ಮಾಸ್ಕೋ: ಔತಣಕೂಟವೊಂದರಲ್ಲಿ ಮದ್ಯ ಮುಗಿದ ಕಾರಣ ಜನರು ಹ್ಯಾಂಡ್ ಸ್ಯಾನಿಟೈಸರ್ (Hand Sanitizer) ಸೇವಿಸಿದ ಘಟನೆ ನಡೆದಿದೆ. ಆದರೆ, ಇದು ಅವರ ಜೀವಕ್ಕೆ ಕುತ್ತು ತಂದಿದೆ. ಈ ವೇಳೆ ಸ್ಯಾನಿಟೈಸರ್ ಸೇವಿಸಿದ ಏಳು ಜನ ಸಾವನ್ನಪ್ಪಿದ್ದು, ಇಬ್ಬರು ಕೊಮಾ ಸ್ಥಿತಿಗೆ ಜಾರಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ.
ಇದನ್ನು ಓದಿ- ಸ್ನ್ಯಾನಿಟೈಸರ್ ನ ಅತಿಯಾದ ಬಳಕೆ ಆರೋಗ್ಯಕ್ಕೆ ಅಪಾಯಕಾರಕ: ಆರೋಗ್ಯ ಸಚಿವಾಲಯ
ರಷ್ಯಾದ ಪಶ್ಚಿಮ ಭಾಗದಲ್ಲಿರುವ ತಾತಿನ್ಸಿಕಿ ಜಿಲ್ಲೆಯ ತೊಂತೊರ್ ಗ್ರಾಮದಲ್ಲಿ ಒಂದು ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಪಾರ್ಟಿಯಲ್ಲಿ ಶಾಮೀಲಾಗಿದ್ದ 9 ಜನರು ಕುಡಿದ ಸ್ಯಾನಿಟೈಸರ್ ನಲ್ಲಿ ಶೇ.69 ರಷ್ಟು ಮಿಥೆನಾಲ್ ಇತ್ತು. ಹ್ಯಾಂಡ್ ಸ್ಯಾನಿಟೈಸರ್ ಕುಡಿದ ಜನರು ವಿಷಬಾಧೆಯಿಂದ ಸಾವನ್ನಪ್ಪಿದ್ದಾರೆ.
ಇದನ್ನು ಓದಿ- 200 ಮಿ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ನ್ನು 100 ರೂ.ಗಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ - ಕೇಂದ್ರ
ಈ ಪ್ರಕರಣದಲ್ಲಿ ಸ್ಯಾನಿಟೈಸರ್ ನಿಂದ ವಿಷಬಾಧೆಯಾದ ಕಾರಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಫೆಡರಲ್ ಪಬ್ಲಿಕ್ ಹೆಲ್ತ್ ವಾಚ್ ಡಾಗ್ ಹೇಳಿದೆ. ಬಳಿಕ ಸ್ಥಳೀಯ ಆಡಳಿತ ಹ್ಯಾಂಡ್ ಸ್ಯಾನಿಟೈಸರ್ ಸೇವಿಸಬೇಡಿ ಎಂದು ನಾಗರಿಕರಿಗೆ ಮನವಿ ಮಾಡಿದೆ.
ಇದನ್ನು ಓದಿ- Coronavirus ತಪ್ಪಿಸಲು ಯಾವ ಹ್ಯಾಂಡ್ ಸ್ಯಾನಿಟೈಜರ್ ಪ್ರಯೋಜನಕಾರಿ
ರಷ್ಯಾದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿಗೆ 20,64,748 ಮಂದಿ ಗುರಿಯಾಗಿದ್ದು, ಅವರಲ್ಲಿ 35,778 ಜನ ಸಾವನ್ನಪ್ಪಿದ್ದಾರೆ. ಭಾನುವಾರ ಒಂದೇ ದಿನದಲ್ಲಿ ರಷ್ಯಾದಲ್ಲಿ ಕೊರೊನಾ ಸೋಂಕಿನ 24,822 ಹೊಸ ಪ್ರಕರಣಗಳು ಪತ್ತೆಯಾಗಿವೆ.