IPL 2020: ಹೈದರಾಬಾದ್ ವಿರುದ್ಧ ಕೊಲ್ಕತ್ತಾಗೆ 7 ವಿಕೆಟ್ ಗಳ ಗೆಲುವು

ಅಬುದಾಬಿ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 8 ನೇ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಕೊಲ್ಕತ್ತಾಗೆ 7 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

Last Updated : Sep 26, 2020, 11:56 PM IST
IPL 2020: ಹೈದರಾಬಾದ್ ವಿರುದ್ಧ ಕೊಲ್ಕತ್ತಾಗೆ 7 ವಿಕೆಟ್ ಗಳ ಗೆಲುವು  title=
Photo Courtsey : Twitter

ನವದೆಹಲಿ: ಅಬುದಾಬಿ ಶೇಕ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ 8 ನೇ ಐಪಿಎಲ್ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಕೊಲ್ಕತ್ತಾಗೆ 7 ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 142 ರನ್ ಗಳನ್ನು ಗಳಿಸಿತು. ಹೈದರಾಬಾದ್ ಪರವಾಗಿ ಕನ್ನಡಿಗ ಮನೀಶ್ ಪಾಂಡೆ 51 ರನ್ ಗಳಿಸಿಸುವ ಮೂಲಕ ತಂಡಕ್ಕೆ ಆಸರೆಯಾದರು, ಉಳಿದಂತೆ ಡೇವಿಡ್ ವಾರ್ನರ್ 36, ಹಾಗೂ ವ್ರುದ್ದಿಮಾನ್ ಸಹಾ 30 ರನ್ ಗಳ ಕೊಡುಗೆ ನೀಡಿದರು. ಇನ್ನೊಂದೆಡೆ ಕೊಲ್ಕತ್ತಾ ಪರವಾಗಿ ಕಮಿನ್ಸ್ ಅವರು ನಾಲ್ಕು ಓವರ್ ಗಳಲ್ಲಿ ಕೇವಲ 19 ರನ್  ನೀಡಿ ಒಂದು ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡರು.

IPL 2020: ವೈರಲ್ ಆಗುತ್ತಿದೆ MS Dhoni ಅವರ 'ಸೂಪರ್‌ಮ್ಯಾನ್ ಕ್ಯಾಚ್'- watch video

ನಂತರ ಗೆಲುವಿನ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ತಂಡವು ಶುಭ್ಮನ್ ಗಿಲ್ ಅವರ ಅಜೇಯ 70, ಹಾಗೂ ಇಯೋನ್ ಮೋರ್ಗನ್ 42 ಅಜೇಯ ರನ್ ಗಳ ಮೂಲಕ ಇನ್ನು ಎರಡು ಓವರ್ ಗಳು ಬಾಕಿ ಇರುವಂತೆ 3 ವಿಕೆಟ್ ನಷ್ಟಕ್ಕೆ 145 ರನ್ ಗಳಿಸುವ ಮೂಲಕ ತಂಡ ಗೆಲುವಿನ ದಡ ಸೇರಿತು.

Trending News