಗಲಿದ್ದಾರೆ.
ಡ್ರಗ್ಸ್ ಧಂಧೆ ಹಿನ್ನಲೆಯಲ್ಲಿ ಚಿತ್ರನಟಿ ರಾಗಿಣಿ ಮನೆ ಮೇಲೆ ಪೊಲೀಸ್ ದಾಳಿ
ಡಿಸಿಪಿ ರವಿಕುಮಾರ್ ಮತ್ತು ಇನ್ಸ್ ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ. ರಾಗಿಣಿ ನೀಡುವ ಹೇಳಿಕೆ ಆಧರಿಸಿ ಅವರ ಸಂಪರ್ಕದಲ್ಲಿದ್ದವರ ಪತ್ತೆಕಾರ್ಯಕ್ಕೆ ಜಾಲ ರೂಪಿಸಲಾಗುತ್ತದೆ.