ನವದೆಹಲಿ: ಮಾದಕವಸ್ತು ಪ್ರಕರಣದಲ್ಲಿ ಎನ್ಸಿಬಿ ಪ್ರಸ್ತುತ ದೀಪಿಕಾ ಪಡುಕೋಣೆ ಮತ್ತು ಶ್ರದ್ಧಾ ಕಪೂರ್ ಅವರನ್ನು ವಿಚಾರಣೆ ನಡೆಸುತ್ತಿದೆ. ದೀಪಿಕಾ ಪಡುಕೋಣೆ (Deepika Padukone) ನಿಗದಿತ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ಎನ್ಸಿಬಿ ಕಚೇರಿಯನ್ನು ತಲುಪಿದ್ದಾರೆ. ಶ್ರದ್ಧಾ ಕಪೂರ್ ಮತ್ತು ಸಾರಾ ಅಲಿ ಖಾನ್ ಕೂಡ ಮಧ್ಯಾಹ್ನ 12 ಗಂಟೆಯ ನಂತರ ಆಗಮಿಸಿದ್ದಾರೆ. ದೀಪಿಕಾಳನ್ನು ವಿಚಾರಣೆ ಮಾಡುವಾಗ, ಎನ್ಸಿಬಿ (NCB) ಅವರು ಸಂಪೂರ್ಣ ಸಿದ್ಧತೆಯೊಂದಿಗೆ ಬಂದಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಇದನ್ನು ಓದಿ- NCB ವಿಚಾರಣೆ: ಚಾಟ್ ನಡೆಸುತ್ತಿದ್ದ ವೇಳೆ Deepika ಗ್ರೂಪ್ ಅಡ್ಮಿನ್ ಆಗಿದ್ದರು ಎಂದ ಕರೀಷ್ಮಾ
NCB ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ದೀಪಿಕಾ ಪಡುಕೋಣೆ ಮತ್ತು ಕರಿಷ್ಮಾ ಪ್ರಕಾಶ್ ಅವರು ಸಂಪೂರ್ಣ ಸಿದ್ಧತೆಯೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಎನ್ಸಿಬಿ ಕರಿಷ್ಮಾ ವಿಚಾರಣೆಗಾಗಿ ಸಮನ್ಸ್ ನೀಡಿದ್ದಾಗ, ಆಕೆ ಸ್ವತಃ ಅನಾರೋಗ್ಯದಿಂದ ಬಳಲುತ್ತಿದ್ದಳು ಮತ್ತು ವಿಚಾರಣೆಗೆ ಸಹಾಯ ಮಾಡಲು ಸೆಪ್ಟೆಂಬರ್ 25 ರಂದು ಎನ್ಸಿಬಿ ಕಚೇರಿಯನ್ನು ತಲುಪುವುದಾಗಿ ತನ್ನ ವಕೀಲರ ಮೂಲಕ ಹೇಳಿದ್ದಾಳೆ.
ಇದನ್ನು ಓದಿ- ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡ Rakul Preet ಸಿಂಗ್, ಆದರೆ..?
ಪರಸ್ಪರರ ಸಮ್ಮುಖದಲ್ಲಿ ದೀಪಿಕಾ ಹಾಗೂ ದೀಪಿಕಾ ವಿಚಾರಣೆ
ನೋಟಿಸ್ ಕಳುಹಿಸಿದ ವೇಳೆ ದೀಪಿಕಾ ಗೋವಾದಲ್ಲಿದ್ದರು ಎಂದು ಎನ್ಸಿಬಿ ಹೇಳಿದೆ. ಆದರೆ ಅವಳು ಮುಂಬೈಗೆ ಬಂದಾಗ ಕರಿಷ್ಮಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹೀಗಾಗಿ ಉಭಾಯರು ಸಂಪೂರ್ಣ ಸಿದ್ಧತೆಯೊಂದಿಗೆ ಬಂದಿದ್ದಾರೆ ಎಂದು NCB ಅಧಿಕಾರಿಗಳು ಭಾವಿಸಿದ್ದಾರೆ. ದೀಪಿಕಾ ಅವರ ಡ್ರಗ್ಸ್ ಚಾಟ್ ಬಗ್ಗೆ ಎನ್ಸಿಬಿಯನ್ನು ಪ್ರಶ್ನಿಸಲಾಗಿದೆ. ಈ ಮೊದಲು ಚಾಟ್ ನಡೆಸಿರುವ ಕುರಿತು ದೀಪಿಕಾ ನಿರಾಕರಿಸಿದ್ದಾರೆ. ಆದರೆ ಬಳಿಕ ಅಧಿಕಾರಿಗಳು ಕರಿಷ್ಮಾ ಅವರ ಸಮ್ಮುಖದಲ್ಲಿ ದೀಪಿಕಾಳನ್ನು ಪ್ರಶ್ನಿಸಿದಾಗ, ಸಾಕಷ್ಟು ವಾದ ವಿವಾದಗಳ ಬಳಿಕ 'ಮಾಲ್' ಕುರಿತು ಚಾಟ್ ನಡೆಸಿರುವುದಾಗಿ ದೀಪಿಕಾ ಒಪ್ಪಿಕೊಂಡಿದ್ದಾಳೆ.
ಇದನ್ನು ಓದಿ- ವಿವಾದಾತ್ಮಕ ಔತಣಕೂಟದ ಕುರಿತು ಹೇಳಿಕೆ ನೀಡಿದ Karan Johar
ಗೋವಾದಲ್ಲಿ ಕರೀಷ್ಮಾ ಜೊತೆ ಸೇರಿ ರಣತಂತ್ರ
ಆದರೆ, ಕೆಲ ಪ್ರಶ್ನೆಗಳಿಗೆ ದೀಪಿಕಾ ಮೌನವಾಗಿರುವ ಮೂಲಕ ಉತ್ತರಿಸಿದ್ದಾರೆ. ಡ್ರಗ್ಸ್ ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ದೀಪಿಕಾ ಸರಿಯಾಗಿ ಉತ್ತರಿಸುತ್ತಿಲ್ಲ ಎನ್ನಲಾಗಿದೆ. 'ಹ್ಯಾಶ್' ತರಿಸಿರುವುದಾಗಿ ಒಪ್ಪಿಕೊಂಡ ದೀಪಿಕಾ ಡ್ರಗ್ಸ್ ಬಳಕೆ ಮಾಡಿರುವುದನ್ನು ನಿರಾಕರಿಸಿದ್ದಾಳೆ. ಆದರೆ, ತಾವು ಸಿಗರೆಟ್ ಸೇದಿರುವುದಾಗಿ ದೀಪಿಕಾ ಒಪ್ಪಿಕೊಂಡಿದ್ದಾಳೆ. ದೀಪಿಕಾ ಹಾಗೂ ಕರೀಷ್ಮಾ ಗೊವಾನಲ್ಲಿದ್ದುಕೊಂಡು ರಣತಂತ್ರ ರೂಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಉಬಯರೂ ಕೂಡ ತಮ್ಮ-ತಮ್ಮ ವಕೀಲರ ಸಲಹೆಯನ್ನು ಪಡೆದುಕೊಂಡೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು NCB ಮೂಲಗಳು ತಿಳಿಸಿವೆ.