ವಿಕ್ರಂ ಕೊಠಾರಿ ಜೀವನಗಾಥೆ : 'ಪಾನ್ ಪರಾಗ್' ಒಡೆಯನ ಪುತ್ರನಾಗಿ ಸಾಲ ವಂಚನೆ ಆರೋಪಿವರೆಗೆ...

ಎಲ್ಲರಿಗೂ ಖ್ಯಾತ ಉದ್ಯಮಿಯಾಗಿ ಕಾಣಿಸಿಕೊಂಡಿದ್ದ ಕೊಠಾರಿ ಇದೀಗ ದೇಶದ ಬಹುದೊಡ್ಡ ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ. 

Last Updated : Feb 21, 2018, 12:37 PM IST
  • ಮಾನ್ಸುಖ್ಬಾಯ್ ಕೊಠಾರಿ ಅವರು ಮೊಟ್ಟಮೊದಲ ಬಾರಿಗೆ ಪಾನ್ ಮಸಾಲವನ್ನು ಸ್ಯಾಚೆಟ್ ರೂಪದಲ್ಲಿ ಮಾರಲು ಆರಂಭಿಸಿದರು
  • ವಿಕ್ರಮ್ ಕೊಠಾರಿ ಮತ್ತು ಅವರ ಸಹೋದರ ದೀಪಕ್ ಕೊಠಾರಿ ತಮ್ಮ ತಂದೆ ಮನ್ಸುಖ್ಬಾಯ್ ಅವರೊಂದಿಗೆ ಪಾನ್ ಮಸಾಲಾ ಸಾಮ್ರಾಜ್ಯವನ್ನು ನಿರ್ವಹಿಸಿದರು.
  • 1992 ರಲ್ಲಿ ರೊಟೊಮ್ಯಾಕ್ ಪೆನ್ ಕಂಪೆನಿ ರೂಪುಗೊಂಡಿತು.
  • ಸಮಯ ಕಳೆದಂತೆ ರೊಟೊಮ್ಯಾಕ್ ಪೆನ್ಸ್ ಪ್ರೈವೇಟ್ ಲಿಮಿಟೆಡ್, ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು.
ವಿಕ್ರಂ ಕೊಠಾರಿ ಜೀವನಗಾಥೆ : 'ಪಾನ್ ಪರಾಗ್' ಒಡೆಯನ ಪುತ್ರನಾಗಿ ಸಾಲ ವಂಚನೆ ಆರೋಪಿವರೆಗೆ... title=

ಕಾನ್ಪುರ್: ಇಲ್ಲಿನ ತಿಲಕ್ ನಗರ ಪ್ರದೇಶದಲ್ಲಿ 4 ಸಾವಿರ ಚದರ ವಿಸ್ತಾರದ 'ಸಂತುಷ್ಟಿ' ಭವ್ಯ ಬಂಗಲೆ ಇದುವರೆಗೂ ಎಲ್ಲರ ಗಮನ ಸೆಳೆಯುತ್ತದೆಯಾದರೂ, ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಅಧಿಕಾರಿಗಳಿಗೆ ಸೇರಿದ ವಾಹನಗಳ ಆಗಾಗ ಬಂದು ಹೋಗುತ್ತಿರುವುದು ಆ ಬಂಗಲೆಗೆ ಕಪ್ಪು ಚುಕ್ಕಿ ಇಟ್ಟಂತಾಗಿದೆ. 

ರೊಟೊಮ್ಯಾಕ್ ಕಂಪನಿ ಮುಖ್ಯಸ್ಥ ವಿಕ್ರಮ್ ಕೊಠಾರಿ ಅವರ ಭವ್ಯ ಬಂಗಲೆಯ ವಿಶಾಲವಾದ ಹುಲ್ಲುಹಾಸಿನಲ್ಲಿ ಸದಾ ಕಂಡುಬರುತ್ತಿದ್ದ ಲಕ್ಷುರಿ ಕಾರುಗಳಿಗೆ ಬದಲಾಗಿ, ಈಗ ಭವ್ಯ ಬಂಗಲೆಯ ಹೊರಗೆ ಪೋಲಿಸ್ ವಾಹನಗಳು, ಸುದ್ದಿಗಾರರು, ಕ್ಯಾಮರಾಮನ್ ಗಳೇ ಕಾಣುತ್ತಿದ್ದಾರೆ. ಯಾವ ಸಮಯದಲ್ಲಿ ಏನಾಗಬಹುದು ಎಂಬ ಕುತೂಹಲದೊಂದಿಗೆ ಸುದ್ದಿವಾಹಿನಿಗಳ ವರದಿಗಾರರ ಅಲ್ಲಿನ ಆಗುಹೋಗುಗಳನ್ನು ಬಹಿರಂಗಪಡಿಸುತ್ತಿದ್ದಾರೆ. ಇಂತಹ ತಕ್ಷಣದ ಬದಲಾವಣೆಗೆ ಕಾರಣ ಕೊಠಾರಿ ಅವರ ಸಾಲ ವಂಚನೆ ಪ್ರಕರಣ!

ಹಿಂದಿ ಭಾಷೆಯಲ್ಲಿ ತೃಪ್ತಿ ಎಂಬ ಅರ್ಥವನ್ನು ನೀಡುವ 'ಸಂತುಷ್ಟಿ' ಬಂಗಲೆ, ಇಲ್ಲಿಯವರೆಗೆ ಐಶ್ವರ್ಯ ಮತ್ತು ಯಶಸ್ಸಿಗೆ ಪರ್ಯಾಯ ಎಂಬಂತಿತ್ತು. ಭಾರತೀಯ ಉದ್ಯಮದಲ್ಲಿ ಹೆಸರು ಮಾಡಿರುವ 'ರೊಟೊಮ್ಯಾಕ್' ಪೆನ್ನುಗಳ ಬ್ರಾಂಡ್ನ ಸೃಷ್ಟಿಕರ್ತ ವಿಕ್ರಮ್ ಕೊಠಾರಿ ಈ ಬಂಗಲೆಯ ಮಾಲೀಕರು. 

ನೆರೆಯ ರಾಜೇಂದ್ರ ಕುಮಾರ್ ಸಫರ್ ಹೇಳುವಂತೆ, 1973 ರಲ್ಲಿ ವಿಕ್ರಮ್ ಕೊಠಾರಿ ಅವರ ತಂದೆ ಮನ್ಸುಖ್ಖಾಯ್ ಕೊಠಾರಿ ಅವರು ಪಾನ್ ಮಸಾಲಾ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದರಂತೆ. ಇದಕ್ಕೂ ಮೊದಲು, ಗುಜರಾತ್ನಿಂದ ಬಂದ ಮನ್ಸುಖ್ಬಾಯ್ ಅವರು ನಗರದ ನಾಯಾಗಂಜ್ ಪ್ರದೇಶದಲ್ಲಿ ವಾಸವಿದ್ದುಕೊಂಡು ತೆಂಗಿನ ಎಣ್ಣೆಯನ್ನು ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದರಂತೆ. ನಂತರ ಪಾನ್ ಮಸಾಲಾ ವ್ಯವಹಾರವನ್ನು ಆರಂಭಿಸಿದರು ಎಂದು ಅವರು ಹೇಳುತ್ತಾರೆ.

ಮಾನ್ಸುಖ್ಬಾಯ್ ಕೊಠಾರಿ ಅವರು ಮೊಟ್ಟಮೊದಲ ಬಾರಿಗೆ ಪಾನ್ ಮಸಾಲವನ್ನು ಸ್ಯಾಚೆಟ್ ರೂಪದಲ್ಲಿ ಮಾರಲು ಆರಂಭಿಸಿದರು. ಅವರ ಬ್ರಾಂಡ್ 'ಪಾನ್ ಪರಾಗ್' ಮೂಲಕ ಬಹಳಷ್ಟು ಯಶಸ್ಸು ಗಳಿಸಿದರು.
ಖ್ಯಾತ ಬಾಲಿವುಡ್ ನಟರಾದ ಶಮ್ಮಿ ಕಪೂರ್ ಮತ್ತು ಅಶೋಕ್ ಕುಮಾರ್ ಅವರು ಪಾನ್ ಪರಾಗ್ ಉತ್ಪನ್ನದ ಟಿವಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬ್ಯಾಂಡ್'ನ ಟ್ಯಾಗ್ ಲೈನ್ 'ಭಾರತೀಯೊ ಕಾ ಸ್ವಾಗತ್ ಪಾನ್ ಪರಾಗ್ ಸೆ ಕೀಜಿಯೇ' ಅಂದು ಬಹಳ ಪ್ರಸಿದ್ಧವಾಗಿತ್ತು. ಹಾಗಾಗಿ ಕಾನ್ಪುರ್ ಸ್ವತಃ 'ಪ್ಯಾನ್ ಮಸಾಲಾ ನಗರ' ಎಂದು ಕರೆಯಲ್ಪಟ್ಟಿತು.

ಆ ಸಮಯದಲ್ಲಿ ವಿಕ್ರಮ್ ಕೊಠಾರಿ ಮತ್ತು ಅವರ ಸಹೋದರ ದೀಪಕ್ ಕೊಠಾರಿ ತಮ್ಮ ತಂದೆ ಮನ್ಸುಖ್ಬಾಯ್ ಅವರೊಂದಿಗೆ ಕೈ ಜೋಡಿಸಿ, ನಿರಂತರವಾಗಿ ಬೆಳೆಯುತ್ತಿದ್ದ ಪಾನ್ ಮಸಾಲಾ ಸಾಮ್ರಾಜ್ಯವನ್ನು ನಿರ್ವಹಿಸಿದರು.

ವ್ಯವಹಾರ ವೃದ್ಧಿಸಿದಂತೆ, ಗುಂಪು ವಿಭಜನೆಯಾಗಿ 1992 ರಲ್ಲಿ ರೊಟೊಮ್ಯಾಕ್ ಪೆನ್ ಕಂಪೆನಿ ರೂಪುಗೊಂಡಿತು. ಅದೇ ಸಮಯದಲ್ಲಿ 'Yes' ಶುದ್ಧ ಕುಡಿಯುವ ನೀರಿನ ಬ್ರ್ಯಾಂಡ್ ಕೂಡ ಆರಂಭವಾಯಿತು.

1999 ರಲ್ಲಿ, ಇಬ್ಬರೂ ಸಹೋದರರು ತಮ್ಮ ವ್ಯವಹಾರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ನಿರ್ಧರಿಸಿದರು. ಅದರ ಫಲವಾಗಿ, ಹಿರಿಯ ಸಹೋದರ ವಿಕ್ರಮ್ ಕೊಠಾರಿ ಸ್ಟೇಷನರಿ ಮತ್ತು ಪೆನ್ಸ್ ಉದ್ಯಮದ ಉಸ್ತುವಾರಿಯನ್ನು ವಹಿಸಿಕೊಂಡರು ಮತ್ತು ಕಿರಿಯ ಸಹೋದರ ದೀಪಕ್ ಕೊಠಾರಿ ಪಾನ್ ಮಸಾಲಾ ಸಾಮ್ರಾಜ್ಯದ ನಿಯಂತ್ರಣವನ್ನು ಸಾಧಿಸಿದರು, ಎಂದು ಸಫರ್ ಹೇಳುತ್ತಾರೆ.

'ರೊಟೊಮ್ಯಾಕ್' ಬರವಣಿಗೆಯ ಉಪಕರಣ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿ, ತನ್ನ ಅಧ್ಬುತ ಯಶಸ್ಸು ಕಂಡಿತು. ಇದರ ಪ್ರಚಾರದ ಟ್ಯಾಗ್ ಲೈನ್ - 'Likhtey, likhtey, love ho jaye', ಹಲವರ ಮನದ ಮಾತಾಗಿಯೂ ಸ್ಥಾನ ಪಡೆಯಿತು. ಸಲ್ಮಾನ್ ಖಾನ್ ಮತ್ತು ರವೀನಾ ಟಂಡನ್ ಅವರ ಬ್ರಾಂಡ್ ಅಂಬಾಸಿಡರ್ಗಳಾಗಿದ್ದರು.

ಸಾಮಾಜಿಕ ಮನ್ನಣೆ, ವಾಣಿಜ್ಯ ಯಶಸ್ಸಿನಿಂದಾಗಿ ಲಯನ್ಸ್ ಕ್ಲಬ್ ಸಂಸ್ಥೆಯ 'ಗುಡ್ವಿಲ್ ಅಂಬಾಸಿಡರ್' ಆಗಿ ವಿಕ್ರಂ ಕೊಠಾರಿ ನೇಮಕವಾದರು. 

ಸಮಯ ಕಳೆದಂತೆ ರೊಟೊಮ್ಯಾಕ್ ಪೆನ್ಸ್ ಪ್ರೈವೇಟ್ ಲಿಮಿಟೆಡ್, ರೊಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿತು. ವಿಕ್ರಮ್ ಕೊಠಾರಿ ಮತ್ತಷ್ಟು ಯಶಸ್ಸು ಗಳಿಸುವ ನಿಟ್ಟಿನಲ್ಲಿ ರಿಯಲ್ ಎಸ್ಟೇಟ್, ಉಕ್ಕು ಮತ್ತು ಮೂಲಸೌಕರ್ಯಗಳಂತಹ ಕ್ಷೇತ್ರಗಳಿಗೆ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದರು. 

ಆದರೆ, ಇಷೆಲ್ಲಾ ಯಶಸ್ಸನ್ನು ಗಳಿಸಿದ್ದರೂ, ವಿಕ್ರಮ ಕೋಠಾರಿ ಸ್ವತಃ ಸಾವಿರ ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಆರೋಪ ಎದುರಿಸುತ್ತಿದ್ದಾರೆ. ಎಲ್ಲರಿಗೂ ಖ್ಯಾತ ಉದ್ಯಮಿಯಾಗಿ ಕಾಣಿಸಿಕೊಂಡಿದ್ದ ಕೊಠಾರಿ ಇದೀಗ ದೇಶದ ಬಹುದೊಡ್ಡ ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ. 

ನೆರೆಯ ಸಫರ್ ಪ್ರಕಾರ, ವಿಕ್ರಮ್ ಕೊಠಾರಿ ಅವರಿಗೆ ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಅವರ ಇಬ್ಬರು ಹೆಣ್ಣುಮಕ್ಕಳಿಗೂ ವಿವಾಹವಾಗಿದೆ. 

Trending News