1972 ರಲ್ಲಿ ಜೋ ಬಿಡನ್ ಅಮೆರಿಕಾದ ಇತಿಹಾಸದಲ್ಲಿ ಐದನೇ-ಕಿರಿಯ ಸೆನೆಟರ್ ಆಗಿ ನೇಮಕವಾಗಿದ್ದರು,ಈಗ ಅವರು ಅತಿ ಹಿರಿಯ ಅಮೆರಿಕಾದ ಅಧ್ಯಕ್ಷರು ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.ಬಿಡೆನ್ ಆವರ ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ದುರಂತ ಮತ್ತು ಸಂಭ್ರಮಗಳು ಜೊತೆಯಾಗಿಯೇ ಬಂದವು ಎಂದು ಹೇಳಬಹುದು.
ಮೊದಲ ಬಾರಿಗೆ ಅವರು ಕಾರ್ ಅಪಘಾತದಲ್ಲಿ ತನ್ನ ಮಗ ಮತ್ತು ಮೊದಲ ಪತ್ನಿ ಹಾಗೂ ಪುತ್ರಿಯನ್ನು ಕಳೆದುಕೊಂಡಿದ್ದರೆ, ಅವರ ವೃತ್ತಿ ಜೀವನದಲ್ಲಿಯೂ ಕೂಡ ಈ ಹಿಂದೆ ಅವರು ತಮ್ಮ ಎರಡು ಅಧ್ಯಕ್ಷೀಯ ಬಿಡ್ ಗಳಲ್ಲ್ಲಿವಿಫಲರಾಗಿದ್ದರು.ಆದಾಗ್ಯೂ ಅವರು ತಮ್ಮ ಹೊಸ ಸಾಧ್ಯತೆಗಳ ಬಗೆಗಿನ ನಂಬಿಕೆಯನ್ನು ಎಂದಿಗೂ ಕೂಡ ಕಳೆದುಕೊಂಡಿರಲಿಲ್ಲ. ಅದೇ ಸಾಧ್ಯತೆಯನ್ನು ಅವರು ಈಗ ಅಮೇರಿಕಾದಲ್ಲಿಯೂ ಎದುರು ನೋಡುತ್ತಿದ್ದಾರೆ. ಕಳೆದ ನಾಲ್ಕು ದಿನಗಳ ಸುದೀರ್ಘ ಮತ ಎಣಿಕೆಯ ನಂತರ ಅವರನ್ನು ವಿಜೇತರೆಂದು ಘೋಷಿಸಲಾಯಿತು.
US Election Result 2020: ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?
ಈ ಹಿಂದೆ ಎರಡು ಬಾರಿ ಅಧ್ಯಕ್ಷ ಪದವಿಗೆ ಪ್ರಯತ್ನಿಸಿ ವಿಫಲ:
ಜೋ ಬಿಡನ್ ಮೊದಲ ಬಾರಿಗೆ 1988 ರಲ್ಲಿ ಡೆಲವೇರ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ನಂತರ ತಮ್ಮ ಬಿಡ್ ಅನ್ನು ಹಿಂತೆಗೆದುಕೊಂಡರು. ಇದಾದ ನಂತರ ಬಿಡೆನ್ 2008 ರಲ್ಲಿ ಬರಾಕ್ ಒಬಾಮ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರು, ಇದು ಅವರ ಎರಡನೇ ಪ್ರಯತ್ನ, ಮತ್ತು ಒಬಾಮಾ ಗೆದ್ದ ನಂತರ, ಬಿಡೆನ್ ಅವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರು ಒಬಾಮಾ ಆಡಳಿತದ ವರ್ಷಗಳ ಕಾರ್ಯನಿರ್ವಾಹಕ ಅನುಭವವನ್ನು ತರುವ ಮೂಲಕ ಕೈಗೆಟುಕುವ ಆರೈಕೆ ಕಾಯ್ದೆ, ಸಲಿಂಗ ವಿವಾಹವನ್ನು ಕಾನೂನು ಬದ್ಧಗೊಳಿಸುವುದು, 2009 ರ ಉದ್ದೀಪನ ಮರುಪಡೆಯುವಿಕೆ ಕಾಯ್ದೆ, ಪ್ಯಾರಿಸ್ ಹವಾಮಾನ ಒಪ್ಪಂದ ಇತ್ಯಾದಿ ಅನೇಕ ಐತಿಹಾಸಿಕ ಕಾಯಿದೆಗಳನ್ನು ಅಂಗೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಅವುಗಳನ್ನು ಟ್ರಂಪ್ ಹಿಂತೆಗೆದುಕೊಂಡಿದ್ದರೂ ಕೂಡ ಜೋ ಬಿಡೆನ್ ಅವರು ಅಧ್ಯಕ್ಷರಾಗಿ ಎತ್ತಿ ಹಿಡಿಯುವ ಜನಸಾಮಾನ್ಯರಿಗೆ ಭರವಸೆ ನೀಡಿದ್ದಾರೆ.
ತೀವ್ರವಾಗಿ ಕಾಡಿದ ವೈಯಕ್ತಿಕ ಜೀವನದಲ್ಲಿನ ದುರಂತ:
ಮೆದುಳಿನ ಕ್ಯಾನ್ಸರ್ ನಿಂದ 2015 ರಲ್ಲಿ ಅವರ ಹಿರಿಯ ಮಗ ಬ್ಯೂ ಅವರ ಸಾವು ಅವರನ್ನು ತೀವ್ರವಾಗಿ ಕಾಡಿತು, ಮತ್ತು ತನ್ನ 30 ನೇ ಹುಟ್ಟುಹಬ್ಬದ ಕೆಲವೇ ವಾರಗಳಲ್ಲಿ 1972 ರಲ್ಲಿ ಕಾರು ಅಪಘಾತದಲ್ಲಿ ತನ್ನ ಮೊದಲ ಹೆಂಡತಿ ಮತ್ತು ಶಿಶು ಮಗಳನ್ನು ಕಳೆದುಕೊಂಡಿದ್ದ ಬಿಡೆನ್, 2016 ರಲ್ಲಿ ಪ್ರೆಸಿಡೆನ್ಸಿಗೆ ಸ್ಪರ್ಧಿಸದಿರಲು ನಿರ್ಧರಿಸಿದರು.
ಡೆಲವೇರ್ ನ ಈ ಅನುಭವಿ ನಾಯಕರಾದ ಜೋ ಬಿಡೆನ್ ವಾಷಿಂಗ್ಟನ್ ವಲಯಗಳಲ್ಲಿ ಪರಿಚಿತ ಮುಖವಾಗಿ ಮಾರ್ಪಟ್ಟಿದ್ದಾರೆ.ಸ್ನೇಹಿತರು ಮತ್ತು ಸಹವರ್ತಿಗಳಲ್ಲಿ ಅವರ ವಿಶಿಷ್ಟ ಆಯ್ಕೆಯು ಒಬಾಮಾ ಆಡಳಿತವು ಕಾನೂನುಗಳನ್ನು ಜಾರಿಗೆ ತರಲು ಸಹಾಯ ಮಾಡಿದೆ.ಬಿಡೆನ್ ರಿಪಬ್ಲಿಕನ್ ಹೆವಿವೇಯ್ಟ್ ಮಿಚ್ ಮೆಕ್ಕಾನ್ನೆಲ್ ಅವರೊಂದಿಗೆ ದೀರ್ಘಕಾಲದ ಸ್ನೇಹಿತರಾಗಿದ್ದರು, ಅವರು 2015 ರಲ್ಲಿ ತಮ್ಮ ಹಿರಿಯ ಮಗ ಬ್ಯೂ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಏಕೈಕ ರಿಪಬ್ಲಿಕನ್ ಆಗಿದ್ದರು.